
‘ಪುಷ್ಪ 2’ (Pushpa 2) ಸಿನಿಮಾ ಭಾರಿ ದೊಡ್ಡ ಹಿಟ್ ಆದ ಬಳಿಕ, ಅಲ್ಲು ಅರ್ಜುನ್ ರೇಂಜ್ ಬದಲಾಗಿದೆ. ಐತಿಹಾಸಿಕ ಹಿಟ್ ನೀಡಿದ ಬಳಿಕ ಅದರ ನಂತರ ಬರುವ ಸಿನಿಮಾಗಳು ಅದಕ್ಕಿಂತಲೂ ಅದ್ಧೂರಿಯಾಗಿಯೂ, ಭಿನ್ನವಾಗಿಯೂ ಹಾಗೂ ಮುಖ್ಯವಾಗಿ ಅದಕ್ಕಿಂತಲೂ ದೊಡ್ಡ ಹಿಟ್ ಆಗಬೇಕು ಎಂದು ಅಲ್ಲು ಅರ್ಜುನ್ ನಿರ್ಧರಿಸಿದಂತಿದೆ. ಇದೇ ಕಾರಣಕ್ಕೆ ಏನೋ, ತಮ್ಮ ಸಿನಿಮಾ ಕತೆಗಳ ಆಯ್ಕೆಯ ವಿಧಾನವನ್ನು ಅಲ್ಲು ಅರ್ಜುನ್ ಬದಲಾಯಿಸಿಕೊಂಡಿದ್ದಾರೆ.
‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಮುಂಚೆಯೇ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಘೋಷಿಸಲಾಗಿತ್ತು. ಅಲ್ಲು ಅರ್ಜುನ್ಗೆ ಈಗಾಗಲೇ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ತ್ರಿವಿಕ್ರಮ್ ಶ್ರೀನಿವಾಸ್ ನೀಡಿದ್ದರು. ಆದರೂ ಸಹ ಕತೆ, ನಿರ್ಮಾಣದ ಗಾತ್ರ ಇನ್ನಿತರೆಗಳು ಸರಿ ಬರದ ಕಾರಣ ಅಲ್ಲು ಅರ್ಜುನ್, ತ್ರಿವಿಕ್ರಮ್ ಸಿನಿಮಾದಿಂದ ಹೊರ ನಡೆದರು. ಇದೀಗ ಇಂಥಹುದೇ ಕಾರಣಕ್ಕೆ ಇನ್ನೊಂದು ಸಿನಿಮಾದಿಂದಲೂ ಅಲ್ಲು ಅರ್ಜುನ್ ಹೊರ ನಡೆದಿದ್ದಾರೆ.
ಅಲ್ಲು ಅರ್ಜುನ್, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆ ಸಿನಿಮಾಕ್ಕೆ ‘ಪುಷ್ಪ’ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ತೊಡಗಿಸುತ್ತಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಸಂದೀಪ್ ಅವರು ಈಗಾಗಲೇ ಮೈತ್ರಿ ಜೊತೆಗೆ ಮಾತುಕತೆ ಸಹ ನಡೆಸಿದ್ದರು. ಆದರೆ ಈಗ ಅಲ್ಲು ಅರ್ಜುನ್, ಆ ಸಿನಿಮಾದಿಂದಲೂ ಹೊರಗೆ ನಡೆದಿದ್ದಾರೆ.
ಇದನ್ನೂ ಓದಿ:ಮುಂಬೈನಲ್ಲಿ ಅಲ್ಲು ಅರ್ಜುನ್ ಹೊಸ ಸಿನಿಮಾಗೆ ಮುಹೂರ್ತ; ಶೂಟಿಂಗ್ ಆರಂಭ
ಸಂದೀಪ್ ರೆಡ್ಡಿ ಮತ್ತು ಅಲ್ಲು ಅರ್ಜುನ್ ನಡುವೆ ಕತೆಗೆ ಸಂಬಂಧಿಸಿದಂತೆ ಕೆಲವು ವಿಷಯಗಳಲ್ಲಿ ಸಮಾನ ಅಭಿಪ್ರಾಯ ಒಡಮೂಡದ ಕಾರಣ ಇದೀಗ ಅಲ್ಲು ಅರ್ಜುನ್ ಅವರು ಸಂದೀಪ್ ಅವರ ಸಿನಿಮಾದಿಂದ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಹಾಲಿವುಡ್ ಮಾದರಿಯ ಸಿನಿಮಾ ಆಗಿರಲಿದೆ. ಹಾಲಿವುಡ್ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಕತೆಯನ್ನು ಸಿನಿಮಾ ಹೊಂದಿದ್ದು, ಯಾವುದೋ ಬೇರೆ ಲೋಕದಲ್ಲಿ ಚಿತ್ರ, ವಿಚಿತ್ರ ಜೀವಿಗಳು, ಅತ್ಯಾಧುನಿಕ ವಾಹನಗಳು, ಆಯುಧಗಳು ಸಿನಿಮಾನಲ್ಲಿ ಇರಲಿವೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಸಿನಿಮಾನಲ್ಲಿ ಅಲ್ಲು ಅರ್ಜುನ್ ಎದುರಿಗೆ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಲಿವುಡ್ನ ಟಾಪ್ ವಿಎಫ್ಎಕ್ಸ್ ಮತ್ತು ಕ್ಲೋನ್ ಸ್ಟುಡಿಯೋಗಳು ಈ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ