AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಬಳಿ ಸಂಭಾವನೆ ಬಗ್ಗೆ ಹೇಗೆ ಚರ್ಚಿಸುತ್ತಾರೆ? ಡಿಸ್ಕೌಂಟ್ ಕೊಡುತ್ತಾರಾ? ಆಸಕ್ತಿಕರ ವಿಷಯ ತಿಳಿಸಿದ ಅಲ್ಲು ಅರ್ಜುನ್

ಅಲ್ಲು ಅರ್ಜುನ್, ತಮ್ಮ ತಂದೆ ನಿರ್ಮಾಪಕ ಅಲ್ಲು ಅರವಿಂದ್ ಅವರೊಟ್ಟಿಗೆ ತಮ್ಮ ಸಂಭಾವನೆಯ ಬಗ್ಗೆ ಹೇಗೆ ಚರ್ಚಿಸುತ್ತಾರೆ? ಅಪ್ಪನಿಗೆ ವಿಶೇಷ ಡಿಸ್ಕೌಂಟ್ ಏನಾದರೂ ನೀಡುತ್ತಾರಾ?

ಅಪ್ಪನ ಬಳಿ ಸಂಭಾವನೆ ಬಗ್ಗೆ ಹೇಗೆ ಚರ್ಚಿಸುತ್ತಾರೆ? ಡಿಸ್ಕೌಂಟ್ ಕೊಡುತ್ತಾರಾ? ಆಸಕ್ತಿಕರ ವಿಷಯ ತಿಳಿಸಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್-ಅಲ್ಲು ಅರವಿಂದ್
ಮಂಜುನಾಥ ಸಿ.
|

Updated on: Apr 12, 2023 | 3:36 PM

Share

ನಟ ಅಲ್ಲು ಅರ್ಜುನ್ (Allu Arjun) ದಕ್ಷಿಣ ಭಾರತದ ಸ್ಟಾರ್ ನಟ. ಅತಿ ಹೆಚ್ಚು ಸಂಭಾವನೆ (Remuneration) ಪಡೆವ ನಟರಲ್ಲಿ ಅಲ್ಲು ಅರ್ಜುನ್ ಸಹ ಒಬ್ಬರು. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ (Allu Aravind) ಸಹ ಸಾಮಾನ್ಯದವರಲ್ಲ. ದಕ್ಷಿಣ ಭಾರತದ ಅತ್ಯಂತ ಯಶಸ್ವಿ ಹಾಗೂ ಹಿರಿಯ ನಿರ್ಮಾಪಕರಲ್ಲಿ ಒಬ್ಬರು. 1974 ರಿಂದಲೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಅಲ್ಲು ಅರವಿಂದ್ ಈ ವರೆಗೆ ಹಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಲ್ಲು ಅರ್ಜುನ್​ರ ಕೆಲವು ಹಿಟ್ ಸಿನಿಮಾಗಳನ್ನು ಸಹ ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದಾರೆ. ಅಪ್ಪನ ಸಿನಿಮಾದಲ್ಲಿ ನಟಿಸುವಾಗ ಸಂಭಾವನೆ ಕುರಿತಂತೆ ಚರ್ಚೆ ಹೇಗೆ ನಡೆಯುತ್ತದೆ, ಅಪ್ಪನಿಗಾಗಿ ವಿಶೇಷ ಡಿಸ್ಕೌಂಟ್​ಗಳನ್ನೇನಾದರೂ ಅಲ್ಲು ಅರ್ಜುನ್ ನೀಡುತ್ತಾರಾ? ಈ ಬಗ್ಗೆ ಹಿಂದೊಮ್ಮೆ ಸಂದರ್ಶನದಲ್ಲಿ ಅಲ್ಲು ಅರ್ಜುನ್ ಮಾತನಾಡಿದ್ದರು.

”ನನ್ನ ತಂದೆ ಬಹಳ ಜಾಣ ನಿರ್ಮಾಪಕ, ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ನನ್ನ ಸಂಭಾವನೆ ನೀಡಿಬಿಡುತ್ತಾರೆ. ಒಂದೊಮ್ಮೆ ಸಿನಿಮಾ ಸೂಪರ್ ಹಿಟ್ ಆಗಿಬಿಟ್ಟರೆ ಹೆಚ್ಚು ಹಣ ಕೇಳುತ್ತಾನೆ ಎಂಬ ಮುಂದಾಲೋಚನೆ ಅವರಿಗೆ” ಎಂದು ನಕ್ಕಿದ್ದಾರೆ ಅಲ್ಲು ಅರ್ಜುನ್, ಮುಂದುವರೆದು, ”ನಾವಿಬ್ಬರು ವೃತ್ತಿಪರರು, ನಾವು ಕೂತು ಮಾತನಾಡುತ್ತೇವೆ, ಚರ್ಚೆ ಮಾಡುತ್ತೇನೆ. ಎಲ್ಲದಕ್ಕೂ ಒಂದು ಮಾರುಕಟ್ಟೆ ದರ ಇರುತ್ತದೆ ಅದನ್ನು ಅವರು ನೀಡುತ್ತಾರೆ” ಎಂದಿದ್ದಾರೆ ನಟ ಅಲ್ಲು ಅರ್ಜುನ್.

ಅಪ್ಪನಿಗೆ ಡಿಸ್ಕೌಂಟ್ ಕೊಡುತ್ತೀರ ಎಂಬ ಸಂದರ್ಶಕಿಯ ಪ್ರಶ್ನೆಗೆ, ಖಂಡಿತ ಇಲ್ಲ. ಏಕೆಂದರೆ ಅವರು ನನಗೆ ಡಿಸ್ಕೌಂಟ್ ಕೊಡುವುದಿಲ್ಲ. ಒಂದೊಮ್ಮೆ ಸಿನಿಮಾ ದೊಡ್ಡ ಹಿಟ್ ಆದರೆ ಅವರು ನನಗೆ ಹೆಚ್ಚುವರಿ ಹಣವನ್ನು ನೀಡುವುದಿಲ್ಲ ಎಂದಿದ್ದಾರೆ ಅಲ್ಲು ಅರ್ಜುನ್. ಸಂಭಾವನೆ ವಿಷಯದಲ್ಲಿ ಚೌಕಾಸಿ ನಡೆಯುತ್ತದೆಯೇ? ಎಂಬ ಪ್ರಶ್ನೆಗೆ ಖಂಡಿತ ನಡೆಯುತ್ತದೆ, ಆದರೆ ಚೌಕಾಸಿಗೆ ನಾವು ಮತ್ತೊಬ್ಬ ವ್ಯಕ್ತಿ ನಮಗೆ ಸಹಾಯ ಮಾಡುತ್ತಾರೆ. ಗೀತಾ ಆರ್ಟ್ಸ್​ನ ವಾಸು ನಮ್ಮಿಬ್ಬರ ನಡುವೆ ಚೌಕಾಸಿ ಮಾಡಿ ಒಂದು ಮೊತ್ತಕ್ಕೆ ಇಬ್ಬರನ್ನೂ ಫಿಕ್ಸ್ ಮಾಡುತ್ತಾರೆ. ಇಬ್ಬರಿಗೂ ಒಪ್ಪಿಗೆ ಆಗುವ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡು ನಾವು ಸಿನಿಮಾ ಮಾಡುತ್ತೇವೆ” ಎಂದಿದ್ದಾರೆ ಅಲ್ಲು ಅರ್ಜುನ್.

ಸಂಭಾವನೆ ವಿಷಯ ಚರ್ಚೆಯಾದ ಬಳಿಕ ಒಂದು ವಾರ ಅಪ್ಪ ಹಾಗೂ ನಾನು ಸರಿಯಾಗಿ ಮಾತನಾಡುವುದಿಲ್ಲ. ಆದರೆ ಕೊನೆಗೆ ಬಂದು ನನ್ನ ಬೆನ್ನುತಟ್ಟಿ ನೀನು ಬಹಳ ಜಾಣ ವ್ಯಾಪಾರಿ, ನಿನ್ನ ಬಳಿ ಚೌಕಾಸಿ ಕಷ್ಟ ಎನ್ನುತ್ತಾರೆ. ನಾನು, ಹೌದು ನಿಮ್ಮ ಬಳಿ ಹೆಚ್ಚು ಚೌಕಾಸಿತನ ಮಾಡಲೇ ಬೇಕಾಗುತ್ತದೆ ಎನ್ನುತ್ತೇನೆ ಎಂದು ನಗುತ್ತಾ ಹೇಳಿದ್ದಾರೆ ಅಲ್ಲು ಅರ್ಜುನ್. ಅಲ್ಲು ಅರವಿಂದ್ ಸಹ ತಮ್ಮ ಮಗನ ಸಂಭಾವನೆ ಬಗ್ಗೆ ಇಂಥಹುದೇ ಉತ್ತರ ನೀಡಿದ್ದರು. ಸಿನಿಮಾ ಬಿಡುಗಡೆ ಆಗುವ ಒಂದು ವಾರಕ್ಕೆ ಮುನ್ನವೇ ಅವನಿಗೆ ಸಂಭಾವನೆ ನೀಡುತ್ತೇನೆ ಮತ್ತು ಸಂಭಾವನೆ ಪಡೆದ ಮೇಲೆ ಶಿಸ್ತಿನಿಂದ ಚಿತ್ರೀಕರಣದಲ್ಲಿ ಭಾಗವಹಿವುದನ್ನು ನಿರೀಕ್ಷಿಸುತ್ತೇನೆ. ಅವನೂ ಸಹ ಆ ಶಿಸ್ತನ್ನು ಎಂದಿಗೂ ತಪ್ಪಿಸಿಲ್ಲ ಎಂದು ಹಿಂದೊಮ್ಮೆ ಹೇಳಿದ್ದರು.

ಇದನ್ನೂ ಓದಿ: Pushpa 2: ಮತ್ತೊಂದು ಹಂತದ ಶೂಟಿಂಗ್​ಗೆ ಮೈ ಕೊಡವಿ ನಿಂತ ಅಲ್ಲು ಅರ್ಜುನ್​; ಇಲ್ಲಿದೆ ‘ಪುಷ್ಪ 2’ ಅಪ್​ಡೇಟ್​

ಅಲ್ಲು ಅರವಿಂದ್ ನಿರ್ಮಾಣದ ಹ್ಯಾಪಿ, ಬದ್ರಿನಾಥ್, ಸರೈನೋಡು, ಅಲಾ ವೈಕುಂಟಪುರಂಲೋ ಸಿನಿಮಾಗಳಲ್ಲಿ ಅಲ್ಲು ಅರ್ಜುನ್ ನಟಿಸಿದ್ದಾರೆ. ಅಲ್ಲು ಅರವಿಂದ್, ಅಲ್ಲು ಅರ್ಜುನ್​ಗೆ ಮಾತ್ರವೇ ಅಲ್ಲದೆ ಹಲವು ಟಾಪ್ ಹೀರೋಗಳೊಟ್ಟಿಗೆ ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಚಿರಂಜೀವಿಯ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅಲ್ಲು ಅರವಿಂದ್, ಪವನ್ ಕಲ್ಯಾಣ್, ರಾಮ್ ಚರಣ್, ವಿಜಯ್ ದೇವರಕೊಂಡ, ನಾಗ ಚೈತನ್ಯ, ನಿಖಿಲ್ ಅಕ್ಕಿನೇನಿ, ಗೋಪಿಚಂದ್, ನಿಖಿಲ್ ಸಿದ್ಧಾರ್ಥ್, ಸಾಯಿ ಧರಮ್, ಜಗಪತಿಬಾಬು, ಶ್ರೀಕಾಂತ್, ಹಿಂದಿಯ ಆಮಿರ್ ಖಾನ್, ತಮಿಳಿನ ವಿಜಯ್ ಇನ್ನೂ ಹಲವರೊಟ್ಟಿಗೆ ಸಿನಿಮಾ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ