ಸ್ಯಾಂಡಲ್ವುಡ್ಗೆ ಬಂದ ದಿ ಗ್ರೇಟ್ ಖಲಿ; ‘ಕೆಂಡದ ಸೆರಗು’ ಸಿನಿಮಾದಲ್ಲಿ WWE ಫೈಟರ್
The Great Khali: ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ‘ಕೆಂಡದ ಸೆರಗು’ ಸಿನಿಮಾ ಮೂಡಿಬರುತ್ತಿದೆ. ಇತ್ತೀಚೆಗೆ ರಿಲೀಸ್ ಆದ ಟೀಸರ್ ಎಲ್ಲರ ಗಮನ ಸೆಳೆದಿದೆ.
WWE ಫೈಟ್ನ ಇಷ್ಟಪಡುವವರು ಸಾಕಷ್ಟು ಜನರಿದ್ದಾರೆ. WWE ಫೈಟರ್ ದಿ ಗ್ರೇಟ್ ಖಲಿ ಅನೇಕರಿಗೆ ಇಷ್ಟವಾಗುತ್ತಾರೆ. ಈಗ ಅವರು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಕುಸ್ತಿ ಕುರಿತ ಸಿನಿಮಾ ‘ಕೆಂಡದ ಸೆರಗು’ (Kendada Seragu) ಮೂಲಕ ಅವರು ಚಂದನವನದ ಮಂದಿಗೆ ಪರಿಚಯಗೊಳ್ಳುತ್ತಿದ್ದಾರೆ. ಈ ವಿಚಾರ ಕೇಳಿ ಅನೇಕರು ಖುಷಿಪಟ್ಟಿದ್ದಾರೆ. ಅವರ ಪಾತ್ರ ಯಾವ ರೀತಿಯಲ್ಲಿರಲಿದೆ ಅನ್ನೋದು ಸದ್ಯದ ಕುತೂಹಲ.
ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ‘ಕೆಂಡದ ಸೆರಗು’ ಸಿನಿಮಾ ಮೂಡಿಬರುತ್ತಿದೆ. ಇತ್ತೀಚೆಗೆ ರಿಲೀಸ್ ಆದ ಟೀಸರ್ ಎಲ್ಲರ ಗಮನ ಸೆಳೆದಿದೆ. ಭೂಮಿ ಶೆಟ್ಟಿ, ಮಾಲಾಶ್ರೀ ಮೊದಲಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಕಿ ಸೋಮ್ಲಿ ಅವರೇ ಬರೆದ ‘ಕೆಂಡದ ಸೆರಗು’ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಈ ಚಿತ್ರ ಕುಸ್ತಿ ಪಟುವಿನ ಕಥೆಯನ್ನು ಹೇಳಲಾಗುತ್ತಿದೆ. ರಿಲೀಸ್ ಆದ ಟೀಸರ್ನಲ್ಲಿ ಉತ್ತರ ಕರ್ನಾಟಕ ಭಾಷೆ ಹೆಚ್ಚು ಗಮನ ಸೆಳೆದಿದೆ.
ರಾಕಿ ಸೋಮ್ಲಿ ಅವರು ಖಲಿ ಅವರನ್ನು ಭೇಟಿ ಮಾಡಿ ಕಥೆ ಹಾಗೂ ಪಾತ್ರದ ಬಗ್ಗೆ ವಿವರಿಸಿದ್ದಾರೆ. ಸಿನಿಮಾದ ಕಥೆ ಹಾಗೂ ಪಾತ್ರ ಇಷ್ಟವಾಗಿದ್ದು, ಚಿತ್ರದಲ್ಲಿ ನಟಿಸೋಕೆ ಅವರು ಒಪ್ಪಿದ್ದಾರೆ. ಖಲಿ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ರಾಕಿ ಸೋಮ್ಲಿ ಚಿತ್ರತಂಡಕ್ಕೆ ಖಲಿ ಎಂಟ್ರಿ ನೀಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಖಲಿ ಭಾಗದ ಚಿತ್ರೀಕರಣ ಆರಂಭವಾಗಲಿದೆ.
ಇದನ್ನೂ ಓದಿ: Vinod Prabhakar: ಮಾಡರ್ನ್ ಮಹಾಲಕ್ಷ್ಮಿಗೆ ಮಾಲಾಶ್ರೀ ಸಾತ್; ‘ಲಂಕಾಸುರ’ ಚಿತ್ರದ ಹೊಸ ಹಾಡು ರಿಲೀಸ್ ಮಾಡಿದ ಸ್ಟಾರ್ ನಟಿ
ಮಾಲಾಶ್ರೀ ಅವರು ದೊಡ್ಡ ಪರದೆಮೇಲೆ ಇತ್ತೀಚೆಗೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಈಗ ಅವರು ‘ಕೆಂಡದ ಸೆರಗು’ ಚಿತ್ರದಲ್ಲಿ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣ ಹಚ್ಚಿದ್ದಾರೆ. ಶ್ರೀ ಮುತ್ತು ಟಾಕೀಸ್ ಮತ್ತು ಎಸ್.ಕೆ. ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕೆ. ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ