Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್ ಒಟ್ಟು ಆಸ್ತಿ, ಐಶಾರಾಮಿ ಕಾರು ಸಂಗ್ರಹ, ಬ್ಯುಸಿನೆಸ್, ಸಿನಿಮಾಕ್ಕೆ ಪಡೆವ ಸಂಭಾವನೆ ಇನ್ನಿತರೆ ಮಾಹಿತಿ

Allu Arjun Birthday: ಅಲ್ಲು ಅರ್ಜುನ್ ಒಟ್ಟು ಆಸ್ತಿ, ಮನೆ, ಐಶಾರಾಮಿ ಕಾರುಗಳ ಸಂಗ್ರಹ, ಅಲ್ಲು ಅರ್ಜುನ್ ಒಡೆತನದ ಬ್ಯುಸಿನೆಸ್​ಗಳು, ಸಿನಿಮಾಕ್ಕೆ ಪಡೆವ ಸಂಭಾವನೆ ಇನ್ನಿತರೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಲ್ಲು ಅರ್ಜುನ್ ಒಟ್ಟು ಆಸ್ತಿ, ಐಶಾರಾಮಿ ಕಾರು ಸಂಗ್ರಹ, ಬ್ಯುಸಿನೆಸ್, ಸಿನಿಮಾಕ್ಕೆ ಪಡೆವ ಸಂಭಾವನೆ ಇನ್ನಿತರೆ ಮಾಹಿತಿ
ಅಲ್ಲು ಅರ್ಜುನ್
Follow us
ಮಂಜುನಾಥ ಸಿ.
|

Updated on: Apr 08, 2023 | 3:47 PM

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹುಟ್ಟುಹಬ್ಬ (Birthday) ಇಂದು (ಏಪ್ರಿಲ್ 08). ಭಾರತದ ಅತ್ಯಂತ ಶ್ರೀಮಂತ ಯುವನಟರಲ್ಲಿ ಒಬ್ಬರು ಅಲ್ಲು ಅರ್ಜುನ್. ದೊಡ್ಡ ಅಭಿಮಾನಿ ಬಳಗ ಹೊಂದಿರುವ ಅಲ್ಲು ಅರ್ಜುನ್, ಮಾಸ್ ಛಾಯೆಯುಳ್ಳ ಭಿನ್ನ ಪಾತ್ರಗಳನ್ನು ಪ್ರಯತ್ನಿಸುತ್ತಾ ಬಂದಿದ್ದಾರೆ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಸಿನಿಮಾಕ್ಕೆ ದುಬಾರಿ ಸಂಭಾವನೆ (Remuneration) ಪಡೆವ ನಟರಲ್ಲಿ ಒಬ್ಬರಾದ ಅಲ್ಲು ಅರ್ಜುನ್ ಅವರ ಒಟ್ಟು ಆಸ್ತಿ, ಅವರ ಬಳಿ ಇರುವ ಐಶಾರಾಮಿ ಕಾರು ಸಂಗ್ರಹ, ಸಿನಿಮಾಕ್ಕೆ ಪಡೆವ ದುಬಾರಿ ಸಂಭಾವನೆ, ಹೂಡಿಕೆ ಮಾಡಿರುವ ಬ್ಯುಸಿನೆಸ್​ಗಳು ಇನ್ನಿತರೆ ವಿಷಯಗಳ ಮಾಹಿತಿ ಇಲ್ಲಿದೆ.

ಹೈದರಾಬಾದ್​ನ ಜೂಬ್ಲಿ ಹಿಲ್ಸ್​ನ ಐಶಾರಾಮಿ ಬಂಗಲೆ ಕಟ್ಟಿಸಿರುವ ಅಲ್ಲು ಅರ್ಜುನ್, ಪತ್ನಿ ಸ್ನೇಹಾ ರೆಡ್ಡಿ, ಮಕ್ಕಳಾದ ಅಯಾನ್ ಹಾಗೂ ಆರ್ಹಾ ಜೊತೆಗೆ ವಾಸಿಸುತ್ತಾರೆ. ಸ್ವಿಮ್ಮಿಂಗ್ ಪೂಲ್, ಓಮನ್ ಜಿಮ್, ದೊಡ್ಡ ಕಾರು ಗರಾಜು, ಖಾಸಗಿ ಥೀಯೇಟರ್, ಲಿಫ್ಟ್, ದೊಡ್ಡ ಲಿವಿಂಗ್ ಏರಿಯಾ, ಖಾಸಗಿ ಬಾರುಗಳನ್ನು ಹೊಂದಿರುವ ಈ ಮನೆಯ ಮೌಲ್ಯ ಸುಮಾರು 100 ಕೋಟಿ ಎನ್ನಲಾಗುತ್ತದೆ.

ಕಾರುಗಳ ಬಗ್ಗೆ ಆಸಕ್ತಿ ಹೊಂದಿರುವ ಅಲ್ಲು ಅರ್ಜುನ್ ಬಳಿ ಹಲವು ಕಾರುಗಳಿವೆ. ಅವರ ಬಳಿ ಇರುವ ಅತ್ಯಂತ ದುಬಾರಿ ಕಾರು ರೇಂಜ್ ರೋವರ್ ವೋಗ್. ಈ ಕಾರಿನ ಬೆಲೆ ಎರಡು ಕೋಟಿಗೂ ಹೆಚ್ಚು ಬೆಲೆಯದ್ದು. ಈ ಕಾರನ್ನು 2019 ರಲ್ಲಿ ಅಲ್ಲು ಅರ್ಜುನ್ ಖರೀದಿಸಿದ್ದರು. ಇದಕ್ಕೆ ಬೀಸ್ಟ್ ಎಂದು ಹೆಸರಿಟ್ಟಿದ್ದಾರೆ. ಅದಾದ ಬಳಿಕ ಅಲ್ಲು ಅರ್ಜುನ್ ಬಳಿ ವೋಲ್ವೊ ಎಕ್ಸ್​ಸಿ 90 ಟಿ8 ಎಕ್ಸಲೆಂಟ್ ಮಾದರಿಯ ಕಾರಿದೆ. ಅತ್ಯುತ್ತಮ ತಂತ್ರಜ್ಞಾನದ ಜೊತೆಗೆ ಅತ್ಯಂತ ಸುರಕ್ಷ ಕಾರು ಇದಾಗಿದ್ದು, ಇದರ ಬೆಲೆ 1.30 ಕೋಟಿ ರುಪಾಯಿ. ಈ ಕಾರನ್ನು ಹೆಚ್ಚು ಬಳಸುತ್ತಾರೆ ನಟ ಅಲ್ಲು ಅರ್ಜುನ್. ಇದು ಅವರ ಮೆಚ್ಚಿನ ಕಾರು ಸಹ.

ಅಲ್ಲು ಅರ್ಜುನ್ ಬಳಿ ಶ್ವೇತ ವರ್ಣದ ಜಾಗ್ವಾರ್ ಎಕ್ಸ್​ಜೆ ಎಲ್ ಮಾದರಿಯ ಕಾರಿದೆ. ಈ ಸೆಡಾನ್ ಮಾದರಿಯ ಕಾರಿನ ಬೆಲೆ 1.20 ಕೋಟಿ ರುಪಾಯಿಗಳು. ಅಲ್ಲು ಅರ್ಜುನ್ ಬಳಿ ದೈತ್ಯ ಎಸ್​ಯುವಿ ಆಫ್​ರೋಡ್ ಕಾರಾದ ಹಮ್ಮರ್ ಎಚ್​2 ಇದೆ. ಈ ಕಾರಿನ ಬೆಲೆ ಸುಮಾರು 75 ಲಕ್ಷ ರುಪಾಯಿ. ಇನ್ನು ಅಲ್ಲು ಅರ್ಜುನ್ ಬಳಿ ಬಿಎಂಡಬ್ಲು ಎಕ್ಸ್​6 ಎಂ ಮಾಡೆಲ್​ನ ಕಾರು ಸಹ ಇದೆ. ಇದರ ಬೆಲೆ ಸುಮಾರು 95 ಲಕ್ಷ ರುಪಾಯಿಗಳು. ಇನ್ನು ಅಲ್ಲು ಅರ್ಜುನ್ ಬಳಿ ಇರುವ ಅತ್ಯಂತ ಹೆಚ್ಚು ಬೆಲೆಯ ವಾಹನವೆಂದರೆ ಅವರ 7 ಕೋಟಿ ಮೌಲ್ಯದ ಕ್ಯಾರಾವ್ಯಾನ್. ಇದನ್ನು ವಿಶೇಷವಾಗಿ ಆರ್ಡರ್ ನೀಡಿ ಅಲ್ಲು ಅರ್ಜುನ್ ನಿರ್ಮಿಸಿಕೊಂಡಿದ್ದಾರೆ.

ಇನ್ನು ಅಲ್ಲು ಅರ್ಜುನ್ ಸಿನಿಮಾ ನಟರಾಗಿರುವ ಜೊತೆಗೆ ಉದ್ಯಮಿಯೂ ಹೌದು, ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ಪಾಲುದಾರಿಕೆ ಹೊಂದಿರುವ ಅಲ್ಲು ಅರ್ಜುನ್, ಆಹಾ ಒಟಿಟಿಯಲ್ಲಿಯೂ ಪಾಲು ಹೊಂದಿದ್ದಾರೆ. ಜೊತೆಗೆ ಎಎಎ ಹೆಸರಿನಲ್ಲಿ ಮಲ್ಟಿಫ್ಲೆಕ್ಸ್ ಚೈನ್ ಪ್ರಾರಂಭ ಮಾಡಿದ್ದಾರೆ. ಮೈ ಹೋಮ್ ಗ್ರೂಪ್ ಹೆಸರಿನ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಹೂಡಿಕೆ ಸಹ ಮಾಡಿದ್ದಾರೆ ಅಲ್ಲು ಅರ್ಜುನ್. ಇವುಗಳ ಜೊತೆಗೆ ಕೃಷಿ ಭೂಮಿ, ಫಾರಂ ಹೌಸ್​ಗಳನ್ನು ಹೊಂದಿದ್ದಾರೆ. ಒಂದು ಬಟ್ಟೆ ಬ್ರ್ಯಾಂಡ್​ನಲ್ಲಿಯೂ ಹೂಡಿಕೆ ಮಾಡಿರುವ ಅಲ್ಲು ಅರ್ಜುನ್, ರೆಸ್ಟೋರೆಂಟ್ ಚೈನ್ ಒಂದರ ಮಾಲೀಕರು ಸಹ.

ಇನ್ನು ಅಲ್ಲು ಅರ್ಜುನ್ ಸಂಭಾವನೆ ವಿಷಯಕ್ಕೆ ಬರುವುದಾದರೆ ಪುಷ್ಪ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಸಂಭಾವನೆಯಲ್ಲಿ ಭಾರಿ ಏರಿಕೆಯಾಗಿದ್ದು, ಪುಷ್ಪ 2 ಸಿನಿಮಾಕ್ಕಾಗಿ ಅವರು 100 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಅದರ ನಂತರದ ಸಿನಿಮಾಕ್ಕೂ ಇದೇ ಮೊತ್ತದ ಸಂಭಾವನೆಯನ್ನು ಅಲ್ಲು ಅರ್ಜುನ್ ಪಡೆಯಲಿದ್ದಾರೆಂಬ ಸುದ್ದಿ ಇದೆ.

ಅಲ್ಲು ಅರ್ಜುನ್ ಪ್ರಸ್ತುತ ಪುಷ್ಪ 2 ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿ ಸಖತ್ ವೈರಲ್ ಆಗಿದೆ. ಸಿನಿಮಾದ ಬಿಡುಗಡೆ ಇದೇ ವರ್ಷಾಂತ್ಯಕ್ಕೆ ಆಗಲಿದೆ. ಪುಷ್ಪ 2 ಬಳಿಕ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ