ಜೈಲಿನಿಂದ ಹೊರ ಬಂದ ಅಲ್ಲು ಅರ್ಜುನ್ ಮೊದಲ ರಿಯಾಕ್ಷನ್; ದೂರಿದ್ದು ಯಾರನ್ನ ಗೊತ್ತೇ?

|

Updated on: Dec 14, 2024 | 9:16 AM

ಹೈದರಾಬಾದ್ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದು, ಕಾನೂನಿಗೆ ತಲೆಬಾಗುವುದಾಗಿ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಅವರು, ಈ ಘಟನೆ ಅಪಘಾತ ಎಂದಿದ್ದಾರೆ.

ಜೈಲಿನಿಂದ ಹೊರ ಬಂದ ಅಲ್ಲು ಅರ್ಜುನ್ ಮೊದಲ ರಿಯಾಕ್ಷನ್; ದೂರಿದ್ದು ಯಾರನ್ನ ಗೊತ್ತೇ?
ಅಲ್ಲು ಅರ್ಜುನ್
Follow us on

ಹೈದರಾಬಾದ್​ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಎ11 ಆರೋಪಿ ಆಗಿರೋ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಈಗ ಅವರು ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಜೈಲಿನಿಂದ ಇಂದು ಮುಂಜಾನೆ ರಿಲೀಸ್ ಆದ ಅವರು, ಪೊಲೀಸ್ ಭಧ್ರತೆಯೊಂದಿಗೆ ನೇರವಾಗಿ ಮನೆ ಸೇರಿದರು. ಅವರು ನಿವಾಸಕ್ಕೆ ಬಂದ ಬಳಿಕ ಮಾಧ್ಯಮಗಳಿಗೆ ರಿಯಾಕ್ಷನ್ ನೀಡಿದ್ದಾರೆ. ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳುವುದನ್ನು ಮರೆತಿಲ್ಲ. ಜೊತೆಗೆ ಕಾನೂನಿಗೆ ತಲೆ ಬಾಗೋದಾಗಿ ಹೇಳಿದ್ದಾರೆ.

‘ಅಭಿಮಾನಿಗಳಿಗೆ ಧನ್ಯವಾದ. ನಾನು ಆರಾಮಗಿದ್ದೇನೆ. ಆ ಬಗ್ಗೆ ಚಿಂತಿಸೋದು ಬೇಡ. ನಾನು ಕಾನೂನನ್ನು ಗೌರವಿಸುತ್ತೇನೆ. ನಾನು ತನಿಖೆಗೆ ಸಹಕರಿಸುತ್ತೇನೆ’ ಎಂದು ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಮೃತಪಟ್ಟ ರೇವತಿ ಕುಟುಂಬದವರ ಬಗ್ಗೆ ಮಾತನಾಡಲು ಮರೆತಿಲ್ಲ. ‘ನಾನು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಸಿನಿಮಾ ನೋಡಲು ಹೋದಾಗ ಈ ಘಟನೆ ನಡೆಯಿತು. ಅದು ಅಚಾನಕ್ಕಾಗಿ ಆಗಿದ್ದು. ಅದೊಂದು ಅಪಘಾತ’ ಎಂದಿದ್ದಾರೆ ಅಲ್ಲು ಅರ್ಜುನ್.

‘ಆ ರೀತಿ ಮಾಡಬೇಕು ಎಂಬ ಯಾವುದೇ ಉದ್ದೇಶ ಇರಲಿಲ್ಲ. ಅವರ ಕುಟುಂಬಕ್ಕೆ ನಾನು ಕ್ಷಮೆ ಕೇಳುತ್ತೇನೆ. ಅದು ನನ್ನ ವೈಯಕ್ತಿಕ ನಿಯಂತ್ರಣದಲ್ಲಿ ಇರಲಿಲ್ಲ. ನಾನು ಕಳೆದ 20 ವರ್ಷಗಳಿಂದ ಅಲ್ಲಿಗೆ ಸಿನಿಮಾ ನೋಡಲು ಹೋಗುತ್ತಿದ್ದೇನೆ. ನನ್ನದು ಮಾತ್ರವಲ್ಲದೆ, ನನ್ನ ಅಂಕಲ್ ಸಿನಿಮಾಗಳನ್ನೂ ಅಲ್ಲಿ ನೋಡಿದ್ದೇನೆ. 30ಕ್ಕೂ ಹೆಚ್ಚು ಬಾರಿ ಆ ಥಿಯೇಟರ್​ಗೆ ಭೇಟಿ ಕೊಟ್ಟಿದ್ದೇನೆ. ಯಾವಾಗಲೂ ಈ ರೀತಿ ಆಗಿರಲಿಲ್ಲ. ಸಾವಿನ ನಷ್ಟ ತುಂಬಲು ಸಾಧ್ಯವಿಲ್ಲ. ಆದರೆ, ನನ್ನ ಕೈಲಾದ ಸಹಾಯ ಮಾಡುತ್ತೇನೆ’ ಎಂದು ಅಲ್ಲು ಅರ್ಜುನ್ ಭರವಸೆ ನೀಡಿದ್ದಾರೆ.

ಈ ಬಂಧನದ ಹಿಂದೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೈವಾಡ ಇದೆ ಎಂಬ ಆರೋಪ ಇದೆ. ಈ ಬಗ್ಗೆ ಅವರಿಗೆ ಪ್ರಶ್ನೆ ಮಾಡಲಾಗಿದೆ. ಆದರೆ, ಈ ಬಗ್ಗೆ ಅಲ್ಲು ಅರ್ಜುನ್ ಅವರು ಪ್ರತಿಕ್ರಿಯೆ ನೀಡಿಲ್ಲ. ಅವರು ಈ ಬಂಧನಕ್ಕೆ ಯಾರನ್ನೂ ದೂರಿಲ್ಲ. ಇತ್ತೀಚೆಗೆ ಮಾತನಾಡಿದ್ದ ರೇವಂತ್ ರೆಡ್ಡಿ ಅವರು, ‘ನನ್ನ ಹಸ್ತಕ್ಷೇಪ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಚಂಚಲಗೂಡ ಜೈಲಿನಿಂದ ಬಿಡುಗಡೆ ಆಗಿ ಮನೆಯತ್ತ ಹೊರಟ ಅಲ್ಲು ಅರ್ಜುನ್; ಹೇಗಿದೆ ನೋಡಿ ಭದ್ರತೆ

‘ಏನೇ ಇದ್ದರೂ ಕಾನೂನು ನೋಡಿಕೊಳ್ಳುತ್ತದೆ. ಪ್ರಕರಣ ತನಿಖೆಯಲ್ಲಿ ಇದೆ. ಹೀಗಾಗಿ, ಆ ಬಗ್ಗೆ ಮಾತನಾಡುವುದಿಲ್ಲ. ನಾನು ಕಾನೂನನ್ನು ಗೌರವಿಸುತ್ತೇನೆ’ ಎಂದು ಹೇಳಿಕೆ ನೀಡಿದ್ದಾರೆ ಅಲ್ಲು ಅರ್ಜುನ್. ಅವರು ಬಂಧನಕ್ಕೆ ಒಳಗಾದಾಗ ಕುಟುಂಬ ಸವಾಲಿನ ಪರಿಸ್ಥಿತಿ ಎದುರಿಸಿತ್ತು. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮ ಪ್ರೀತಿಗೆ ಧನ್ಯವಾದ. ಎಲ್ಲರಿಗೂ ಧನ್ಯವಾದ. ಅಭಿಮಾನಿಗಳು ತೋರಿದ ಪ್ರೀತಿ-ಬೆಂಬಲಕ್ಕೆ ಧನ್ಯವಾದ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:13 am, Sat, 14 December 24