ಕುಸ್ತಿ ಕುರಿತ ಕತೆಯುಳ್ಳ ಸಿನಿಮಾದಲ್ಲಿ ನಟಿ ಮಾಲಾಶ್ರೀ, ಡಬ್ಬಿಂಗ್ ಮುಗಿಸಿದ ದುರ್ಗಿ

Malashree: ಕುಸ್ತಿ ಕ್ರೀಡೆಯ ಕತೆಯುಳ್ಳ ಕೆಂಡದ ಸೆರಗು ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿ ಮಾಲಾಶ್ರೀ ನಟಿಸಿದ್ದು ಸಿನಿಮಾದ ಡಬ್ಬಿಂಗ್ ಅನ್ನು ಮುಗಿಸಿದ್ದಾರೆ ನಟಿ.

ಕುಸ್ತಿ ಕುರಿತ ಕತೆಯುಳ್ಳ ಸಿನಿಮಾದಲ್ಲಿ ನಟಿ ಮಾಲಾಶ್ರೀ, ಡಬ್ಬಿಂಗ್ ಮುಗಿಸಿದ ದುರ್ಗಿ
ಮಾಲಾಶ್ರೀ
Follow us
|

Updated on:Jun 26, 2023 | 2:33 AM

ಮಹಿಳಾ ಪ್ರಧಾನ ಸಿನಿಮಾಗಳಿಗೆ ಹೊಸ ಫೋರ್ಸ್ ತಂದುಕೊಟ್ಟಿದ್ದ, ನಾಯಕಿಯರಿಗೂ ಮಾಸ್ ಇಮೇಜು (Mass Image) ತಂದುಕೊಟ್ಟಿದ್ದ ನಟಿ ಮಾಲಾಶ್ರೀ (Malashree) ಚಿತ್ರರಂಗದಲ್ಲಿ (Sandalwood) ಈಗಲೂ ಸಕ್ರಿಯರಾಗಿದ್ದಾರೆ. ದುರ್ಗಿ, ಚಾಮುಂಡಿ ರೀತಿಯ ಖಡಕ್ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ಮಾಸ್ ಅಭಿಮಾನಿಗಳನ್ನು ಹೊಂದಿರುವ ಮಾಲಾಶ್ರೀ ಕುಸ್ತಿ ಕ್ರೀಡೆ ಆಧರಿತ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

‘ಕೆಂಡದ ಸೆರಗು’ ಎನ್ನುವ ಕುಸ್ತಿ ಆಧಾರಿತ ಕಾದಂಬರಿ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಲಾಶ್ರೀ ಅವರು ತಾವೇ ಸ್ವತಃ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಮಾಲಾಶ್ರೀ ಅವರು ನಟಿಸಿರುವ ಸಿನಿಮಾಗಳಲ್ಲಿ ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ ತಮ್ಮ ಧ್ವನಿ ಕೊಡುತ್ತಾರೆ ತುಂಬ ವರ್ಷಗಳ ನಂತರ ಕೆಂಡದ ಸೆರಗು ಸಿನಿಮಾಗೆ ಮಾಲಾಶ್ರೀ ಅವರು ಧ್ವನಿ ಕೊಟ್ಟಿದ್ದು ಚಿತ್ರತಂಡಕ್ಕೆ ಮತ್ತೊಂದು ಶಕ್ತಿ ಇದ್ದಂತೆ ಎಂದು ತಿಳಿಸಿದ್ದಾರೆ ನಿರ್ದೇಶಕ ರಾಕಿ‌ ಸೋಮ್ಲಿ.

ಇದನ್ನೂ ಓದಿ:Vinod Prabhakar: ಮಾಡರ್ನ್​ ಮಹಾಲಕ್ಷ್ಮಿಗೆ ಮಾಲಾಶ್ರೀ ಸಾತ್​; ‘ಲಂಕಾಸುರ’ ಚಿತ್ರದ ಹೊಸ ಹಾಡು ರಿಲೀಸ್​ ಮಾಡಿದ ಸ್ಟಾರ್​ ನಟಿ

ಈ ಹಿಂದೆ ಕೆಂಡದ ಸೆರಗು ಸಿನಿಮಾದ ಪ್ರೆಸ್ ಮಿಟ್ ನಲ್ಲಿ ಮಾತಾನಾಡಿದ್ದ ಮಾಲಾಶ್ರೀ ಅವರು, “ಕೆಂಡದ ಸೆರಗು” ದೇಸಿಕ ಕುಸ್ತಿ ಕಥೆಯ ಜೊತೆಗೆ ಹೃದಯ ಅಂಟುವ ಭಾವನಾತ್ಮಕ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ, ಒಂದೊಂದು ಪಾತ್ರವೂ ಸಹ ತುಂಬ ವಿಶೇಷವಾದ ಪಾತ್ರಗಳು. ತಂಡದ ಪ್ರತಿ ಒಬ್ಬರು ಸಹ ಸಿನಿಮಾವನ್ನು ಆರಾಧಿಸುವ ತಂತ್ರಜ್ಞಾನರ ತಂಡ, ನಾನು ತುಂಬ ಖುಷಿಯಿಂದ ಸೆಟ್ ನಲ್ಲಿ ಪ್ರೀತಿಯಿಂದ ಕೆಲಸ ಮಾಡಿದ್ದೇನೆ, ತಂಡದ ಪ್ರತಿ ಒಬ್ಬರು ಸಹ ತುಂಬಾನೇ ಶ್ರಮವಹಿಸಿ ಈ ಸಿನಿಮಾದ ಕೆಲಸ ಮಾಡುತ್ತಿದ್ದಾರೆ. ಖಂಡಿತವಾಗಿ ಇದು ಗೆಲ್ಲುವ ಸಿನಿಮಾ, ಈ ವರ್ಷದ ಸಾಲಿನಲ್ಲಿ ನಿಲ್ಲುವ ಸಿನಿಮಾ, ಈ ತಂಡದ ಜೊತೆಗೆ ನಾ ಸದ ಇರುತ್ತೇನೆ ಎಂದು ಹೇಳಿದ್ದಾರೆ.

ಚಿತ್ರಿಕರಣ ಮುಗಿಸಿ ಪೊಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕೆಂಡದ ಸೆರಗು ಇನ್ನೆರಡು ತಿಂಗಳಲ್ಲಿ ಬಿಡುಗಡೆಗೆ ನೀರಿಕ್ಷೆಯಲ್ಲಿದೆ. ಸಿನಿಮಾದಲ್ಲಿ ಒಟ್ಟು ನಾಲ್ಕು ಫೈಟ್, ಆರು ಹಾಡುಗಳಲ್ಲಿದ್ದು ಈಗಾಗಲೇ ಒಂದು ಹಾಡು ಮತ್ತು ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಇನ್ನೂ ಉಳಿದ ತಾರಾಗಣದಲ್ಲಿ ಯಶ್ ಶೆಟ್ಟಿ, ವರ್ಧನ್, ಬಾಲುರಾಜ್ ವಾಡಿ, ಶೋಭಿತ, ಹರೀಶ್ ಅರಸು, ಪ್ರತಿಮಾ, ಮೋಹನ್, ಸಿಂಧನೂರು ಉಮೇಶ್, ಸಿಂದೂಲೋಕನಾಥ್ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಪಿನ್ ರಾಜ್ ಅವರ ಛಾಯಾಗ್ರಹಣ, ವೀರೇಶ್ ಕಬ್ಳಿ ಯವರ ಸಂಗೀತ, ಶ್ರೀಕಾಂತ್ ರವರ ಸಂಕಲನ, ಶ್ರೀಮುತ್ತು ಟಾಕೀಸ್ ಅಡಿಯಲ್ಲಿ , ಕೊಟ್ರೇಶ್ ಗೌಡ ಅವರು ಬಂಡವಾಳ ಹೂಡಿದ್ದು ಗೆಲ್ಲುವ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:35 pm, Sun, 25 June 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ