ಅಲ್ಲು ಅರ್ಜುನ್ ಭೇಟಿಗೆ ಇವೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?

ಅಲ್ಲು ಅರ್ಜುನ್ ಭೇಟಿಗೆ 42 ಕಠಿಣ ನಿಯಮಗಳಿವೆ ಎಂಬ ಆರೋಪಕ್ಕೆ ಅವರ ತಂಡ ಸ್ಪಷ್ಟನೆ ನೀಡಿದೆ. ಪಾಡ್‌ಕಾಸ್ಟ್‌ನಲ್ಲಿ ಬ್ರ್ಯಾಂಡ್ ಸ್ಟ್ರ್ಯಾಟಜಿಸ್ಟ್ ಒಬ್ಬರು ಈ ಆರೋಪ ಮಾಡಿದ್ದರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟನ ವೃತ್ತಿಜೀವನಕ್ಕೆ ಈ ಆರೋಪ ಹಾನಿಯಾಗುವ ಸಾಧ್ಯತೆ ಇರುವುದರಿಂದ, ನಟನ ತಂಡ ಈ ಬಗ್ಗೆ ಕ್ಲ್ಯಾರಿಟಿ ನೀಡಿದೆ.

ಅಲ್ಲು ಅರ್ಜುನ್ ಭೇಟಿಗೆ ಇವೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?
ಅಲ್ಲು ಅರ್ಜುನ್

Updated on: Feb 11, 2026 | 7:07 AM

ಅಲ್ಲು ಅರ್ಜುನ್ (Allu Arjun) ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿಡಿದ್ದಾರೆ. ‘ಪುಷ್ಪ 2’ ರಿಲೀಸ್ ಆದ ಬಳಿಕ ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಅವರ ಖ್ಯಾತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಬ್ಬಿದೆ. ಈಗ ಅವರನ್ನು ಭೇಟಿ ಮಾಡಲು ಬರೋಬ್ಬರಿ 42 ಕಠಿಣ ನಿಯಮಗಳಿವೆ ಎಂದು ಬ್ರ್ಯಾಂಡ್ ಸ್ಟ್ರ್ಯಾಟಜಿಸ್ಟ್ ಒಬ್ಬರು ಪಾಡ್​​ಕಾಸ್ಟ್​​ನಲ್ಲಿ ಆರೋಪ ಮಾಡಿದ್ದರು. ಈ ವಿಡಿಯೋಗೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.

ಬ್ರ್ಯಾಂಡ್ ಸ್ಟ್ರ್ಯಾಟಜಿಸ್ಟ್ ಒಬ್ಬರು ಈ ಬಗ್ಗೆ ಮಾತನಾಡಿದ್ದರು. ಅವರು ಅಲ್ಲು ಅರ್ಜುನ್ ಜೊತೆ ಶೂಟ್ ಒಂದರಲ್ಲಿ ಭಾಗಿ ಆಗಿದ್ದರಂತೆ. ಆಗ ತಮಗೆ ಸಮಸ್ಯೆ ಆಗಿತ್ತು ಎಂದು ಹೇಳಿದ್ದರು. ನಟನ ಭೇಟಿ ಮಾಡಬೇಕು ಎಂದರೆ ಸಾಕಷ್ಟು ಮ್ಯಾನೇಜರ್​​ಗಳನ್ನು ಸಂಪರ್ಕಿಸಬೇಕಾಗುತ್ತದೆ, ನಟನ ಭೇಟಿ ಮಾಡುವಾಗ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬ 42 ನಿಯಮಗಳಿವೆ ಎಂದು ಆರೋಪಿಸಿದ್ದರು.

ಹ್ಯಾಂಡ್ ಶೇಕ್ ಮಾಡಬಾರದು, ನಟನ ದಿಟ್ಟಿಸಿ ನೋಡಬಾರದು ಎಂಬಿತ್ಯಾದಿ ವಿಷಯಗಳು ನಿಯಮದಲ್ಲಿ ಇವೆ ಎನ್ನಲಾಗಿತ್ತು. ಈ ಸಂಬಂಧ ಅಲ್ಲು ಅರ್ಜುನ್ ತಂಡ ಅಧಿಕೃತ ನೋಟ್ ಒಂದನ್ನು ರಿಲೀಸ್ ಮಾಡಿದ್ದು, ಇದು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. ಈ ರೀತಿ ಆರೋಪ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿದೆ.

ಅಲ್ಲು ಅರ್ಜುನ್ ಖ್ಯಾತಿ ವಿಶ್ವಮಟ್ಟದಲ್ಲಿ ಇದೆ. ಹೀಗಾಗಿ, ಅವರ ಬಗ್ಗೆ ಈ ರೀತಿ ಸುಳ್ಳು ಆರೋಪ ಮಾಡುವುದರಿಂದ ಅವರ ಕರಿಯರ್​​ಗೆ ಹಾನಿ ಆಗುತ್ತದೆ. ಈ ಕಾರಣದಿಂದಲೇ ಅಲ್ಲು ಅರ್ಜುನ್ ತಂಡ ಇದಕ್ಕೆ ಸ್ಪಷ್ಟನೆ ನೀಡಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದೆ. ಪಾಡ್​​ಕಾಸ್ಟ್ ಒಂದರಲ್ಲಿ ಹೇಳಿದ ವಿಡಿಯೋ ಇದಾಗಿದ್ದು, ಈ ವಿವಾದದ ಬಳಿಕ ಆ ವಿಡಿಯೋನ ತೆಗೆದು ಹಾಕಲಾಗಿದೆ.

ಇದನ್ನೂ ಓದಿ: ಬಾಲಿವುಡ್​ನ ಸ್ಟಾರ್ ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಸಿನಿಮಾ?

ಅಲ್ಲು ಅರ್ಜುನ್ ಅವರು ಸದ್ಯ ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಶೀಘ್ರವೇ ಅವರು ಮತ್ತೊಂದು ಹೊಸ ಸಿನಿಮಾ ಮಾಡಲಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಇದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us