Katrina Kaif: ಬರ್ತ್​​ಡೇ ದಿನ ಕಡಲ ತೀರದಲಿ ಕತ್ರಿನಾ ಕೈಫ್​-ವಿಕ್ಕಿ ಕೌಶಲ್ ರೊಮ್ಯಾನ್ಸ್

ಸೆಲೆಬ್ರಿಟಿಗಳು ಹುಟ್ಟುಹಬ್ಬದ ಆಚರಣೆಗೆ ವಿದೇಶಕ್ಕೆ ಅಥವಾ ಬೇರೆ ಸ್ಥಳಕ್ಕೆ ತೆರಳುತ್ತಾರೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಕೂಡ ಹಾಗೆಯೇ ಮಾಡಿದ್ದಾರೆ.

Katrina Kaif: ಬರ್ತ್​​ಡೇ ದಿನ ಕಡಲ ತೀರದಲಿ ಕತ್ರಿನಾ ಕೈಫ್​-ವಿಕ್ಕಿ ಕೌಶಲ್ ರೊಮ್ಯಾನ್ಸ್
ಕತ್ರಿನಾ-ವಿಕ್ಕಿ
Follow us
ರಾಜೇಶ್ ದುಗ್ಗುಮನೆ
|

Updated on: Jul 17, 2023 | 7:52 AM

ನಟಿ ಕತ್ರಿನಾ ಕೈಫ್ (Katrina Kaif) ಅವರು ಜುಲೈ 16ರಂದು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳ ಹಾಗೂ ಕುಟುಂಬದವರ ಕಡೆಯಿಂದ ಶುಭಾಶಯ ಬಂದಿದೆ. ಕತ್ರಿನಾ ಪತಿ ವಿಕ್ಕಿ ಕೌಶಲ್ (Vicky Kaishal) ಕೂಡ ವಿಶೇಷ ಫೋಟೋ ಹಂಚಿಕೊಂಡು ಪತ್ನಿಗೆ ವಿಶ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಪೋಸ್ಟ್ ಮಾಡಿ 12 ಗಂಟೆಗಳಲ್ಲಿ ಈ ಫೋಟೋಗೆ 25 ಲಕ್ಷ ಲೈಕ್ಸ್ ಸಿಕ್ಕಿದೆ. ಕತ್ರಿನಾ ಅಭಿಮಾನಿಗಳು ಕೂಡ ಈ ಫೋಟೋನ ಇಷ್ಟಪಟ್ಟಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ವಿವಿಧ ಪೇಜ್​​ಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹುಟ್ಟುಹಬ್ಬದ ಆಚರಣೆಗೆ ವಿದೇಶಕ್ಕೆ ಅಥವಾ ಬೇರೆ ಸ್ಥಳಕ್ಕೆ ತೆರಳುತ್ತಾರೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಕೂಡ ಹಾಗೆಯೇ ಮಾಡಿದ್ದಾರೆ. ಜನ್ಮದಿನಕ್ಕೂ ಕೆಲವೇ ದಿನ ಮೊದಲು ಇವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿದೇಶಕ್ಕೆ ತೆರಳಿ ಕತ್ರಿನಾ ಅವರ ಬರ್ತ್​ಡೇ ಆಚರಿಸಲಾಗಿದೆ ಎಂದು ಅನೇಕರು ಊಹಿಸಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಬೀಚ್​ ಪಕ್ಕ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಕತ್ರಿನಾ ಅವರು ವಿಕ್ಕಿನ ತಬ್ಬಿ ನಿಂತಿದ್ದಾರೆ. ‘ನಿನ್ನ ಮ್ಯಾಜಿಕ್​ನ ಪ್ರತಿದಿನ ವಿಸ್ಮಯ. ಹುಟ್ಟುಹಬ್ಬದ ಶುಭಾಶಯ ಮೈ ಲವ್’ ಎಂದು ವಿಕ್ಕಿ ಈ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ.

ಇದನ್ನೂ ಓದಿ: ನಟಿ ಕತ್ರಿನಾ ಕೈಫ್​ ಜೊತೆ 20 ವರ್ಷಗಳಿಂದ ಅತಿ ಹೆಚ್ಚು ಸಮಯ ಕಳೆದ ವ್ಯಕ್ತಿ ಇವರೇ

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಬೇರೆ ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಮೇರಿ ಕ್ರಿಸ್​​ಮಸ್’ ಹಾಗೂ ‘ಟೈಗರ್ 3’ ಸಿನಿಮಾ ಶೂಟಿಂಗ್​ನಲ್ಲಿ ಕತ್ರಿನಾ ಬ್ಯುಸಿ ಆಗಿದ್ದಾರೆ. ‘ಟೈಗರ್ 3’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ವಿಕ್ಕಿ ಅವರು ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಮೂಲಕ ಈ ವರ್ಷದ ಆರಂಭದಲ್ಲೇ ಗೆಲುವು ಕಂಡಿದ್ದಾರೆ. ಸದ್ಯ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳು ಇವೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ