‘ಜವಾನಿ ಜಾನೇಮನ್’ ಸಿನಿಮಾ ಮೂಲಕ ಬಾಲಿವುಡ್ಗೆ ಕಾಲಿಟ್ಟ ನಟಿ ಅಲಾಯಾ ಎಫ್ ಈಗ ಮತ್ತೊಂದು ಸಿನಿಮಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದ ಯು-ಟರ್ನ್ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ಮಾಡಿದ್ದ ಪಾತ್ರದಲ್ಲಿ ಅಲಾಯಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದಲ್ಲಿ ಕಾಣಿಸಿಕೊಳ್ಳೋಕೆ ಅವರು ಸಾಕಷ್ಟು ಎಗ್ಸೈಟ್ ಆಗಿದ್ದಾರೆ.
ನಿರ್ಮಾಪಕಿ ಏಕ್ತಾ ಕಪೂರ್ ಯು-ಟರ್ನ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುತ್ತಿರುವುದಾಗಿ ಸೋಮವಾರ ಘೋಷಣೆ ಮಾಡಿದ್ದಾರೆ. ಆರಿಫ್ ಖಾನ್ ಹೆಸರಿನ ಯುವ ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಅಲಾಯಾ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಶೀಘ್ರವೇ ಸೆಟ್ಟೇರಲಿದೆ.
After it’s blockbuster success in Tamil, Telugu & Kannada, coupled with awards galore, super excited for our adaptation of U-Turn!
In life, there are no shortcuts. But sometimes you have to break the rules and take a #UTurn to change the course of your journey. pic.twitter.com/pAu88Gvwnd
— Ekta Kapoor (@ektarkapoor) July 5, 2021
ಪವನ್ ಕುಮಾರ್ ನಿರ್ದೇಶನದ ಈ ಸಿನಿಮಾ 2016ರಲ್ಲಿ ಕನ್ನಡದಲ್ಲಿ ತೆರೆಗೆ ಬಂದು ಹಿಟ್ ಆಗಿತ್ತು. 2017ರಲ್ಲಿ ಮಲಯಾಳಂನಲ್ಲಿ ಈ ಸಿನಿಮಾ ರಿಮೇಕ್ ಆಗಿತ್ತು. 2018ರಲ್ಲಿ ತೆಲುಗು-ತಮಿಳು ಸೇರಿ ಒಟ್ಟು 8 ಭಾಷೆಗಳಲ್ಲಿ ಚಿತ್ರ ತೆರೆಗೆ ಬಂದಿದೆ.
ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಯು-ಟರ್ನ್, ರಸ್ತೆ ಸುರಕ್ಷತೆಯ ವಿಚಾರವನ್ನು ಇಟ್ಟುಕೊಂಡು ಹೆಣೆದ ಸಿನಿಮಾ. ರಸ್ತೆಯಲ್ಲಿ ಸಂಚರಿಸುವಾಗ ಎಲ್ಲೆಂದರಲ್ಲಿ ಯು ಟರ್ನ್ ತೆಗೆದುಕೊಳ್ಳುವವರಿಗೆ ಈ ಸಿನಿಮಾ ಎಚ್ಚರಿಕೆ ಸಂದೇಶ ನೀಡಿತ್ತು. ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರೋಜರ್ ನಾರಾಯಣ್, ರಾಧಿಕಾ ಚೇತನ್, ದಿಲೀಪ್ ರಾಜ್ ಮೊದಲಾದವರು ನಟಿಸಿದ್ದಾರೆ.
ಇದನ್ನೂ ಓದಿ: ರಿಮೇಕ್ ವಿಚಾರದಲ್ಲಿ ದಾಖಲೆ ಬರೆದ ಪವನ್ ಕುಮಾರ್ ಯು-ಟರ್ನ್ ಸಿನಿಮಾ