AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KCC 2023: ಫೈನಲ್ ಗೆದ್ದು ಬೀಗಿದ ಡಾಲಿ ಧನಂಜಯ್: ಟೂರ್ನಿಯ ಎಲ್ಲ ಪಂದ್ಯಗಳ ವಿವರ ಇಲ್ಲಿದೆ

ಮೂರು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಸಿಸಿ 2023 ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳ ಕ್ರಿಕೆಟ್ ಟೂರ್ನಿ ಇಂದು ಅಂತ್ಯವಾಗಿದ್ದು, ಫೈನಲ್​ನಲ್ಲಿ ಡಾಲಿ ಧನಂಜಯ್ ತಂಡ ಗೆದ್ದು ಬೀಗಿದೆ.

KCC 2023: ಫೈನಲ್ ಗೆದ್ದು ಬೀಗಿದ ಡಾಲಿ ಧನಂಜಯ್: ಟೂರ್ನಿಯ ಎಲ್ಲ ಪಂದ್ಯಗಳ ವಿವರ ಇಲ್ಲಿದೆ
ಕೆಸಿಸಿ 2023
ಮಂಜುನಾಥ ಸಿ.
|

Updated on:Feb 26, 2023 | 12:11 PM

Share

ಮೂರು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಸಿಸಿ 2023 (KCC 2023), ಸ್ಯಾಂಡಲ್​ವುಡ್ (Sandalwood) ಸೆಲೆಬ್ರಿಟಿಗಳ ಕ್ರಿಕೆಟ್ ಟೂರ್ನಿ ಇಂದು ಅಂತ್ಯವಾಗಿದ್ದು, ಫೈನಲ್​ನಲ್ಲಿ ಉಪೇಂದ್ರ (Upendra) ಮುಂದಾಳತ್ವದ ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಡಾಲಿ ಧನಂಜಯ್ (Daali Dhananjay) ನಾಯಕತ್ವದ ಗಂಗಾ ವಾರಿಯರ್ಸ್ ತಂಡವು ಮಣಿಸಿ ಟ್ರೋಫಿ​ ತನ್ನದಾಗಿಸಿಕೊಂಡಿದೆ.

ಇಂದು (ಫೆಬ್ರವರಿ 26) ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಧನಂಜಯ್​ರ ಗಂಗಾ ವಾರಿಯರ್ಸ್, ಉಪೇಂದ್ರ ಅವರ ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಈ ಹಿಂದಿನ ಪಂದ್ಯದಲ್ಲಿ ಅಬ್ಬರಿಸಿದ್ದ ವಿಜಯನಗರ ಪೇಟ್ರಿಯಾಟ್ಸ್ ತಂಡ ಫೈನಲ್ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ತಂಡದ ಬೌಲಿಂಗ್ ಮುಂದೆ ಮಂಕಾಗಿ 10 ಓವರ್​ಗಳಿಗೆ ಎಂಟು ವಿಕೆಟ್ ಕಳೆದುಕೊಂಡು 81 ರನ್ನುಗಳನ್ನಷ್ಟೆ ಗಳಿಸಿತು.

ಗೆಲ್ಲಲು 82 ರನ್​ಗಳ ಗುರಿ ಪಡೆದ ಡಾಲಿ ಧನಂಜಯ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡ ಯಾವುದೇ ಶ್ರಮವಿಲ್ಲದೆ ಸುಲಭವಾಗಿ ಗುರಿ ತಲುಪಿ ಕೆಸಿಸಿ 2023 ಟೂರ್ನಿಯ ಚಾಂಪಿಯನ್ ಎನಿಸಿಕೊಂಡಿತು.

ಕೆಸಿಸಿ ಟೂರ್ನಿಯಲ್ಲಿ ಒಡೆಯರ್ ಚಾರ್ಜರ್ಸ್ ತಂಡವನ್ನು ಶಿವರಾಜ್‌ ಕುಮಾರ್, ಹೊಯ್ಸಳ ಈಗಲ್ಸ್ ತಂಡವನ್ನು ಕಿಚ್ಚ ಸುದೀಪ್, ಕದಂಬ ಲಯನ್ಸ್ ತಂಡವನ್ನು ಗಣೇಶ್, ಗಂಗಾ ವಾರಿಯರ್ಸ್ ತಂಡವನ್ನು ಧನಂಜಯ್, ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಉಪೇಂದ್ರ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಧ್ರುವ ಸರ್ಜಾ ಮುನ್ನಡೆಸಿದರು.

ಲೀಗ್ ಹಂತದಲ್ಲಿ ಎಲ್ಲ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿದರು. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದ ಡಾಲಿಯ ಗಂಗಾ ವಾರಿಯರ್ಸ್ ಫೈನಲ್ ಪ್ರವೇಶಿಸಿತು. ಶಿವರಾಜ್ ಕುಮಾರ್ ಅವರ ತಂಡದ ಹೊರತಾಗಿ ಇನ್ನುಳಿದ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆದ್ದರು. ಶಿವಣ್ಣನ ತಂಡ ಯಾವುದೇ ಪಂದ್ಯವನ್ನು ಗೆಲ್ಲಲಿಲ್ಲ. ನೆಟ್ ರನ್​ರೇಟ್ ಆಧಾರದಲ್ಲಿ ಉಪೇಂದ್ರ ಅವರ ವಿಜಯನಗರ ಪೇಟ್ರಿಯಾಟ್ಸ್ ತಂಡ ಫೈನಲ್ ಪ್ರವೇಶಿಸಿತು.

ಎಲ್ಲ ತಂಡಗಳಲ್ಲಿಯೂ ತಲಾ ಒಬ್ಬೊಬ್ಬ ವಿಶ್ವ ಮಟ್ಟದ ಕ್ರಿಕೆಟಿಗರು ಆಡಿದರು. ಸುದೀಪ್ ತಂಡದಲ್ಲಿ ಕ್ರಿಸ್ ಗೇಲ್, ಡಾಲಿ ತಂಡದಲ್ಲಿ ಸುರೇಶ್ ರೈನಾ, ಗಣೇಶ್ ತಂಡದಲ್ಲಿ ತಿಲಕರತ್ನೆ ದಿಲ್​ಶಾನ್, ಉಪೇಂದ್ರ ಹರ್ಷಲ್ ಗಿಬ್ಸ್, ಶಿವಣ್ಣ ತಂಡದಲ್ಲಿ ಬ್ರಿಯನ್ ಲಾರಾ, ಧ್ರುವ ಸರ್ಜಾ ತಂಡದಲ್ಲಿ ಎಸ್ ಬದ್ರಿನಾಥ್ ಅವರುಗಳು ಸಹ ಆಡಿದರು.

ಪಂದ್ಯಾವಳಿಯ ಎಲ್ಲ ಪಂದ್ಯಗಳ ಫಲಿತಾಂಶ

ಗಂಗಾ ವಾರಿಯರ್ಸ್ v/s ಹೊಯ್ಸಳ ಈಗಲ್ಸ್ – ಗಂಗಾ ವಾರಿಯರ್ಸ್ ಗೆಲುವು ಹೊಯ್ಸಳ ಈಗಲ್ಸ್ v/s ಒಡೆಯರ್ ಚಾರ್ಜರ್ಸ್ – ಹೊಯ್ಸಳ ಈಗಲ್ಸ್ ಗೆಲುವು ಕದಂಬ ಲಯನ್ಸ್ v/s ರಾಷ್ಟ್ರಕೂಟ ಪ್ಯಾಂಥರ್ಸ್ – ಕದಂಬ ಲಯನ್ಸ್ ಗೆಲುವು ಕದಂಬ ಲಯನ್ಸ್ v/s ವಿಜಯನಗರ ಪೇಟ್ರಿಯಾಟ್ಸ್ – ವಿಜಯನಗರ ಪೇಟ್ರಿಯಾಟ್ಸ್ ಗೆಲುವು ಗಂಗಾ ವಾರಿಯರ್ಸ್ v/s ಒಡೆಯರ್ ಚಾರ್ಜರ್ಸ್ – ಗಂಗಾ ವಾರಿಯರ್ಸ್ ಗೆಲುವು ವಿಜಯನಗರ ಪೇಟ್ರಿಯಾಟ್ಸ್ v/s ರಾಷ್ಟ್ರಕೂಟ ಪ್ಯಾಂಥರ್ಸ್ – ರಾಷ್ಟ್ರಕೂಟ ಪ್ಯಾಂಥರ್ಸ್ ಗೆಲುವು

ಫೈನಲ್ ಪಂದ್ಯ

ವಿಜಯನಗರ ಪೇಟ್ರಿಯಾಟ್ಸ್ v/s ಗಂಗಾ ವಾರಿಯರ್ಸ್ – ಗಂಗಾ ವಾರಿಯರ್ಸ್ ಚಾಂಪಿಯನ್

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Sun, 26 February 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ