‘ನಾಟು ನಾಟು..’ ಹಾಡಿನ ಸೆಳೆತಕ್ಕೆ ಸಿಕ್ಕ ಆಲಿಯಾ ಭಟ್​; ರಶ್ಮಿಕಾ ಜೊತೆ ಹೆಜ್ಜೆ ಹಾಕಿದ ಸುಂದರಿ

|

Updated on: Apr 03, 2023 | 11:38 AM

NMACC Event: ಕಲರ್​ಫುಲ್​ ಕಾರ್ಯಕ್ರಮದಲ್ಲಿ ‘ನಾಟು ನಾಟು..’ ಹಾಡಿಗೆ ಡ್ಯಾನ್ಸ್​ ಮಾಡಲು ರಶ್ಮಿಕಾ ಮಂದಣ್ಣ ಅವರು ವೇದಿಕೆ ಏರಿದರು. ಅವರ ಜೊತೆ ಆಲಿಯಾ ಭಟ್​ ಕೂಡ ಸಾಥ್​ ನೀಡಿದರು.

‘ನಾಟು ನಾಟು..’ ಹಾಡಿನ ಸೆಳೆತಕ್ಕೆ ಸಿಕ್ಕ ಆಲಿಯಾ ಭಟ್​; ರಶ್ಮಿಕಾ ಜೊತೆ ಹೆಜ್ಜೆ ಹಾಕಿದ ಸುಂದರಿ
ಆಲಿಯಾ ಭಟ್, ರಶ್ಮಿಕಾ ಮಂದಣ್ಣ
Follow us on

ಎಂಎಂ ಕೀರವಾಣಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ‘ನಾಟು ನಾಟು..’ (Naatu Naatu) ಹಾಡಿನ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಆಸ್ಕರ್​ ಪ್ರಶಸ್ತಿ ಗೆಲ್ಲುವ ಮೂಲಕ ಈ ಹಾಡು ವಿಶ್ವಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ‘ಆರ್​ಆರ್​ಆರ್​’ ಸಿನಿಮಾ ರಿಲೀಸ್​ ಆದಾಗಲೇ ಭಾರತದಲ್ಲಿ ‘ನಾಟು ನಾಟು..’ ಹಾಡಿನ ಹವಾ ಜೋರಾಗಿತ್ತು. ಇದೇ ಗೀತೆಯ ಹಿಂದಿ ವರ್ಷನ್​ ‘ನಾಚೋ ನಾಚೋ..’ ಕೂಡ ಸಿಕ್ಕಾಪಟ್ಟೆ ಫೇಮಸ್​. ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ಈ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ‘ನಾಟು ನಾಟು..’ ಗೀತೆಯ ಸೆಳೆತದಿಂದ ನಟಿ ಆಲಿಯಾ ಭಟ್​ (Alia Bhatt) ಕೂಡ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇತ್ತೀಚೆಗೆ ನಡೆದ ಒಂದು ಕಲರ್​ಫುಲ್​ ಸಮಾರಂಭದಲ್ಲಿ ​ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಆಲಿಯಾ ಭಟ್​ ಅವರು ಈ ಹಾಡಿಗೆ ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

‘ನೀತಾ ಮುಕೇಶ್​ ಅಂಬಾನಿ ಕಲ್ಚರಲ್​ ಸೆಂಟರ್​’ ಉದ್ಘಾಟನಾ ಸಮಾರಂಭ ಬಹಳ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್​ ಮತ್ತು ಹಾಲಿವುಡ್​ ಕಲಾವಿದರು ಕೂಡ ಭಾಗಿ ಆಗಿದ್ದಾರೆ. ಇದರಲ್ಲಿ ಹಲವು ಬಗೆಯ ಮನರಂಜನಾ ಕಾರ್ಯಕ್ರಮಗಳು, ಫ್ಯಾಷನ್​ ಶೋಗಳು ನಡೆದಿವೆ. ಇದೇ ಇವೆಂಟ್​ನಲ್ಲಿ ‘ನಾಟು ನಾಟು..’ ಹಾಡಿಗೆ ಡ್ಯಾನ್ಸ್​ ಮಾಡಲು ರಶ್ಮಿಕಾ ಮಂದಣ್ಣ ಅವರು ವೇದಿಕೆ ಏರಿದರು. ಅವರ ಜೊತೆ ಆಲಿಯಾ ಭಟ್​ ಕೂಡ ಸಾಥ್​ ನೀಡಿದರು.

ಇದನ್ನೂ ಓದಿ
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲೋಕೆ ನಾನೇ ಕಾರಣ ಎಂದ ಅಜಯ್ ದೇವಗನ್

‘ನಾಚೋ ನಾಚೋ..’ ಹಾಡು ಕೇಳುತ್ತಿದ್ದಂತೆಯೇ ಆಲಿಯಾ ಭಟ್​ ಅವರಿಗೆ ಎಗ್ಸೈಟ್​ಮೆಂಟ್​ ತಡೆದುಕೊಳ್ಳಲು ಆಗಲಿಲ್ಲ. ತಾವು ಹಾಕಿಕೊಂಡಿದ್ದ ಹೈ ಹೀಲ್ಸ್​ ಚಪ್ಪಲಿಯನ್ನು ಕೂಡಲೇ ಕಿತ್ತೆಸೆದು, ವೇದಿಕೆಯಲ್ಲಿ ಡ್ಯಾನ್ಸ್​ ಮಾಡಲು ಆರಂಭಿಸಿದರು. ಅವರ ಜೊತೆ ರಶ್ಮಿಕಾ ಮಂದಣ್ಣ ಮತ್ತು ಇತರೆ ಡ್ಯಾನ್ಸರ್ಸ್​ ಕೂಡ ಹೆಜ್ಜೆ ಹಾಕಿದರು. ‘ನಾಟು ನಾಟು..’ ಹಾಡಿನ ಕ್ರೇಜ್​ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಆಲಿಯಾ ಭಟ್​ ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸಿದ ಅವರು ಪ್ಯಾನ್​ ಇಂಡಿಯಾ ಹೀರೋಯಿನ್​ ಆಗಿ ಮಿಂಚಿದ್ದಾರೆ. ಕೆಲವೇ ತಿಂಗಳ ಹಿಂದೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಬಳಿಕ ಅವರು ಬ್ರೇಕ್​ ತೆಗೆದುಕೊಳ್ಳಬಹುದು ಎಂದು ಊಹಿಸಲಾಗಿತ್ತು. ಆದರೆ ಅವರು ಹೆಚ್ಚು ಗ್ಯಾಪ್​ ಮಾಡಿಲ್ಲ. ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಆರಂಭಿಸಿದ್ದಾರೆ. ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಅವರ ರಣವೀರ್​ ಸಿಂಗ್​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.