ಜೀವನ ಸಾಗಿಸಲು ಕಾರು ತೊಳೆಯುತ್ತಿದ್ದ ಯುವಕನ ಜೀವನವನ್ನೇ ಬದಲಿಸಿದ ರಜನೀಕಾಂತ್​ರ ಒಂದು ಕರೆ

Rajinikanth: ಜೀವನ ಸಾಗಿಸಲು ಫೈಟ್ ಮಾಸ್ಟರ್ ಒಬ್ಬರ ಕಾರು ತೊಳಿಯುತ್ತಿದ್ದ ಯುವಕನ್ನು ಗುರುತಿಸಿ ಒಂದೇ ಕರೆಯಿಂದ ಅವನ ಜೀವನವೇ ಬದಲಾಗುವಂತೆ ಮಾಡಿದ್ದರು ರಜನೀಕಾಂತ್.

ಜೀವನ ಸಾಗಿಸಲು ಕಾರು ತೊಳೆಯುತ್ತಿದ್ದ ಯುವಕನ ಜೀವನವನ್ನೇ ಬದಲಿಸಿದ ರಜನೀಕಾಂತ್​ರ ಒಂದು ಕರೆ
ರಜನೀಕಾಂತ್
Follow us
ಮಂಜುನಾಥ ಸಿ.
|

Updated on: Jul 04, 2023 | 5:56 PM

ರಾಘವ ಲಾರೆನ್ಸ್ (Raghava Lawrence) ಬಹು ಜನಪ್ರಿಯ ನೃತ್ಯ ನಿರ್ದೇಶಕ, ನಟ ಹಾಗೂ ಸಿನಿಮಾ ನಿರ್ದೇಶಕ. ನೂರಾರು ತೆಲುಗು, ತಮಿಳು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿರುವ ರಾಘವ ಲಾರೆನ್ಸ್, ಪ್ರಭಾಸ್, ನಾಗಾರ್ಜುನ್, ಅಕ್ಷಯ್ ಕುಮಾರ್ (Akshay Kumar) ರೀತಿಯ ದೊಡ್ಡ ಸ್ಟಾರ್ ನಟರಿಗೆ ಸಿನಿಮಾ ನಿರ್ದೇಶಿಸಿ ಸೂಪರ್ ಹಿಟ್​ಗಳನ್ನು ನೀಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ನೃತ್ಯಕ್ಕೆ ವೇಗ, ಸ್ಟೈಲ್ ತಂದ ಶ್ರೇಯ ರಾಘವ ಲಾರೆನ್ಸ್​ಗೆ ಸಲ್ಲುತ್ತದೆ. ಇಂದು ಬಹು ಯಶಸ್ವಿ ನಟ, ನಿರ್ದೇಶಕನಾಗಿರುವ ರಾಘವ ಆರಂಭದಲ್ಲಿ ಬೇರೆಯದ್ದೇ ಹಾದಿ ಹಿಡಿದಿದ್ದರು, ಅವರು ಸರಿ ದಾರಿಗೆ ಬರಲು ಕಾರಣರಾಗಿದ್ದು ರಜನೀಕಾಂತ್ (Rajinikanth).

ಬಡ ಕುಟುಂಬದ ರಾಘವ ಲಾರೆನ್ಸ್ ಆ ದಿನದ ಅವಶ್ಯಕತೆ ನೀಗಿಸಲು ಫೈಟ್ ಮಾಸ್ಟರ್ ಸೂಪರ್ ಸುಬ್ರಹ್ಮಣ್ಯಂ ಅವರ ಬಳಿ ಕಾರು ತೊಳಿಯುವ ಕೆಲಸ ಮಾಡುತ್ತಿದ್ದರಂತೆ. ಅದಾದ ಬಳಿಕ ದಿನಗೂಲಿ ಲೆಕ್ಕದಲ್ಲಿ ಅವರದ್ದೇ ಫೈಟರ್​ ತಂಡ ಸೇರಿಕೊಂಡಿದ್ದರಂತೆ. ಆದರೆ ಒಮ್ಮೆ ಸಿನಿಮಾ ಸೆಟ್​ನಲ್ಲಿ ರಾಘವ ಅವರು ಡ್ಯಾನ್ಸ್ ಮಾಡುತ್ತಿದ್ದನ್ನು ಸೂಪರ್ ಸ್ಟಾರ್ ರಜನೀಕಾಂತ್ ನೋಡಿದ್ದಾರೆ. ರಾಘವ​ರ ಡ್ಯಾನ್ಸ್ ಇಷ್ಟವಾಗಿ ಅವರನ್ನು ಡ್ಯಾನ್ಸ್ ಯೂನಿಯನ್​ಗೆ ಸೇರಿಸಿದ್ದಲ್ಲದೆ, ಪ್ರಭುದೇವಾ ಅವರಿಗೆ ಕರೆ ಮಾಡಿ ರಾಘವ ಅನ್ನು ತಂಡದಲ್ಲಿ ಸೇರಿಸಿಕೊಳ್ಳುವಂತೆ ಹೇಳಿದರಂತೆ.

ರಜನೀಕಾಂತ್ ಹೇಳಿದ್ದಕ್ಕಾಗಿ ಪ್ರಭುದೇವ ಅವರು ರಾಘವ ಲಾರೆನ್ಸ್​ ಅನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡು ಹಿನ್ನೆಲೆ ಡ್ಯಾನ್ಸರ್ ಆಗಿ ಅವಕಾಶ ಕೊಟ್ಟರು. ರಾಘವ​ರ ಉತ್ತಮ ನೃತ್ಯ ಪ್ರತಿಭೆ ಕಂಡು ತಾವು ನೃತ್ಯ ನಿರ್ದೇಶಿಸಿದ ಹಲವು ಹಾಡುಗಳಲ್ಲಿ ಹಿನ್ನೆಲೆ ನೃತ್ಯಗಾರನನ್ನಾಗಿ ರಾಘವ​ರನ್ನು ಪ್ರಭುದೇವ ಬಳಸಿಕೊಂಡರು. ಪ್ರಭುದೇವ ನೃತ್ಯ ನಿರ್ದೇಶಿಸಿದ ಜನಪ್ರಿಯ ಹಾಡುಗಳಾದ ಚುಕು ಬುಕು ರೈಲೆ ಹಾಗೂ ಇನ್ನಿತರೆಗಳಲ್ಲಿ ರಾಘವ ಹಿನ್ನೆಲೆ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ರಜನೀಕಾಂತ್ ಜೀವನದಲ್ಲಿ ದೇವಿ ಭೈರವಿಯ ಪಾತ್ರ ಮಹತ್ವದ್ದು, ಹಲವು ಮೊದಲುಗಳಿಗೆ ಕಾರಣವಂತೆ ಆ ಜಗನ್ಮಾತೆ

ರಾಘವರ ಸಿನಿಮಾ ಜೀವನ ಆರಂಭವಾಗಲು ರಜನೀಕಾಂತ್ ಕಾರಣರಾದರೆ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ತಂದುಕೊಟ್ಟಿದ್ದು ಮೆಗಾಸ್ಟಾರ್ ಚಿರಂಜೀವಿ. ಪ್ರಭುದೇವ ನೃತ್ಯ ನಿರ್ದೇಶಿಸಿ, ಚಿರಂಜೀವಿ ನಟಿಸಿದ ಮುಠಾ ಮೇಸ್ತ್ರಿ ಸಿನಿಮಾದಲ್ಲಿ ಹಿನ್ನೆಲೆ ನೃತ್ಯಗಾರನಾಗಿ ರಾಘವ ಲಾರೆನ್ಸ್ ಕುಣಿದಿದ್ದರು. ರಾಘವ​ರ ಸ್ಟೈಲ್ ಚಿರಂಜೀವಿಗೆ ಇಷ್ಟವಾಗಿ ಅವರ ಸೂಪರ್ ಹಿಟ್ ಸಿನಿಮಾ ‘ಹಿಟ್ಲರ್​’ಗೆ ನೃತ್ಯ ನಿರ್ದೇಶನ ಮಾಡಲು ಅವಕಾಶ ಕೊಟ್ಟರು. ಅದಾದ ಬಳಿಕ ಅವರ ಮುಂದಿನ ‘ಮಾಸ್ಟರ್’​ಗೂ ರಾಘವ​ ಲಾರೆನ್ಸ್ ನೃತ್ಯ ನಿರ್ದೇಶನ ಮಾಡಿದರು. ಅದಾದ ಬಳಿಕ ರಾಘವ ಹಿಂತಿರುಗಿ ನೋಡಿದ್ದೇ ಇಲ್ಲ.

ಆ ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ರಾಘವ​ಗೆ ಒದಗಿ ಬಂತು. ಸ್ಟಾರ್ ನಟರ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡುವ ಜೊತೆಗೆ ಸಣ್ಣ ಪುಟ್ಟ ರೋಲ್​ಗಳನ್ನು ಮಾಡುತ್ತಿದ್ದ ರಾಘವ​ ಅವರನ್ನು ಕೆ ಬಾಲಚಂದರ್ ಸ್ವತಃ ಕರೆದು ತಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಆ ವೇಳೆಗಾಗಲೆ ಪ್ರಭುದೇವ ಅವರ ಉತ್ತರಾಧಿಕಾರಿ ಎಂದು ಹೆಸರು ಗಳಿಸಿದ್ದ ರಾಘವ, 2000 ದ ಬಳಿಕ ನಿರ್ದೇಶನದ ಕಡೆ ವಾಲಿ ಅಕ್ಕಿನೇನಿ ನಾಗಾರ್ಜುನ್ ನಟನೆಯ ಮಾಸ್ ಸಿನಿಮಾ ನಿರ್ದೇಶಿಸಿದರು, ಅದು ಸೂಪರ್-ಡೂಪರ್ ಹಿಟ್ ಆಯಿತು. ಆ ಬಳಿಕ ತಾವೇ ನಾಯಕನಾಗಿ ನಟಿಸಿ ಸ್ಟೈಲ್ ಸಿನಿಮಾ ಮಾಡಿ, ತಮ್ಮ ಗುರುಗಳಾದ ಪ್ರಭುದೇವ ಅವರಿಗೆ ಒಳ್ಳೆಯ ಪಾತ್ರ ನೀಡಿದರು. ಈ ಸಿನಿಮಾ ಮೂಲಕ ನಟನಾಗಿಯೂ ದೊಡ್ಡ ಯಶಸ್ಸನ್ನು ಲಾರೆನ್ಸ್ ಗಳಿಸಿಕೊಂಡರು. ಆ ಬಳಿಕ ಮುನಿ, ಕಾಂಚನಾ ಹೆಸರಿನ ಹಾರರ್ ಕಾಮಿಡಿ ಸಿನಿಮಾ ನಿರ್ದೇಶಿಸಿ ಯಶಸ್ವಿಯಾದರು. ಪ್ರಭಾಸ್​ಗಾಗಿ ರೆಬೆಲ್ ಸಿನಿಮಾ ಮಾಡಿ ಸೂಪರ್ ಹಿಟ್ ನೀಡಿದರು. ಆ ಬಳಿಕ ಸತತವಾಗಿ ಹಾರರ್ ಕಾಮಿಡಿ ಸಿನಿಮಾಗಳನ್ನೇ ಮಾಡುತ್ತಾ ಬಂದಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಲಕ್ಷ್ಮಿ ಸಿನಿಮಾ ಸಹ ನಿರ್ದೇಶನ ಮಾಡಿರುವ ರಾಘವ ಇದೀಗ ಚಂದ್ರಮುಖಿ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ