Kannappa: ಮೊದಲ ಬಾರಿ ತೆಲುಗು ಸಿನಿಮಾ ಒಪ್ಪಿಕೊಂಡ ಅಕ್ಷಯ್​ ಕುಮಾರ್​

ಹಲವು ಸ್ಟಾರ್​ ಕಲಾವಿದರು ‘ಕಣ್ಣಪ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಷ್ಣು ಮಂಚು ಪ್ರಮುಖ ಪಾತ್ರ ಮಾಡುತ್ತಿದ್ದು, ಇನ್ನುಳಿದ ಪಾತ್ರಗಳಿಗಾಗಿ ಸ್ಟಾರ್​ ಕಲಾವಿದರನ್ನು ಆಯ್ಕೆ ಮಾಡಲಾಗುತ್ತಿದೆ. ಬಾಲಿವುಡ್​ ಸೂಪರ್ ಸ್ಟಾರ್ ಅಕ್ಷಯ್​ ಕುಮಾರ್​ ಕೂಡ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ರಮೇಶ್​ ಬಾಲಾ ಮಾಹಿತಿ ಹಂಚಿಕೊಂಡಿದ್ದಾರೆ.

Kannappa: ಮೊದಲ ಬಾರಿ ತೆಲುಗು ಸಿನಿಮಾ ಒಪ್ಪಿಕೊಂಡ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್

Updated on: Apr 08, 2024 | 3:21 PM

ಮುಖೇಶ್​ ಕುಮಾರ್​ ಸಿಂಗ್​ ನಿರ್ದೇಶನ ಮಾಡುತ್ತಿರುವ ತೆಲುಗಿನ ‘ಕಣ್ಣಪ್ಪ’ (Kannappa Movie) ಸಿನಿಮಾದ ಪಾತ್ರವರ್ಗ ಹಿರಿದಾಗುತ್ತಿದೆ. ವಿಷ್ಣು ಮಂಚು ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಪುರಾಣದ ಕಥೆಯನ್ನು ಆಧರಿಸಿ ಸಿದ್ಧವಾಗುತ್ತಿರುವ ಈ ಸಿನಿಮಾ ತಂಡಕ್ಕೆ ಈಗ ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಸೇರ್ಪಡೆ ಆಗಿದ್ದಾರೆ. ವಿಶೇಷ ಏನೆಂದರೆ ಇದು ಅಕ್ಷಯ್​ ಕುಮಾರ್ ಒಪ್ಪಿಕೊಂಡ ಮೊದಲ ತೆಲುಗು ಸಿನಿಮಾ (Telugu Movie). ಹಾಗಾಗಿ ಅವರ ಅಭಿಮಾನಿಗಳಲ್ಲಿ ‘ಕಣ್ಣಪ್ಪ’ ಬಗ್ಗೆ ನಿರೀಕ್ಷೆ ಮೂಡುವಂತಾಗಿದೆ. ಬಾಲಿವುಡ್​ನಲ್ಲಿ ಹೀರೋ ಆಗಿ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ಅಕ್ಷಯ್​ ಕುಮಾರ್​ ಅವರು ತೆಲುಗಿನ ‘ಕಣ್ಣಪ್ಪ’ ಚಿತ್ರದಲ್ಲಿ ಯಾವ ಪಾತ್ರ ಮಾಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇಂಡಸ್ಟ್ರಿ ಟ್ರ್ಯಾಕರ್​ ರಮೇಶ್​ ಬಾಲಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ‘ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ವಿಷ್ಣು ಮಂಚು ಅವರ ಮಹತ್ವಾಕಾಂಕ್ಷಿ ಸಿನಿಮಾವಾದ ‘ಕಣ್ಣಪ್ಪ’ ಚಿತ್ರದ ಪಾತ್ರವರ್ಗಕ್ಕೆ ಬಾಲಿವುಡ್​ನ ಸೂಪರ್​ ಸ್ಟಾರ್​ ಅಕ್ಷಯ್​ ಕುಮಾರ್​ ಸೇರ್ಪಡೆ ಆಗಿದ್ದಾರೆ. ಪ್ರಭಾಸ್​, ಪ್ರಭುದೇವ, ಮೋಹನ್​ಲಾಲ್​, ಶರತ್​ಕುಮಾರ್​ ಮುಂತಾದವರ ಬಳಿಕ ಅಕ್ಷಯ್​ ಕುಮಾರ್​ ಅವರ ಗ್ರ್ಯಾಂಡ್​ ಎಂಟ್ರಿ ಆಗಿದೆ’ ಎಂದು ಅವರು ಪೋಸ್ಟ್​ ಮಾಡಿದ್ದಾರೆ.

ಅನೇಕ ಸ್ಟಾರ್​ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಕೂಡ ಒಂದು ಪಾತ್ರ ಮಾಡುತ್ತಾರೆ ಎಂದು ಸುದ್ದಿ ಆಗಿದೆ. ಮೋಹನ್ ಬಾಬು, ಮಧೂ, ಬ್ರಹ್ಮಾನಂದಂ, ಮುಖೇಶ್​ ರಿಷಿ, ಕುಶಾಲ್​ ಮುಂತಾದವರು ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪಾತ್ರವರ್ಗದ ಕಾರಣದಿಂದ ‘ಕಣ್ಣಪ್ಪ’ ಸಿನಿಮಾ ಹೊಸ ಕ್ರೇಜ್​ ಸೃಷ್ಟಿ ಮಾಡಿದೆ.

ಇದನ್ನೂ ಓದಿ: ‘ಬದುಕುವ ಸಾಧ್ಯತೆ ಶೇ.30 ಮಾತ್ರ’: ಇದು ಅಕ್ಷಯ್​ ಕುಮಾರ್​ ಜೀವನದ ಅಪಾಯಕಾರಿ ಸ್ಟಂಟ್

ಬಾಲಿವುಡ್​ನಲ್ಲಿ ಅಕ್ಷಯ್​ ಕುಮಾರ್​ ಅವರು ಬ್ಯುಸಿ ಆಗಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಹಲವು ಸಿನಿಮಾಗಳು ಸೋಲು ಕಂಡಿವೆ. ಆದ್ದರಿಂದ ಅವರು ದಕ್ಷಿಣ ಭಾರತದ ಸಿನಿಮಾ ಒಪ್ಪಿಕೊಂಡಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅಕ್ಷಯ್​ ಕುಮಾರ್​ ಅಭಿನಯಿಸಿರುವ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಏಪ್ರಿಲ್​ 10ರಂದು ಈದ್​ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಅವರು ಟೈಗರ್​ ಶ್ರಾಫ್​ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us