Jr NTR: ಜೂ ಎನ್ಟಿಆರ್ ತೊಟ್ಟಿರುವ ಶರ್ಟಿನ ಬೆಲೆ ಎಷ್ಟು? ವಿಶೇಷತೆಗಳೇನು?
Jr NTR: ಈ ಚಿತ್ರದಲ್ಲಿ ಜೂ ಎನ್ಟಿಆರ್ ಧರಿಸಿರುವ ಟಿ-ಶರ್ಟ್ ನೋಡಲು ಸರಳವಾಗಿ ಕಂಡರು ಬೆಲೆ ಮಾತ್ರ ಬಹಳ ದುಬಾರಿ.
ಸಿನಿಮಾ ಸ್ಟಾರ್ಗಳದ್ದು (Movie Star) ಐಶಾರಾಮಿ ಜೀವನ. ದುಬಾರಿ ವಿದೇಶಿ ಕಾರುಗಳು, ಐಶಾರಾಮಿ ವಿಶಾಲ ಮನೆಗಳು, ಕೈಗೊಬ್ಬ-ಕಾಲಿಗೊಬ್ಬರು ಆಳುಗಳು, ಸ್ಟಾರ್ ನಟ-ನಟಿಯರು ತೊಡುವ ಬಟ್ಟೆಗಳು (Fashion) ಸಹ ಭಾರಿ ದೊಡ್ಡ ಮೊತ್ತದವೇ ಆಗಿರುತ್ತವೆ. ವಿಶೇಷ ಕಾರ್ಯಕ್ರಮಗಳಿಗಲ್ಲದೆ ಸಾಮಾನ್ಯ ಸಂದರ್ಭದಲ್ಲಿ ಸಹ ಸ್ಟಾರ್ ನಟ-ನಟಿಯರು ತೊಡುವ ಬಟ್ಟೆಗಳಿಗೂ ಸಾವಿರಾರು ರುಪಾಯಿ ಹಣ ನೀಡಿರುತ್ತಾರೆ. ತೆಲುಗಿನ ಸ್ಟಾರ್ (Tollywood Star) ನಟ ಜೂ ಎನ್ಟಿಆರ್ (Jr NTR) ಸಹ ಇದಕ್ಕೆ ಹೊರತಲ್ಲ.
ಜೂ ಎನ್ಟಿಆರ್ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಿನಿಮಾದಲ್ಲಿ ಅವರೆದುರು ವಿಲನ್ ಆಗಿ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅನ್ನು ಖುದ್ದಾಗಿ ಸಿನಿಮಾ ಸೆಟ್ಗೆ ಜೂ ಎನ್ಟಿಆರ್ ಸ್ವಾಗತಿಸಿದ್ದು, ಸೈಫ್ ಅಲಿ ಖಾನ್ ಹಾಗೂ ಜೂ ಎನ್ಟಿಆರ್ ಒಟ್ಟಿಗಿರುವ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಆ ಚಿತ್ರಗಳಲ್ಲಿ ಜೂ ಎನ್ಟಿಆರ್ ತೊಟ್ಟಿರುವ ಟಿ-ಶರ್ಟ್ ಬಹಳ ಗಮನ ಸೆಳೆದಿದೆ.
ಕಪ್ಪು ಬಣ್ಣದ ಹುಡಿ ಮಾದರಿಯ ಟಿ ಶರ್ಟ್ ಅನ್ನು ಜೂ ಎನ್ಟಿಆರ್ ಧರಿಸಿದ್ದಾರೆ. ಟಿ-ಶರ್ಟ್ನ ಒಂದು ಭಾಗದಲ್ಲಿ ಮಾತ್ರವೇ ಡಿಸೈನ್ ಇದೆ. ನೋಡಲು ಸುಮಾರು 500 ರಿಂದ 1000 ಟಿ-ಶರ್ಟ್ ಇರಬಹುದೇನೋ ಎನಿಸುವಂತೆ ಕಾಣುತ್ತದೆಯಾದರೂ ಈ ಟಿ-ಶರ್ಟ್ನ ಬೆಲೆ ಬರೋಬ್ಬರಿ 25,000 ರುಪಾಯಿಗಳು!
ಚಿತ್ರದಲ್ಲಿ ಜೂ ಎನ್ಟಿಆರ್ ಧರಿಸಿರುವ ಟಿ-ಶರ್ಟ್ ಪೆರಿನಿಯಾ ಹೆಸರಿನ ಸಂಸ್ಥೆಯದ್ದು. ಆನ್ಲೈನ್ ಮಳಿಗೆ ಹೊಂದಿರುವ ಪೆರಿನಿಯಾ ಕೇವಲ ಡಿಸೈನರ್ ಬಟ್ಟೆಗಳನ್ನಷ್ಟೆ ಮಾರಾಟ ಮಾಡುತ್ತದೆ. ಜೂ ಎನ್ಟಿಆರ್ ಧರಿಸಿರುವುದು ಇದೇ ಸಂಸ್ಥೆಯ ಡಿಸೈನರ್ ಟಿ-ಶರ್ಟ್, ಇದರ ಮೇಲಿರುವ ಡಿಸೈನ್ ಅನ್ನು ಯಾವುದೇ ಯಂತ್ರಗಳನ್ನು ಬಳಸದೆ ಕೇವಲ ಕೈಯಿಂದ ಮಾಡಿರುವುದು. ಹಾಗಾಗಿಯೇ ಈ ಟಿ-ಶರ್ಟ್ಗೆ ಅಷ್ಟು ದುಬಾರಿ ಬೆಲೆ.
ಶೇರ್ವಾನಿ, ಬ್ಲೇಜರ್, ಜಾಕೆಟ್, ಶರ್ಟ್, ಸಮ್ಮರ್ ಶರ್ಟ್ ಇನ್ನೂ ಹಲವು ಬಗೆಯ ಪುರುಷರ ಉಡುಗೆಗಳನ್ನು ಪೆರಿನಿಯಾ ಮಾರಾಟ ಮಾಡುತ್ತದೆ. ಈ ವೆಬ್ಸೈಟ್ನಲ್ಲಿ ಪುರುಷರ ಮಾತ್ರವೇ ಅಲ್ಲದೆ ಮಹಿಳೆಯರ ಉಡುಪು ಹಾಗೂ ಆಭರಣಗಳ ಮಾರಾಟವೂ ಮಾಡಲಾಗುತ್ತದೆ. ಆದರೆ ಕೇವಲ ಜನಪ್ರಿಯ ಡಿಸೈನರ್ಗಳ ಉಡುಗೆಗಳನ್ನಷ್ಟೆ ವೆಬ್ಸೈಟ್ನಲ್ಲಿ ಮಾರಾಟ ಮಾಡಲಾಗುತ್ತದೆ ಹಾಗೂ ಒಂದೊಂದು ಬಟ್ಟೆಯ ಕೆಲವೇ ಪೀಸ್ಗಳನ್ನಷ್ಟೆ ಮಾರಾಟಕ್ಕೆ ಇಡಲಾಗಿರುತ್ತದೆ. ಹಾಗಾಗಿ ಅತ್ಯಂತ ಬೇಗ ಬಟ್ಟೆಗಳು ಮಾರಾಟವಾಗುತ್ತವೆ.
ಜೂ ಎನ್ಟಿಆರ್ ಸರಳವಾಗಿ ಕಾಣುವ ಆದರೆ ಸರಳವಾದ ಡಿಸೈನ್ಗಳನ್ನು ಹೊಂದಿರುವ ಬಟ್ಟೆಗಳನ್ನು ತೊಡಲು ಇಷ್ಟಪಡುತ್ತಾರೆ. ಆಸ್ಕರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಚಿನ್ನದ ಬಣ್ಣದ ಸಿಂಹದ ಮುಖವುಳ್ಳ ಕಪ್ಪು ಬಣ್ಣದ ಬ್ಲೇಜರ್ ಧರಿಸಿದ್ದರು ಜೂ ಎನ್ಟಿಆರ್. ಅದೂ ಸಹ ಫ್ಯಾಷನ್ ಪ್ರಿಯರ ಗಮನ ಸೆಳೆದಿತ್ತು. ಇದೀಗ ಈ ಕಪ್ಪು ಬಣ್ಣದ ಟಿ-ಶರ್ಟ್ ಸಹ ಸಖತ್ ಗಮನ ಸೆಳೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ