AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa 2: ಮತ್ತೊಂದು ಹಂತದ ಶೂಟಿಂಗ್​ಗೆ ಮೈ ಕೊಡವಿ ನಿಂತ ಅಲ್ಲು ಅರ್ಜುನ್​; ಇಲ್ಲಿದೆ ‘ಪುಷ್ಪ 2’ ಅಪ್​ಡೇಟ್​

Pushpa 2 Shooting Update: ಜನರು ಫಸ್ಟ್​ ಗ್ಲಿಂಪ್ಸ್​ ಇಷ್ಟಪಟ್ಟಿರುವುದರಿಂದ ‘ಪುಷ್ಪ 2’ ತಂಡಕ್ಕೆ ಖುಷಿಯಾಗಿದೆ. ಇಂದಿನಿಂದ (ಏಪ್ರಿಲ್​ 10) ವಿಶಾಖಪಟ್ಟಣದಲ್ಲಿ ಮತ್ತೊಂದು ಹಂತದ ಶೂಟಿಂಗ್​ ಆರಂಭ ಆಗಲಿದೆ.

Pushpa 2: ಮತ್ತೊಂದು ಹಂತದ ಶೂಟಿಂಗ್​ಗೆ ಮೈ ಕೊಡವಿ ನಿಂತ ಅಲ್ಲು ಅರ್ಜುನ್​; ಇಲ್ಲಿದೆ ‘ಪುಷ್ಪ 2’ ಅಪ್​ಡೇಟ್​
ಅಲ್ಲು ಅರ್ಜುನ್
ಮದನ್​ ಕುಮಾರ್​
|

Updated on: Apr 10, 2023 | 8:30 AM

Share

ಮುಖ್ಯಾಂಶಗಳು

  • ವಿಶಾಖಪಟ್ಟಣದಲ್ಲಿ ಒಂದು ವಾರ ನಡೆಯಲಿದೆ ‘ಪುಷ್ಪ 2’ ಸಿನಿಮಾದ ಶೂಟಿಂಗ್​
  • ಬರ್ತ್​ಡೇ ಮುಗಿಸಿಕೊಂಡು ಚಿತ್ರೀಕರಣಕ್ಕೆ ಹಾಜರಾದ ನಟ ಅಲ್ಲು ಅರ್ಜುನ್​
  • ‘ಪುಷ್ಪ 2’ ಚಿತ್ರದ ಕೆಲಸಗಳಿಗೆ ಚುರುಕು ಮುಟ್ಟಿಸಿದ ನಿರ್ದೇಶಕ ಸುಕುಮಾರ್​

ನಟ ಅಲ್ಲು ಅರ್ಜುನ್​ (Allu Arjun) ಅವರ ಸಂಪೂರ್ಣ ಗಮನ ಈಗ ‘ಪುಷ್ಪ 2’ ಸಿನಿಮಾ ಮೇಲಿದೆ. ಅಭಿಮಾನಿಗಳು ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದು ಚಿತ್ರತಂಡಕ್ಕೆ ಗೊತ್ತು. ಆ ನಿರೀಕ್ಷೆಗೆ ತಕ್ಕಂತೆಯೇ ಇಡೀ ತಂಡ ಕೆಲಸ ಮಾಡುತ್ತಿದೆ. ನಿರ್ದೇಶಕ ಸುಕುಮಾರ್​ (Director Sukumar) ಮತ್ತು ಅವರ ಟೀಮ್​ ಹಗಲಿರುಳು ಶ್ರಮಿಸುತ್ತಿದೆ. ಅವರಿಗೆ ಅಲ್ಲು ಅರ್ಜುನ್​ ಸಾಥ್​ ನೀಡುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜು​ನ್​ ಜನ್ಮದಿನದ ಪ್ರಯುಕ್ತ ಫಸ್ಟ್​ ಗ್ಲಿಂಪ್ಸ್​ ಬಿಡುಗಡೆ ಆಯಿತು. ಅದನ್ನು ಕಂಡು ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಅಲ್ಲು ಅರ್ಜುನ್​ ಅವರು ಮುಂದಿನ ಹಂತದ ಶೂಟಿಂಗ್​ಗೆ ಸಜ್ಜಾಗಿದ್ದಾರೆ. ‘ಪುಷ್ಪ 2’ (Pushpa 2 Movie) ಸಿನಿಮಾದ ಕೆಲಸಗಳು ಈಗ ಬಿರುಸಿನಿಂದ ಸಾಗುತ್ತಿವೆ.

‘ಪುಷ್ಪ’ ಸಿನಿಮಾ ತೆರೆಕಂಡಿದ್ದು 2021ರ ಡಿಸೆಂಬರ್​ನಲ್ಲಿ. ಬಹಳ ತಿಂಗಳು ಗ್ಯಾಪ್​ ತೆಗೆದುಕೊಂಡು ‘ಪುಷ್ಪ 2’ ಚಿತ್ರಕ್ಕೆ ತಯಾರಿ ಮಾಡಿಕೊಳ್ಳಲಾಯ್ತು. ಅಂದುಕೊಂಡ ಪ್ಲ್ಯಾನ್​ ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ಈ ಸಿನಿಮಾ ದೊಡ್ಡ ಕ್ಯಾನ್ವಾಸ್​ನಲ್ಲಿ ಮೂಡಿಬರುತ್ತಿದೆ ಎಂಬುದಕ್ಕೆ ಈಗಾಗಲೇ ಫಸ್ಟ್​ ಗ್ಲಿಂಪ್ಸ್​ ವಿಡಿಯೋ ಮೂಲಕ ಸುಳಿವು ಸಿಕ್ಕಿದೆ. ಅಲ್ಲದೇ, ಕಥೆಯ ಎಳೆ ಕೂಡ ಬಹಿರಂಗ ಆಗಿದೆ.

‘ನನ್ನ ಪುಷ್ಪರಾಜ್​​ಗೆ ಹುಟ್ಟುಹಬ್ಬದ ಶುಭಾಶಯ’; ಅಲ್ಲು ಅರ್ಜುನ್​ಗೆ ಶುಭಾಶಯ ತಿಳಿಸಿದ ರಶ್ಮಿಕಾ ಮಂದಣ್ಣ

ಇದನ್ನೂ ಓದಿ
Image
‘ನನ್ನ ಪುಷ್ಪರಾಜ್​​ಗೆ ಹುಟ್ಟುಹಬ್ಬದ ಶುಭಾಶಯ’; ಅಲ್ಲು ಅರ್ಜುನ್​ಗೆ ಶುಭಾಶಯ ತಿಳಿಸಿದ ರಶ್ಮಿಕಾ ಮಂದಣ್ಣ
Image
Pushpa 2: ಕಥಾನಾಯಕನೇ ನಾಪತ್ತೆ; ಎಲ್ಲಿದ್ದಾನೆ ಪುಷ್ಪರಾಜ್​? ಅಲ್ಲು ಅರ್ಜುನ್​ ಜನ್ಮದಿನಕ್ಕೂ ಮುನ್ನ ದೊಡ್ಡ ಟ್ವಿಸ್ಟ್​
Image
Allu Arjun: ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಅಲ್ಲು ಅರ್ಜುನ್​; ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸ್ಟಾರ್​ ನಟ
Image
Sai Pallavi: ‘ಪುಷ್ಪ 2’ ಸಿನಿಮಾದಲ್ಲಿ ಸಾಯಿ ಪಲ್ಲವಿಗೆ ನೆಗೆಟಿವ್​ ಪಾತ್ರ? ಟಾಲಿವುಡ್​ ಅಂಗಳದಲ್ಲಿ ಗುಸುಗುಸು

ಜನರು ಫಸ್ಟ್​ ಗ್ಲಿಂಪ್ಸ್​ ಇಷ್ಟಪಟ್ಟಿರುವುದರಿಂದ ‘ಪುಷ್ಪ 2’ ತಂಡಕ್ಕೆ ಖುಷಿಯಾಗಿದೆ. ಅದೇ ಖುಷಿಯಲ್ಲಿ ಇಂದಿನಿಂದ (ಏಪ್ರಿಲ್​ 10) ವಿಶಾಖಪಟ್ಟಣದಲ್ಲಿ ಮತ್ತೊಂದು ಹಂತದ ಶೂಟಿಂಗ್​ ಆರಂಭ ಆಗಲಿದೆ. ಇಲ್ಲಿ ಒಂದು ವಾರಗಳ ಕಾಲ ಚಿತ್ರೀಕರಣ​ ನಡೆಯಲಿದೆ. ಅದಕ್ಕಾಗಿ ಅಲ್ಲು ಅರ್ಜುನ್​ ಅವರು ಭಾನುವಾರವೇ ವಿಶಾಖಪಟ್ಟಣದ ವಿಮಾನ ಹತ್ತಿದ್ದಾರೆ. ಬರ್ತ್​ ಡೇ ಸಲುವಾಗಿ ಬ್ರೇಕ್​ ಪಡೆದುಕೊಂಡಿದ್ದ ಅವರು ಈಗ ಮತ್ತೆ ಮೈ ಕೊಡವಿ ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದ್ದಾರೆ.

Pushpa 2: ‘ಕಾಂತಾರ’ ಸಿನಿಮಾದಿಂದ ಸ್ಫೂರ್ತಿ ಪಡೆಯಿತೇ ‘ಪುಷ್ಪ 2’ ಪೋಸ್ಟರ್​? ಕನ್ನಡದ ಮೇಲೆ ಕಣ್ಣಿಟ್ಟ ತೆಲುಗು ಚಿತ್ರರಂಗ

ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದವರು ನಟಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್​ ಬಹುಕೋಟಿ ರೂಪಾಯಿ ಬಂಡವಾಳ ಹೂಡುತ್ತಿದೆ. ಉತ್ತರ ಭಾರತದ ಮಂದಿ ಕೂಡ ಈ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಪುಷ್ಪ’ ಚಿತ್ರದ ಮೊದಲ ಪಾರ್ಟ್​ಗೆ ಹೋಲಿಸಿದರೆ ಎರಡನೇ ಪಾರ್ಟ್​ನಲ್ಲಿ ಕಥೆ ಹಿರಿದಾಗಲಿದೆ. ವಿದೇಶಕ್ಕೂ ಕಥೆ ಸಾಗಲಿದೆ. ತಿರುಪತಿ ಜೈಲಿನಿಂದ ಪುಷ್ಪರಾಜ್​ ತಪ್ಪಿಸಿಕೊಂಡಿದ್ದಾನೆ ಎಂಬುದನ್ನು ಫಸ್ಟ್​ ಗ್ಲಿಂಪ್ಸ್​ನಲ್ಲಿ ತೋರಿಸಲಾಗಿದೆ. ‘ಪುಷ್ಪ ಎಲ್ಲಿ’ ಎಂಬ ಹ್ಯಾಶ್​ ಟ್ಯಾಗ್​ ಟ್ರೆಂಡ್​ ಆಗಿದೆ. ಆದಷ್ಟು ಬೇಗ ಈ ಸಿನಿಮಾವನ್ನು ತೆರೆಮೇಲೆ ನೋಡಬೇಕು ಎಂದು ಫ್ಯಾನ್ಸ್​ ಹಂಬಲಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್