Dr Rajkumar: ಅಭಿಮಾನಿಗಳಿಗೆ ಹೆದರಿ ಕೂತಿದ್ದ ಅಣ್ಣಾವ್ರು, ಆಮೇಲೆ ನಡೆದಿದ್ದು ಅದ್ಭುತ

ಅಭಿಮಾನಿಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ, ಅಭಿಮಾನಿಗಳಿಗೆ ದೇವರ ಸ್ಥಾನ ನೀಡಿದ್ದ ನಟ ರಾಜ್​ಕುಮಾರ್ ಒಮ್ಮೆ ಅಭಿಮಾನಿಗಳಿಗೆ ಹೆದರಿ ಕೂತಿದ್ದರಂತೆ. ಆದರೆ ಆ ದಿನ ನಡೆದಿದ್ದು ಅದ್ಭುತ

Dr Rajkumar: ಅಭಿಮಾನಿಗಳಿಗೆ ಹೆದರಿ ಕೂತಿದ್ದ ಅಣ್ಣಾವ್ರು, ಆಮೇಲೆ ನಡೆದಿದ್ದು ಅದ್ಭುತ
ಸೋದರಿ ಸಿನಿಮಾದಲ್ಲಿ ಅಣ್ಣಾವ್ರು
Follow us
ಮಂಜುನಾಥ ಸಿ.
|

Updated on: Mar 04, 2023 | 4:38 PM

ಇಂದಿಗೂ ಕೋಟ್ಯಂತರ ಮಂದಿಯ ಆರಾಧ್ಯ ದೈವ ಡಾ ರಾಜ್​ಕುಮಾರ್ (Dr Rajkumar). ತಮ್ಮನ್ನು ಅಭಿಮಾನಿಸುವ ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟವರು ಮಹಾತ್ಮ ಅಣ್ಣಾವ್ರು. ಅವರಿಗೆ ತಮ್ಮ ಅಭಿಮಾನಿಗಳ ಪ್ರೀತಿಯ ಮೊದಲ ದರ್ಶನವಾಗುವ ಮುನ್ನ ಅದೇ ಅಭಿಮಾನಿಗಳಿಗೆ ಹೆದರಿ ಬಿಟ್ಟಿದ್ದರಂತೆ ಅಣ್ಣಾವ್ರು. ಈ ಆಸಕ್ತಿಕರ ಸಂಘಟನೆಯನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ರಾಜ್​ಕುಮಾರ್ ಅವರಿಗೆ ಆಪ್ತವಾಗಿದ್ದ ಚಿ ಉದಯಶಂಕರ್ (Chi Udayashankar) ಅವರು ಆಕಾಶವಾಣಿಗಾಗಿ ಮಾಡಿರುವ ಅಣ್ಣಾವ್ರ ಸಂದರ್ಶನದಲ್ಲಿ ಈ ಆಸಕ್ತಿಕರ ಸಂಘಟನೆಯ ಉಲ್ಲೇಖವಿದೆ.

ಡಾ ರಾಜ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ‘ಬೇಡರ ಕಣ್ಣಪ್ಪ’ ಆಗಷ್ಟೆ ಬಿಡುಗಡೆ ಆಗಿತ್ತು. ಅವರ ಎರಡನೇ ಸಿನಿಮಾ ‘ಸೋದರಿ’. ಸಿನಿಮಾದಲ್ಲಿ ಅಣ್ಣಾವ್ರಿಗೆ ನಾಯಕಿಯ ಸಹೋದರನ ಪಾತ್ರ. ಆ ಸಿನಿಮಾದ ನಾಯಕ‌ ಪಾತ್ರಕ್ಕೆ ಕೌಶಿಕ್ ಎಂಬುವರು ಆಯ್ಕೆಯಾಗಿದ್ದರು. ಆದರೆ ‘ಬೇಡರ ಕಣ್ಣಪ್ಪ’ ಸಿನಿಮಾ ಹಿಟ್ ಆಗಿದ್ದರಿಂದ ರಾಜ್ ಕುಮಾರ್ ಅವರು ನಾಯಕಿಯ ಅಣ್ಣನ ಪಾತ್ರ ಮಾಡಿದರೆ ಸರಿ ಹೋಗುವುದಿಲ್ಲ, ಅವರು ನಾಯಕನ ಪಾತ್ರದಲ್ಲಿ ನಟಿಸಬೇಕೆಂದು ನಿರ್ದೇಶಕರಿಗೆ ಅನಿಸಿ, ನಾಯಕ ನಟನಾಗಬೇಕಿದ್ದ ಕೌಶಿಕ್​ಗೆ ಹೊಲೆಸಿದ್ದ ಬಟ್ಟೆಗಳನ್ನು ರಾಜ್ ಕುಮಾರ್ ಅವರಿಗೆ ತೊಡಿಸಿ ನಾಯಕ‌ನ ಪಾತ್ರ ನೀಡಿದರಂತೆ. ಅಣ್ಣಾವ್ರೇ ಹೇಳಿರುವಂತೆ, ಕೌಶಿಕ್ ತಮಗಿಂತಲೂ ದೇಹಾಕಾರದಲ್ಲಿ, ಎತ್ತರದಲ್ಲಿ ಸಣ್ಣವ. ಅವರ ಬಟ್ಟೆಗಳು ಅಣ್ಣಾವ್ರಿಗೆ ಬಹಳ ಬಿಗಿಯಾಗಿದ್ದವಂತೆ. ಹೇಗೊ ಅದನ್ನೇ ಧರಿಸಿ ಸಿನಿಮಾ ಮುಗಿಸಿದರಂತೆ ಅಣ್ಣಾವ್ರು.

ಸಿನಿಮಾ ಬಿಡುಗಡೆ ಆದಾಗ ಪತ್ನಿ ಪಾರ್ವತಿಯೊಟ್ಟಿಗೆ ಶಿವಾಜಿನಗರದ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋಗಿದ್ದರಂತೆ. ಸಣ್ಣ ಬಟ್ಟೆಗಳನ್ನು ಹಾಕಿಕೊಂಡು ಇಕ್ಕಟ್ಟಿನಲ್ಲಿ ಹೇಗೋ ನಟಿಸಿದ್ದೇನೆ. ಜನ ಏನನ್ನುತ್ತಾರೋ ಎಂಬ ಭಯ ಅಣ್ಣಾವ್ರಿಗೆ.

ಮಧ್ಯಂತರದ ವೇಳೆಗೆ ಸಿನಿಮಾದಲ್ಲಿ ನಟಿಸಿರುವ ರಾಜ್ ಕುಮಾರ್ ಚಿತ್ರಂದಿರದಲ್ಲಿದ್ದಾರೆ ಎಂಬುದು ಜನರಿಗೆ ಗೊತ್ತಾಗಿದೆ. ಕೂಡಲೆ ಎಲ್ಲರೂ ರಾಜ್ ಕುಮಾರ್ ಹೊರಗೆ ಬರಬೇಕು, ಮುಖ ತೋರಿಸಬೇಕು ಎಂದು ಹಠ ಹಿಡಿದಿದ್ದಾರೆ. ಆದರೆ ಅಣ್ಣಾವ್ರಿಗೆ ಹೆದರಿಕೆ, ಜನ ಬೈದು ಬಿಡುತ್ತಾರೇನೋ ಎಂದು. ನಾಟಕದಲ್ಲಿ ಸಂಭಾಷಣೆಯನ್ನು ತಪ್ಪು ಹೇಳಿದರೆ ಅಥವಾ ತಡಬಡಾಯಿಸಿದರೆ ‘ಕೋಳಿ ಕಳ್ಳ’ ಎಂದು ಕೂಗಿ ಅವಮಾನಿತ್ತಿದ್ದರಂತೆ ಜನ. ಅದರ ನೆನಪುಳ್ಳ ರಾಜ್ ಕುಮಾರ್, ಈಗಲೂ ಹಾಗೆಯೇ ಆಗುತ್ತದೇನೊ ಎಂದು ಅಳುಕಿನಿಂದಲೇ ಹೊರಗೆ ಬಂದರಂತೆ.

ಆದರೆ ಅವರನ್ನು ನೋಡಿದ‌ ಜನ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಅದ್ಭುತವಾಗಿ ನಟಿಸಿದ್ದೀಯ. ನಿನ್ನ ಬಾಯಿಯಿಂದ ಕನ್ನಡ ಕೇಳಿದರೆ ರೋಮಾಂಚನ ಆಗುತ್ತದೆ ಎಂದೆಲ್ಲ ಹೊಗಳಿದರಂತೆ. ಅದೇ ಮೊದಲ ಬಾರಿಗೆ ಅಣ್ಣಾವ್ರು ಅಭಿಮಾನಿಗಳ ಪ್ರೀತಿಯನ್ನು ಸವಿದಿದ್ದು.

ಅಣ್ಣಾವ್ರಿಗೆ ಇದೆಲ್ಲ ಹೊಸದು. ”ಜನರ ಮುಂದೆ ಹೇಗೆ ಮಾನಾಡಬೇಕು ಎಂಬುದು ಸಹ ನನಗೆ ಅಂದು ಗೊತ್ತಿರಿಲ್ಲ. ಅವರ ಪ್ರೀತಿಯ, ಅಭಿಮಾನದ ಮಾತು ಕೇಳಿ ನನಗೆ ಏನು ಹೇಳಬೇಕು. ಅವರ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಸಹ ಗೊತ್ತಾಗಲಿಲ್ಲ. ನನಗೆ ಅಂದು ಕಣ್ಣೀರು ಬಂದು ಬಿಟ್ಟಿತು, ಅತ್ತುಬಿಟ್ಟೆ” ಎಂದು ಸಂದರ್ಶನದಲ್ಲಿ ಅಣ್ಣಾವ್ರು ಹೇಳಿಕೊಂಡಿದ್ದಾರೆ.

ಅಂದು ಮೊದಲ ಬಾರಿಗೆ ಅಭಿಮಾನಿಗಳ ಆ ಪ್ರೀತಿ ಕಂಡ ರಾಜ್​ಕುಮಾರ್ ”ಇವರನ್ನು ನಾನು ರಂಜಿಸುತ್ತಲೇ ಇರವೇಕು, ಇವರ ಪ್ರೀತಿ ಗಳಿಸುತ್ತಲೇ ಇರಬೇಕು ”ಎನಿಸಿತ್ತಂತೆ. ತಮ್ಮ ಜೀವನದ ಕೊನೆಯ ವರೆಗೂ ಆ ಕಾರ್ಯವನ್ನು ಬಿಡದೇ ಮಾಡಿದರು ಅಣ್ಣಾವ್ರ. ಈಗ ಅದನ್ನು ಅವರ ಮಕ್ಕಳು, ಮೊಮ್ಮಕ್ಕಳು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ