Pushpa 2: ಪುಷ್ಪ2 ನಲ್ಲಿ ಸೊಂಟ ಬಳುಕಿಸಲಿದ್ದಾರೆಯೇ ಸಮಂತಾ? ಉತ್ತರಿಸಿದ ಚೆಲುವೆ

ಪುಷ್ಪ ಸಿನಿಮಾದಲ್ಲಿ ಊ ಅಂಟಾವ ಊಹು ಅಂಟಾವ ಹಾಡಿಗೆ ಸೊಂಟ ಕುಣಿಸಿದ್ದ ಸಮಂತಾ, ಪುಷ್ಪ 2 ಸಿನಿಮಾದಲ್ಲಿಯೂ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ?

Pushpa 2: ಪುಷ್ಪ2 ನಲ್ಲಿ  ಸೊಂಟ ಬಳುಕಿಸಲಿದ್ದಾರೆಯೇ ಸಮಂತಾ? ಉತ್ತರಿಸಿದ ಚೆಲುವೆ
ಸಮಂತಾ
Follow us
ಮಂಜುನಾಥ ಸಿ.
|

Updated on: Apr 13, 2023 | 4:45 PM

ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 (Pushpa 2) ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿ ದೂಳೆಭ್ಬಿಸಿದೆ. ಟೀಸರ್​ನಲ್ಲಿ ಅಲ್ಲು ಅರ್ಜುನ್ ಹೊರತಾಗಿ ಇತರೆ ಪಾತ್ರಗಳ ಪರಿಚಯ ಅಷ್ಟಾಗಿ ಆಗಿಲ್ಲ. ಟೀಸರ್ ಬಿಡುಗಡೆ ಬಳಿಕ ಸಿನಿಮಾದಲ್ಲಿ ಸಮಂತಾ (Samantha) ಡ್ಯಾನ್ಸ್ ಇರಲಿದೆಯೇ ಎಂಬ ಚರ್ಚೆ ಜೋರಾಗಿದೆ. ಪುಷ್ಪ ಮೊದಲ ಭಾಗದಲ್ಲಿ ಸಮಂತಾರ ಐಟಂ ಹಾಡು ಸಖತ್ ಸದ್ದು ಮಾಡಿತ್ತಲ್ಲದೆ, ಸಿನಿಮಾದ ಭರ್ಜರಿ ಯಶಸ್ಸಿಗೆ ಕಾಣ್ಕೆಯನ್ನು ನೀಡಿತ್ತು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಸಮಂತಾರ ಹಾಡು ಪುಷ್ಪ 2 ನಲ್ಲಿ ಇರಲಿದೆಯೇ ಎಂದು ಕೇಳುತ್ತಿದ್ದಾರೆ. ಇದಕ್ಕೆ ಸ್ವತಃ ಸಮಂತಾ ಉತ್ತರಿಸಿದ್ದಾರೆ.

ಶಾಕುಂತಲಂ (Shakunthalam) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಟಿ ಸಮಂತಾ. ಪ್ರಚಾರಾರ್ಥ ನೀಡಿರುವ ಸಂದರ್ಶನದಲ್ಲಿ ಈ ಪ್ರಶ್ನೆಗೆ ಉತ್ತರ ನೀಡಿದ್ದು, ತಾವು ಪುಷ್ಪ 2 ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ”ಅಭಿಮಾನಿಗಳಿಗೆ ತುಸು ಬೇಸರವಾಗಬಹುದು ಆದರೆ ನಾನು ಪುಷ್ಪ 2 ಸಿನಿಮಾದಲ್ಲಿ ಇರುವುದಿಲ್ಲ” ಎಂದಿದ್ದಾರೆ. ಇದು ನಿಜಕ್ಕೂ ಸಮಂತಾ ಅಭಿಮಾನಿಗಳಿಗೆ, ಪುಷ್ಪ ಸಿನಿಮಾ ಸರಣಿಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಪುಷ್ಪ ಸಿನಿಮಾದಲ್ಲಿ ಸಮಂತಾ ಕುಣಿದಿದ್ದ ‘ಊ ಅಂಟಾವ ಊಹು ಅಂಟಾವ’ ಹಾಡು ಭಾರಿ ವೈರಲ್ ಆಗಿತ್ತು. ಸಿನಿಮಾ ಬಿಡುಗಡೆಗೆ ಮುನ್ನ ಸಿನಿಮಾಕ್ಕೆ ಬೇಕಿದ್ದ ಪ್ರಚಾರವನ್ನು ಆ ಹಾಡೊಂದೇ ಮಾಡಿಕೊಟ್ಟಿತ್ತು. ಆದರೆ ಸಿನಿಮಾದ ಆರಂಭದ ಚಿತ್ರೀಕರಣದ ಹಂತದಲ್ಲಿ ಸಮಂತಾರ ಐಟಂ ಹಾಡು ಇರಲಿಲ್ಲ. ಆದರೆ ಸಿನಿಮಾದ ಅಂತಿಮ ಘಟ್ಟದಲ್ಲಿ ಆ ಹಾಡನ್ನು ಸೇರಿಸಲಾಗಿತ್ತು. ಅದು ಮಾತ್ರವೇ ಅಲ್ಲದೆ ಸಮಂತಾರ ಮೊದಲ ಮತ್ತು ಏಕೈಕ ಐಟಂ ಹಾಡಾಗಿತ್ತು ಅದು.

ಸಮಂತಾ ಇಲ್ಲದಿದ್ದರೆ, ಪುಷ್ಪ 2 ನಲ್ಲಿ ಯಾರು ಐಟಂ ಹಾಡಿಗೆ ಸೊಂಟ ಕುಣಿಸಲಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. ಪುಷ್ಪ ಸಿನಿಮಾದಲ್ಲಿ ಐಟಂ ಹಾಡು ದೊಡ್ಡ ಹಿಟ್ ಆಗಿರುವ ಕಾರಣ ಪುಷ್ಪ 2 ನಲ್ಲೂ ಐಟಂ ಹಾಡು ಪಕ್ಕಾ ಇರಲಿದೆ ಎನ್ನಲಾಗುತ್ತಿದೆ. ಆದರೆ ಹಾಡಿಗೆ ಸೊಂಟ ಕುಣಿಸುವುದು ಯಾರು ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಪುಷ್ಪ 2 ನಲ್ಲಿ ನಟಿ ಸಾಯಿ ಪಲ್ಲವಿ ಸಹ ಇರಲಿದ್ದಾರೆ ಎಂಬ ಮಾತುಗಳು ಈ ಮೊದಲು ಕೇಳಿ ಬಂದಿದ್ದವು, ಅವರೇ ಏನಾದರೂ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಅನುಮಾನುಗಳು ಇವೆಯಾದರೂ, ಸಾಯಿ ಪಲ್ಲವಿ ಅಂಥಹಾ ಪಾತ್ರ ಅಥವಾ ಹಾಡುಗಳಿಂದ ಸದಾ ದೂರ.

ಇದನ್ನೂ ಓದಿ: Samantha: ದಕ್ಷಿಣದ ನಟಿಯರಿಗೆ ಬಾಲಿವುಡ್​ನಲ್ಲಿ ಆಗುತ್ತಿದ್ದ ಅವಮಾನಗಳ ನೆನಪಿಸಿಕೊಂಡ ಸಮಂತಾ

ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು ಅವರ ಪೋಸ್ಟರ್ ಅನ್ನು ಕೆಲವು ದಿನಗಳ ಹಿಂದೆ ಚಿತ್ರತಂಡ ಬಿಡುಗಡೆ ಮಾಡಿದೆ. ಅವರೊಟ್ಟಿಗೆ ಇನ್ನೊಬ್ಬ ನಾಯಕಿಯೂ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಜೊತೆಗೆ ಮತ್ತೊಬ್ಬ ಪವರ್​ಫುಲ್ ವಿಲನ್ ಸಹ ಇರಲಿದ್ದಾರೆ. ಇನ್ನುಳಿದಂತೆ ಸಿನಿಮಾದ ಮೊದಲ ಭಾಗದಲ್ಲಿದ್ದ ಸುನಿಲ್, ಅನುಸೂಯ, ಡಾಲಿ ಧನಂಜಯ್ ಅವರುಗಳ ಪಾತ್ರಗಳು ಯಥಾವತ್ತು ಮುಂದವರೆಯಲಿವೆ. ಪುಷ್ಪ 2 ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಕೆಲವು ಭಾಗಗಳ ಚಿತ್ರೀಕರಣವಷ್ಟೆ ಬಾಕಿ ಇದೆ. ಸಿನಿಮಾದ ಟೀಸರ್​ನಲ್ಲಿ ಬಿಟ್ಟುಕೊಟ್ಟಿರುವ ಸುಳಿವಿನಂತೆ ಪುಷ್ಪ ಈಗ ದೊಡ್ಡ ವ್ಯಕ್ತಿಯಾಗಿ ಬೆಳೆದು ಜನರ ಬೆಂಬಲ ಪಡೆದುಕೊಂಡಿದ್ದಾನೆ. ಆದರೆ ಅವನ ಮೇಲೆ ಪೊಲೀಸರು ಹಾಗೂ ರಾಜಕಾರಣಿಗಳ ಕಣ್ಣು ಬಿದ್ದಿದ್ದು ಅವನನ್ನು ಕೊಲ್ಲಲು ಹವಣಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ