150 ಮಕ್ಕಳ ದತ್ತು ಪಡೆದು ಶಿಕ್ಷಣ ನೀಡುತ್ತಿರುವ ತಮಿಳು ನಟ, ಭೇಷ್ ಎಂದ ಅಲ್ಲು ಅರ್ಜುನ್

Raghava Lawrence: ನಟ ರಾಘವ ಲಾರೆನ್ಸ್ 150 ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಖರ್ಚು ವೆಚ್ಚಗಳನ್ನು ತಾವೇ ಭರಿಸಲಿದ್ದಾರೆ. ಇವರ ಈ ಕಾರ್ಯಕ್ಕೆ ಹಲವು ಸೆಲೆಬ್ರಿಟಿಗಳು ಭೇಷ್ ಎಂದಿದ್ದಾರೆ.

150 ಮಕ್ಕಳ ದತ್ತು ಪಡೆದು ಶಿಕ್ಷಣ ನೀಡುತ್ತಿರುವ ತಮಿಳು ನಟ, ಭೇಷ್ ಎಂದ ಅಲ್ಲು ಅರ್ಜುನ್
ರಾಘವ ಲಾರೆನ್ಸ್
Follow us
ಮಂಜುನಾಥ ಸಿ.
|

Updated on: Apr 13, 2023 | 7:06 PM

ಶಿವರಾಜ್ ಕುಮಾರ್ (Shiva Rajkumar) ಸೇರಿದಂತೆ ಕನ್ನಡದ ಹಲವು ನಟರು ಮಾಡುತ್ತಿರುವ ಸಮಾಜ ಸೇವೆ ಹಲವರಿಗೆ ಅನುಕರಣೀಯ. ಅಂತೆಯೇ ಪರಭಾಷೆಯ ಕೆಲವು ನಟರು ಸಹ ತಮ್ಮನ್ನು ತಾವು ವಿವಿಧ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿಯೂ ತಮಿಳಿನ ಜನಪ್ರಿಯ ಡ್ಯಾನ್ಸ್ ಮಾಸ್ಟರ್, ನಟ, ನಿರ್ದೇಶಕ ರಾಘವ ಲಾರೆನ್ಸ್ ಅವರ ಸಮಾಜ ಸೇವೆ ಆಗಾಗ್ಗೆ ಸುದ್ದಿಯಾಗುತ್ತಿರುತ್ತದೆ, ಇದೀಗ ರಾಘವ ಲಾರೆನ್ಸ್ (Raghava Lawrence) 150 ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ರಾಘವ ಲಾರೆನ್ಸ್ ಮುಖ್ಯ ಪಾತ್ರದಲ್ಲಿ ನಟಸಿರುವ ರುಧರನ್ ಸಿನಿಮಾದ ಆಡಿಯೋ ಲಾಂಚ್ ಪ್ರಯುಕ್ತ 150 ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಜವಾಬ್ದಾರಿವಹಿಸಿಕೊಂಡಿರುವುದಾಗಿ ರಾಘವ್ ಲಾರೆನ್ಸ್ ಹೇಳಿದ್ದಾರೆ. ಮಕ್ಕಳ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಘವ್ ರ ಈ ಅದ್ಭುತ ಕಾರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ ಮಾತ್ರವೇ ಅಲ್ಲದೆ ಹಲವು ಸಿನಿಮಾ ನಟರು ಸಹ ರಾಘವ್​ರ ಈ ಕಾರ್ಯವನ್ನು ಶ್ಲಾಘಸಿದ್ದಾರೆ. ರಾಘವ್​ರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ನಟ ಅಲ್ಲು ಅರ್ಜುನ್, ಗೌರವ ಹೆಚ್ಚಾಯಿತೆಂದು ಟ್ವೀಟ್ ಮಾಡಿದ್ದಾರೆ.

ರಾಘವ್ ಲಾರೆನ್ಸ್ ಸಮಾಜ ಸೇವೆ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ. ತಮ್ಮ ಮೊದಲು ಹೀರೋ ಆಗಿ ನಟಿಸಿದ ಸ್ಟೈಲ್ ಸಿನಿಮಾ ಬಿಡುಗಡೆ ಸಮಯದಲ್ಲಿ ಅಂಗವಿಕಲ ಡ್ಯಾನ್ಸರ್​ಗಳಿಗೆ ಸಹಾಯ ಮಾಡಿದ್ದರು. ಆ ಬಳಿಕ ಹಲವು ಸಣ್ಣ ಮಕ್ಕಳ ಹೃದಯದ ಆಪರೇಷನ್​ಗಳನ್ನು ಕಾಲ-ಕಾಲಕ್ಕೆ ಮಾಡಿಸುತ್ತಲೇ ಬಂದಿದ್ದ ರಾಘವ್, ಜೆಲ್ಲಿಕಟ್ಟು ವಿವಾದದ ಸಂದರ್ಭದಲ್ಲಿ ಜಲ್ಲಿಕಟ್ಟುಗೆ ಸಂಪೂರ್ಣ ಬೆಂಬಲ ನೀಡುವ ಜೊತೆಗೆ ಅದರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರಿಗೆ ಆಹಾರ ಹಾಗೂ ವೈದ್ಯಕೀಯ ಸವಲತ್ತುಗಳನ್ನು ಪ್ರತಿಭಟನೆ ಮುಗಿಯುವವರೆಗೆ ನೀಡಿದ್ದರು. ಅದರ ಬಳಿಕ ಕೇರಳ ಪ್ರವಾಹ ಸಂದರ್ಭದಲ್ಲಿ ಕೇರಳ ಸಿಎಂ ನಿಧಿಗೆ ಒಂದು ಕೋಟಿ ದೇಣಿಗೆ ನೀಡಿದ್ದರು. ಸಂಕಷ್ಟದಲ್ಲಿರುವ ಹಲವು ಡ್ಯಾನ್ಸರ್​ಗಳಿಗೆ ರಾಘವ್ ಸಹಾಯ ಮಾಡಿರುವುದು ಸಹ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಪಾಲಿಗೆ ಮತ್ತೆ ನಾಗವಲ್ಲಿ ಪಾತ್ರ? ಫ್ಯಾನ್ಸ್ ಕಿವಿ ಚುರುಕಾಗಿಸಿದೆ ಈ ಸುದ್ದಿ

ಸಹ ಡ್ಯಾನ್ಸರ್ ಆಗಿ ಚಿತ್ರರಂಗ ಪ್ರವೇಶಿಸಿದ ರಾಘವ್ ಲಾರೆನ್ಸ್ 1997 ರಲ್ಲಿ ಚಿರಂಜೀವಿ ಸಿನಿಮಾದಿಂದ ಕೊರಿಯೋಗ್ರಾಫರ್ ಆದರು. ಹಲವು ವರ್ಷ ಹಲವು ಸಿನಿಮಾಗಳಿಗೆ ಕೊರಿಯೋಗ್ರಾಫರ್ ಆಗಿದ್ದ ರಾಘವ್ ಲಾರೆನ್ಸ್ 2004 ರಲ್ಲಿ ನಾಗಾರ್ಜುನ ನಟನೆಯ ಮಾಸ್ ಸಿನಿಮಾ ಮೂಲಕ ನಿರ್ದೇಶಕರಾದರು. ಬಳಿಕ 2006 ರಲ್ಲಿ ಬಿಡುಗಡೆ ಆದ ಸ್ಟೈಲ್ ಮೂಲಕ ನಾಯಕ ನಟರಾದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಾಯಕ ಪಾತ್ರಗಳಲ್ಲಿ ನಟಿಸುತ್ತಲೇ ಬರುತ್ತಿದ್ದಾರೆ. ಜೊತೆಗೆ ನಿರ್ದೇಶನವನ್ನೂ ಮುಂದುವರೆಸಿದ್ದಾರೆ.

ಇದೀಗ ರಾಘವ್ ನಟಿಸಿರುವ ರುಧ್ರನ್ ಸಿನಿಮಾ ಬಿಡುಗಡೆ ಹಂತದಲ್ಲಿದ್ದು, ರಜನೀಕಾಂತ್ ಜೊತೆಗೆ ಚಂದ್ರಮುಖಿ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಅಧಿಕಾರಮ್, ಜಿಗರ್​ತಾಂಡಾ ಡಬಲ್ ಎಕ್ಸ್ ಮತ್ತು ದುರ್ಗ ಹೆಸರಿನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ