ರಜನೀಕಾಂತ್ ಜೀವನದಲ್ಲಿ ದೇವಿ ಭೈರವಿಯ ಪಾತ್ರ ಮಹತ್ವದ್ದು, ಹಲವು ಮೊದಲುಗಳಿಗೆ ಕಾರಣವಂತೆ ಆ ಜಗನ್ಮಾತೆ

Rajinikanth: ದೇವಿ ಭೈರವಿ ತಮ್ಮ ಜೀವನದ ಮೇಲೆ ಬೀರಿದ ಪ್ರಭಾವದ ಬಗ್ಗೆ ನಟ ರಜಿನೀಕಾಂತ್ ಮಾತನಾಡಿದ್ದಾರೆ.

ರಜನೀಕಾಂತ್ ಜೀವನದಲ್ಲಿ ದೇವಿ ಭೈರವಿಯ ಪಾತ್ರ ಮಹತ್ವದ್ದು, ಹಲವು ಮೊದಲುಗಳಿಗೆ ಕಾರಣವಂತೆ ಆ ಜಗನ್ಮಾತೆ
ರಜನೀಕಾಂತ್-ದೇವಿ ಭೈರವಿ
Follow us
|

Updated on: Apr 29, 2023 | 8:38 PM

ನಟ ರಜನೀಕಾಂತ್ (Rajinikanth) ದೇಶದ ನಂಬರ್ 1 ಸೂಪರ್ ಸ್ಟಾರ್. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯೊಬ್ಬ ದೇಶದ ಸೂಪರ್ ಸ್ಟಾರ್ ಆಗುವುದು ಸಾಮಾನ್ಯ ಸಂಗತಿಯಲ್ಲ. ಅದ್ಭುತವಾದ ಪ್ರತಿಭೆಯ ಜೊತೆಗೆ ಅದೃಷ್ಟ, ಆಶೀರ್ವಾದವೂ ಜೊತೆಗಿದ್ದರಷ್ಟೆ ವ್ಯಕ್ತಿಯೊಬ್ಬ ರಜನೀಕಾಂತ್ ಆಗಲು ಸಾಧ್ಯ. ಸ್ವತಃ ರಜನೀಕಾಂತ್ ಅವರೇ ಹೇಳಿರುವಂತೆ ಅವರು ಈ ಹಂತಕ್ಕೆ ಬೆಳೆದಿರುವುದು ದೇವರ ಆಶೀರ್ವಾದದಿಂದ. ಅವಕಾಶ ಸಿಕ್ಕಾಗೆಲ್ಲ ತಮ್ಮ ಜೀವನದ ಏಳು-ಬೀಳುಗಳ ಬಗ್ಗೆ ಮುಕ್ತವಾಗಿ ಮಾತನಾಡುವ ರಜನೀಕಾಂತ್, ತಮಗೆ ಸಹಾಯ ಮಾಡಿದವರನ್ನು, ದೇವರು ತೋರಿಸಿದ ಕೃಪೆಯನ್ನು ತಪ್ಪದೆ ನೆನೆಯುತ್ತಾರೆ. ಅಂತೆಯೇ ಆಂಧ್ರದ ವಿಜಯವಾಡನಲ್ಲಿ ನಿನ್ನೆ ಏಪ್ರಿಲ್ 28ರಂದು ನಡೆದ ಎನ್​ಟಿಆರ್ (NTR) 100 ಕಾರ್ಯಕ್ರಮದಲ್ಲಿ ತಮ್ಮ ಜೀವನದಲ್ಲಿ ಜಗನ್ಮಾತೆ ಭೈರವಿ (Bhairavi) ದೇವಿಯ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ಎನ್​ಟಿಆರ್ ಬಗ್ಗೆ ಮಾತನಾಡಲು ಆರಂಭಿಸಿದ ನಟ ರಜನೀಕಾಂತ್, ”ನಾನು ನನ್ನ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ನೋಡಿದ ಸಿನಿಮಾ ‘ಪಾತಾಳಭೈರವಿ’. ಆಗಿನ್ನೂ ನನಗೆ ಆರೇಳು ವರ್ಷವಿರಬಹುದು. ಸಿನಿಮಾದಲ್ಲಿ ಬರುವ ಭೈರವಿ ದೇವಿಯ ದೊಡ್ಡ ಮೂರ್ತಿ ನನ್ನ ಮನದಲ್ಲಿ ಅಚ್ಛಳಿಯದೇ ಉಳಿದುಬಿಟ್ಟಿತು. ಆ ಬಳಿಕ ಯಾವುದೇ ಮಹಿಳೆಯ ಮೂರ್ತಿಯನ್ನು ಕಂಡರು ಇದು ಭೈರವಿ ದೇವಿಯಾ ಎಂದು ಕೇಳುತ್ತಿದ್ದೆ” ಎಂದು ನೆನಪಿಸಿಕೊಂಡರು. 1951 ರಲ್ಲಿ ಪಾತಾಳ ಭೈರವಿ ಸಿನಿಮಾ ಬಿಡುಗಡೆ ಆಗಿತ್ತು, ಸಿನಿಮಾದಲ್ಲಿ ಎನ್​ಟಿಆರ್ ನಾಯಕರಾಗಿ ನಟಿಸಿದ್ದರು. ಈ ಸಿನಿಮಾ ಕನ್ನಡದಲ್ಲಿಯೂ ಬಂದಿದೆ.

ಅದಾದ ಬಳಿಕ ನನ್ನ ಜೀವನದ ಮೊತ್ತ ಮೊದಲ ಸಿನಿಮಾದಲ್ಲಿ ನಟಿಸುವ ಅವಕಾಶ ಬಂತು. ‘ಅಪೂರ್ವ ರಾಗಂಗಳ್’ ಸಿನಿಮಾದ ಹೆಸರು. ಆ ಸಿನಿಮಾಕ್ಕಾಗಿ ನಾನು ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಹೇಳಿದ ಮೊತ್ತ ಮೊದಲ ಸಂಭಾಷಣೆ, ‘ಇದು ಭೈರವಿಯೋಡ ವೀಡಾ?’ (ಇದು ಭೈರವಿಯ ಮನೆಯಾ?) ಎಂಬುದೇ ಆಗಿತ್ತು ಎಂದು ರಜನೀಕಾಂತ್ ನೆನಪಿಸಿಕೊಂಡರು.

ಅದಾದ ಬಳಿಕ ನಾನು ಕೆಲವು ವರ್ಷ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ, ಪೋಷಕ ನಟನಾಗಿ ನಟಿಸುತ್ತಿದ್ದೆ ಆಗ ಒಬ್ಬ ನಿರ್ದೇಶಕ ಹಾಗೂ ನಿರ್ಮಾಪಕರು ನನ್ನನ್ನು ನಾಯಕ ನಟನನ್ನಾಗಿ ಹಾಕಿಕೊಂಡು ಸಿನಿಮಾ ಮಾಡಲು ಮುಂದಾದರು. ಆದರೆ ನಾನು ಅದಾಗಲೇ ಪೋಷಕ ಪಾತ್ರಗಳು, ವಿಲನ್ ಪಾತ್ರಗಳಲ್ಲಿ ಬಹಳ ಬ್ಯುಸಿಯಾಗಿದ್ದೆ, 10-12 ದಿನದ ಶೂಟಿಂಗ್, ಕೈತುಂಬ ದುಡ್ಡು ಅಷ್ಟೇ ಸಾಕು, ನಾಯಕನಾದರೆ ಹೆಚ್ಚು ದಿನ ಶೂಟಿಂಗ್ ಮಾಡಬೇಕು, ಫ್ಲಾಪ್ ಆದರೆ ಜವಾಬ್ದಾರಿ ಹೊರಬೇಕು ಅದೆಲ್ಲ ಬೇಡ ಎಂದುಕೊಂಡು ಆಗುವುದಿಲ್ಲ ಎಂದೆ. ಆದರೆ ಅವರು ಬಲವಂತವಾಗಿ ಸಿನಿಮಾದ ಕತೆ ಹೇಳಿದರು, ಕೊನೆಗೆ ಸಿನಿಮಾದ ಹೆಸರು ಭೈರವಿ ಎಂದು ಹೇಳಿದರು. ಅದನ್ನು ಕೇಳಿದ ಕೂಡಲೇ ನಾನು ಒಪ್ಪಿಕೊಂಡೆ. ಅದಾದ ಬಳಿಕ ನಾಯಕ ನಟನಾಗಿ ಯಶಸ್ಸು ಗಳಿಸಿದೆ” ಎಂದರು ರಜನಿ. ಮಾತು ಮುಂದುವರೆಸಿ, ”ಆ ಜಗನ್ಮಾತೆ ಭೈರವಿ ದೇವಿ ಪ್ರಸಾದದಿಂದ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಯಿತು. ಹಲವು ಬದಲಾವಣೆಗಳಿಗೆ ತಾಯಿ ಕಾರಣಳಾದಳು” ಎಂಬರ್ಥದ ಮಾತುಗಳನ್ನಾಡಿದರು.

ಇನ್ನಷ್ಟು ಓದಿ:ರಜಿನಿಕಾಂತ್​- ನಾನು ಒಳ್ಳೆಯ ಫ್ರೆಂಡ್ಸ್​, ಆದರೆ ಒಂದು ವಿಚಾರದ ಹೊರತಾಗಿ; ಎಂದ ಕಮಲ್​ ಹಾಸನ್​; ಏನದು?

ಅದೇ ಕಾರ್ಯಕ್ರಮದಲ್ಲಿ ತಾವು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಎನ್​ಟಿಆರ್ ಅವರನ್ನು ನೋಡಿದ ಸಂದರ್ಭ ನೆನಪಿಸಿಕೊಂಡರು, ”1961 ರಲ್ಲಿ ಎನ್​ಟಿಆರ್ ನಟಿಸಿದ್ದ ಲವ-ಕುಶ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಬೆಂಗಳೂರಿನ ಮಿನರ್ವ ಥಿಯೇಟರ್​ನಲ್ಲಿ ಸಿನಿಮಾ ದೊಡ್ಡ ಯಶಸ್ಸಾಗಿತ್ತು, ಆಗ ಅಲ್ಲಿಗೆ ಎನ್​ಟಿಆರ್, ಅಂಜಲಿ ದೇವಿ ಇನ್ನೂ ಕೆಲವರು ಬಂದಿದ್ದರು. ಅವರನ್ನು ನೋಡಲು ಭಾರಿ ಜನ ಸೇರಿದ್ದರು, ಆಗಿನ್ನೂ ನನಗೆ 13 ವರ್ಷಗಳಿರಬಹುದು ನಾನು ನೋಡಲು ಹೋದೆ ಆದರೆ ನನಗೆ ಕಾಣಲಿಲ್ಲ, ಆಗ ಯಾರೋ ನನ್ನನ್ನು ಮೇಲಕ್ಕೆತ್ತಿದರು ಆಗ ಎನ್​ಟಿಆರ್ ಕಾಣಿಸಿದರು, ಶರ್ಟು, ಪಂಚೆ ಧರಿಸಿ ಅದ್ಭುತವಾಗಿ ಕಾಣುತ್ತಿದ್ದರು” ಎಂದು ನೆನಪು ಮಾಡಿಕೊಂಡಿದ್ದಾರೆ ರಜನೀಕಾಂತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ