Sign In

By signing in or creating an account, you agree with Associated Broadcasting Company's Terms & Conditions and Privacy Policy.

Daali Dhananjay: ಬಡವರ ಮನೆ ಮಕ್ಳ ಕಿಡ್ನಿ ಉಳಿಸಿದ ಡಾಲಿ! ಹೊಸಬರ ಸಿನಿಮಾಕ್ಕೆ ಭರಪೂರ ಬೆಂಬಲ

'ಬಡವರ ಮನೆ ಮಕ್ಳು ಬೆಳೀಬೇಕು ಕಣ್ರಯ್ಯ' ಎಂಬ 'ಧ್ಯೇಯ ವಾಕ್ಯ'ದೊಡನೆ, ಆಸಕ್ತ, ಪ್ರತಿಭಾವಂತ ನವ ಸಿನಿಕರ್ಮಿಗಳಿಗೆ, ನಟ-ನಟಿಯರಿಗೆ ಬೆಂಬಲ ನೀಡುತ್ತಿರುವ ನಟ ಧನಂಜಯ್ ಇದೀಗ, ಬಡವರ ಮನೆ ಮಕ್ಳ ಕಿಡ್ನಿ ಉಳಿಸಿದ್ದಾರೆ!

Daali Dhananjay: ಬಡವರ ಮನೆ ಮಕ್ಳ ಕಿಡ್ನಿ ಉಳಿಸಿದ ಡಾಲಿ! ಹೊಸಬರ ಸಿನಿಮಾಕ್ಕೆ ಭರಪೂರ ಬೆಂಬಲ
ಡಾಲಿ ಧನಂಜಯ್
Follow us
TV9 Web
| Updated By: ಮಂಜುನಾಥ ಸಿ.

Updated on: Mar 04, 2023 | 12:41 PM

‘ಬಡವರ ಮನೆ ಮಕ್ಳು ಬೆಳೀಬೇಕು ಕಣ್ರಯ್ಯ’ ಎಂಬ ಧ್ಯೇಯ ವಾಕ್ಯದೊಡನೆ, ಆಸಕ್ತ, ಪ್ರತಿಭಾವಂತ ನವ ಸಿನಿಕರ್ಮಿಗಳಿಗೆ, ನಟ-ನಟಿಯರಿಗೆ ಬೆಂಬಲ ನೀಡುತ್ತಿರುವ ನಟ ಧನಂಜಯ್ (Daali Dhananjay) ಇದೀಗ, ಬಡವರ ಮನೆ ಮಕ್ಳ ಕಿಡ್ನಿ ಉಳಿಸಿದ್ದಾರೆ! ಹಾಗೆಂದು ಡಾಲಿ ಆಸ್ಪತ್ರೆಯನ್ನೇನೂ ಕಟ್ಟಿಸಿಲ್ಲ, ಬದಲಿಗೆ ಹೊಸಬರ ಸಿನಿಮಾ ಒಂದಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ಕತೆಗಾರ ಪೂರ್ಣಚಂದ್ರ ತೇಜಸ್ವಿಯರ (Poornchandra Tejaswi) ಅಭಿಮಾನಿಗಳೇ ಸೇರಿ ನಿರ್ಮಾಣ ಮಾಡಿರುವ ‘ಡೇರ್ ಡೆವಿಲ್ ಮುಸ್ತಾಫಾ’ ಹೆಸರಿನ ಕನ್ನಡ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಹಲವು ಅಡ್ಡಿ-ಆತಂಕಗಳ ನಡುವೆ ನಿರ್ಮಾಣವಾದ ಈ ಸಿನಿಮಾವನ್ನು ಡಾಲಿ ಧನಂಜಯ್ ಪ್ರೆಸೆಂಟ್ ಮಾಡುತ್ತಿದ್ದಾರೆ. ರಾಜ್ಯದಾದ್ಯಂತ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ವಹಿಸಿಕೊಂಡಿದೆ.

ಡಾಲಿ ತಮ್ಮ ಸಿನಿಮಾಕ್ಕೆ ಬೆಂಬಲ ಸೂಚಿಸಿರುವ ಕುರಿತಾಗಿ ಪ್ರೊಮೋಷನಲ್ ವಿಡಿಯೋ ಒಂದನ್ನು ಚಿತ್ರತಂಡ ಹಂಚಿಕೊಂಡಿದ್ದು, ತಮಾಷೆಯಾಗಿರುವ ಈ ವಿಡಿಯೋದಲ್ಲಿ ನಿರ್ದೇಶಕ ಶಶಾಂಕ್ ಸೋಗಲ್, ಸಿನಿಮಾ ನಿರ್ಮಾಣಕ್ಕೆ ತನ್ನ ಒಂದು ಕಿಡ್ನಿ ಮಾರಿರುವುದಾಗಿ ಹೇಳುತ್ತಾರೆ.  ಪ್ರಚಾರಕ್ಕೆ, ವಿತರಣೆಗೆ ಇನ್ನೊಂದು ಕಿಡ್ನಿ ಮಾರುವಂತಾಗಬಹುದು ಎನ್ನುತ್ತಾರೆ. ಆಗ ಸೂಟ್​ಕೇಸ್ ಹಿಡಿದುಕೊಂಡು ಸ್ಟೈಲ್ ಆಗಿ ಎಂಟ್ರಿ ಕೊಡುವ ಡಾಲಿ ಧನಂಜಯ್ ಸೂಟ್​ಕೇಸ್ ಅನ್ನು ಶಶಾಂಕ್ ಕೈಗೆ ಕೊಡುತ್ತಾರೆ. ಹಣ ಕೊಟ್ಟರೇನೋ ಎಂದು ಎಲ್ಲರೂ ಸೂಟ್​ಕೇಸ್ ತೆಗೆದು ನೋಡಿದರೆ, ಅದರಲ್ಲಿ ಕಿಡ್ನಿ ಇರುತ್ತದೆ. ಕಿಡ್ನಿ ಕಂಡು ಶಾಕ್ ಆದ ಚಿತ್ರತಂಡಕ್ಕೆ, ‘ಬಡವರ ಮನೆ ಮಕ್ಳ ಕಿಡ್ನಿ ಉಳೀಬೇಕು ಕಣ್ರಯ್ಯ’ ಎಂದು ಡೈಲಾಗ್ ಹೊಡೆಯುತ್ತಾರೆ ಧನಂಜಯ್.

‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾವೂ ತೇಜಸ್ವಿಯವರ ಅದೇ ಹೆಸರಿನ ಕತೆ ಆಧರಿಸಿದ ಸಿನಿಮಾ. ಸಿನಿಮಾವನ್ನು ಹೊಸಬರೇ ಸೇರಿ ಮಾಡಿದ್ದಾರೆ. ತೇಜಸ್ವಿಯ ಅಭಿಮಾನಿಗಳೇ ಸೇರಿ ಸಿನಿಮಾಕ್ಕೆ ಬಂಡವಾಳವನ್ನೂ ಹೂಡಿರುವುದು ವಿಶೇಷ. ಕತೆಗಾರನ ಅಭಿಮಾನಿಗಳೇ ಸೇರಿ ಸಿನಿಮಾ ಮಾಡಿರುವುದು ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ. ಸುಮಾರು ನೂರು ಮಂದಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿವೆ. ಒಂದು ಪ್ರೊಮೋಷನಲ್ ಟೀಸರ್ ಅನ್ನು ಸಹ ಚಿತ್ರತಂಡ ಬಿಡುಗಡೆ ಮಾಡಿದ್ದು, ಕ್ರಿಯೇಟಿವ್ ಆಗಿ ಸಿನಿಮಾದ ಪ್ರಚಾರ ಆರಂಭಿಸಿದೆ. ಸಿನಿಮಾದ ಬಿಡುಗಡೆ ಶೀಘ್ರದಲ್ಲಿಯೇ ಘೋಷಿಸುವ ಸಾಧ್ಯತೆ ಇದೆ.

ಇನ್ನು ನಟ ಡಾಲಿ ಧನಂಜಯ್ ಸಾಹಿತ್ಯದ ಅಭ್ಯಾಸಿಯಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಆಸಕ್ತಿಹೊಂದಿರುವವರಾಗಿದ್ದಾರೆ. ಪ್ರೊಮೋಷನಲ್ ವಿಡಿಯೋದಲ್ಲಿ ಅವರೇ ಹೇಳಿಕೊಂಡಿರುವಂತೆ, ಅವರೂ ಸಹ ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದು, ಹಾಗಾಗಿಯೇ ಈ ಸಿನಿಮಾದ ಜೊತೆಗೆ ನಿಂತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್