AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kendada Seragu: ‘ಈ ಹುಡುಗಿ ಎಷ್ಟು ಚೆಂದ..’ ಎಂದು ಕುಣಿದ ಹರೀಶ್ ಅರಸು-ಪೂರ್ಣಿಮಾ; ಕೆಂಡದ ಸೆರಗು ಚಿತ್ರದಿಂದ ಹೊಸ ಹಾಡು

ಶೀರ್ಷಿಕೆಯಿಂದಲೇ ಕೌತುಕ ಮೂಡಿಸಿರುವ ‘ಕೆಂಡದ ಸೆರಗು’ ಸಿನಿಮಾಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ‘ಈ ಹುಡುಗಿ ಎಷ್ಟು ಚಂದ..’ ಹಾಡಿನ ಲಿರಿಕಲ್​ ವಿಡಿಯೋ ರಿಲೀಸ್​ ಮಾಡಲಾಗಿದೆ.

Kendada Seragu: ‘ಈ ಹುಡುಗಿ ಎಷ್ಟು ಚೆಂದ..’ ಎಂದು ಕುಣಿದ ಹರೀಶ್ ಅರಸು-ಪೂರ್ಣಿಮಾ; ಕೆಂಡದ ಸೆರಗು ಚಿತ್ರದಿಂದ ಹೊಸ ಹಾಡು
ಹರೀಶ್​ ಅರಸು, ಪೂರ್ಣಿಮಾ
ಮದನ್​ ಕುಮಾರ್​
|

Updated on: Jul 16, 2023 | 9:56 AM

Share

ಕನ್ನಡದಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ಮಾತಿದೆ. ಆ ಕೊರತೆಯನ್ನು ನೀಗಿಸುವ ಪ್ರಯತ್ನದಲ್ಲಿ ಒಂದು ಹೆಜ್ಜೆ ಎಂಬ ರೀತಿಯಲ್ಲಿ ‘ಕೆಂಡದ ಸೆರಗು’ ಸಿನಿಮಾ (Kendada Seragu Movie) ಸಿದ್ಧವಾಗುತ್ತಿದೆ. ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ ಕಾದಂಬರಿಯನ್ನು ಆಧರಿಸಿ, ಅದೇ ಶೀರ್ಷಿಕೆಯಲ್ಲಿ ಸಿನಿಮಾ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಮಾಲಾಶ್ರೀ (Malashree), ಭೂಮಿ ಶೆಟ್ಟಿ, ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ ಮುಂತಾದವರು ನಟಿಸಿದ್ದಾರೆ. ಹಾಡುಗಳ ಮೂಲಕ ಈ ಸಿನಿಮಾ ಗಮನ ಸೆಳೆಯುತ್ತಿದೆ. ‘ಕೆಂಡದ ಸೆರಗು’ ಚಿತ್ರದ ಎರಡನೇ ಸಾಂಗ್​ ರಿಲೀಸ್​ ಆಗಿದೆ. ಈ ಹಾಡಿನಲ್ಲಿ ಹರೀಶ್ ಅರಸು (Harish Arasu) ಮತ್ತು ಪೂರ್ಣಿಮಾ ಅವರು ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದಾರೆ. ‘ಶ್ರೀಮುತ್ತು ಮ್ಯೂಸಿಕ್​’ ಮೂಲಕ ಈ ಗೀತೆ ಬಿಡುಗಡೆ ಆಗಿದೆ.

ಶೀರ್ಷಿಕೆಯಿಂದಲೇ ಕೌತುಕ ಮೂಡಿಸಿರುವ ‘ಕೆಂಡದ ಸೆರಗು’ ಸಿನಿಮಾದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದರ ಜೊತೆಯಲ್ಲೇ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಕಾದಂಬರಿ ಆಧಾರಿತವಾದ ಈ ಸಿನಿಮಾ ಚಿತ್ರೀಕರಣ ಮುಗಿದಿದೆ. ಕೊನೇ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ತೊಡಗಿಕೊಂಡಿದೆ. ‘ಈ ಹುಡುಗಿ ಎಷ್ಟು ಚಂದ..’ ಎಂಬ ಹಾಡಿನ ಲಿರಿಕಲ್​ ವಿಡಿಯೋ ರಿಲೀಸ್​ ಮಾಡಲಾಗಿದೆ.

ಇದನ್ನೂ ಓದಿ: ಕುಸ್ತಿ ಕುರಿತ ಕತೆಯುಳ್ಳ ಸಿನಿಮಾದಲ್ಲಿ ನಟಿ ಮಾಲಾಶ್ರೀ, ಡಬ್ಬಿಂಗ್ ಮುಗಿಸಿದ ದುರ್ಗಿ

‘ಕೆಂಡದ ಸೆರಗು’ ಸಿನಿಮಾಗೆ ರಾಕಿ ಸೋಮ್ಲಿ ಅವರು ನಿರ್ದೇಶನ ಮಾಡಿದ್ದಾರೆ. ‘ಈ ಹುಡುಗಿ ಎಷ್ಟು ಚೆಂದ..’ ಹಾಡಿಗೆ ಅವರೇ ಸಾಹಿತ್ಯ ಬರೆದಿದ್ದಾರೆ. ಅನಿರುದ್ಧ್ ಶಾಸ್ತ್ರೀ ಅವರ ಧ್ವನಿಯಲ್ಲಿ ಈ ಸಾಂಗ್​ ಮೂಡಿಬಂದಿದೆ. ವೀರೇಶ್ ಕಬ್ಲಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಪಿ.ಆರ್.ಒ. ಆಗಿ ಗುರುತಿಸಿಕೊಂಡಿರುವ ಯುವ ಕಲಾವಿದ ಹರೀಶ್ ಅರಸು ಮತ್ತು ಪೂರ್ಣಿಮಾ ಅವರು ‘ಈ ಹುಡುಗಿ ಎಷ್ಟು ಚೆಂದ..’ಸಾಂಗ್​ನಲ್ಲಿ ಜೋಡಿಯಾಗಿ ಡ್ಯಾನ್ಸ್​ ಮಾಡಿದ್ದಾರೆ.

ಕೆ. ಕೊಟ್ರೇಶ್ ಗೌಡ ಅವರು ‘ಶ್ರೀಮುತ್ತು ಟಾಕೀಸ್’ ಮತ್ತು ‘ಎಸ್.ಕೆ. ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ‘ಕೆಂಡದ ಸೆರಗು’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಾಲಾಶ್ರೀ, ಭೂಮಿ ಶೆಟ್ಟಿ ಜೊತೆಗೆ ಯಶ್ ಶೆಟ್ಟಿ, ಪ್ರತಿಮಾ, ವರ್ಧನ್ ತೀರ್ಥಹಳ್ಳಿ, ಬಸು ಹಿರೇಮಠ್, ಹರೀಶ್ ಅರಸು, ಶೋಭಿತಾ, ಸಿಂಧೂ ಲೋಕನಾಥ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿಪಿನ್ ವಿ. ರಾಜ್ ಅವರ ಛಾಯಾಗ್ರಹಣ, ವೀರೇಶ್ ಕಂಬ್ಲಿ ಅವರ ಸಂಗೀತ ನಿರ್ದೇಶನ ಹಾಗೂ ಶ್ರೀಕಾಂತ್ ಅವರ ಸಂಕಲನದಲ್ಲಿ ‘ಕೆಂಡದ ಸೆರಗು’ ಚಿತ್ರ ಮೂಡಿಬರುತ್ತಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಬಂದ ದಿ ಗ್ರೇಟ್ ಖಲಿ; ‘ಕೆಂಡದ ಸೆರಗು’ ಸಿನಿಮಾದಲ್ಲಿ WWE ಫೈಟರ್

ಕನ್ನಡ ಚಿತ್ರರಂಗದಲ್ಲಿ ನಟಿ ಮಾಲಾಶ್ರೀ ಅವರು ಹಲವು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರು ‘ಕೆಂಡದ ಸೆರಗು’ ಸಿನಿಮಾದಲ್ಲಿ ಪೊಲೀಸ್​ ಕಮಿಷನರ್​ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ. ಇದು ಕುಸ್ತಿಯ ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿರುವ ಸಿನಿಮಾ. ಬಿಗ್​ ಬಾಸ್​ ಖ್ಯಾತಿಯ ನಟಿ ಭೂಮಿ ಶೆಟ್ಟಿ ಅವರು ಕುಸ್ತಿ ಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಎಲ್ಲ ಕಾರಣದಿಂದ ಸಿನಿಪ್ರಿಯರಿಗೆ ‘ಕೆಂಡದ ಸೆರಗು’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.