ಸ್ಟಾರ್ ನಟಿಗೆ ಮೋಸ; ಲಾಕ್​​ಡೌನ್ ವೇಳೆ ಹೊರಬಿತ್ತು ಎರಡನೇ ಗಂಡನ ಅನೈತಿಕ ಸಂಬಂಧ

|

Updated on: Apr 22, 2021 | 8:47 PM

ಆದಿತ್ಯನ್​ ಜತೆ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಸಾಕಷ್ಟು ವದಂತಿಗಳು ಹರಡಿದ್ದವು. ಈ ಬಗ್ಗೆ ಅಂಬಿಲಿ ಮಾಹಿತಿ ನೀಡಿದ್ದಾರೆ. ಕಾನೂನಿನ ಪ್ರಕಾರ ನಾನು ಆದಿತ್ಯನ್​ ಅವರ ಹೆಂಡತಿ. ಆದರೆ, ನಮ್ಮ ಮಧ್ಯೆ ಯಾವುದೂ ಸರಿ ಇಲ್ಲ ಎಂದಿದ್ದಾರೆ.

ಸ್ಟಾರ್ ನಟಿಗೆ ಮೋಸ; ಲಾಕ್​​ಡೌನ್ ವೇಳೆ ಹೊರಬಿತ್ತು ಎರಡನೇ ಗಂಡನ ಅನೈತಿಕ ಸಂಬಂಧ
ಅಂಬಿಲಿ ದೇವಿ
Follow us on

ಮಲಯಾಳಂ ಸ್ಟಾರ್​ ನಟಿ ಅಂಬಿಲಿ ದೇವಿ 2009ರಲ್ಲಿ ಕ್ಯಾಮೆರಾಮೆನ್​ ಲೋವಲ್​ ಅವರನ್ನು ಮದುವೆ ಆಗಿದ್ದರು. 2018ರಲ್ಲಿ ಇಬ್ಬರ ವಿವಾಹ ಡಿವೊರ್ಸ್​ ಮೂಲಕ ಕೊನೆಗೊಂಡಿತ್ತು. ಇದಾದ ಬೆನ್ನಲ್ಲೇ 2019ರಲ್ಲಿ ಅಂಬಿಲಿ ದೇವಿ ಆದಿತ್ಯನ್​ ಜಯನ್​ ಜತೆ ಎರಡನೇ ಮದುವೆ ಆಗಿದ್ದರು. ಆದರೆ, ಎರಡನೇ ಗಂಡನಿಂದ ಇವರಿಗೆ ಮೋಸ ಆಗಿರುವ ವಿಚಾರ ತಿಳಿದು ಬಂದಿದೆ. ಈ ವಿಚಾರ ಕೇಳಿ ನಟಿ ಕಣ್ಣೀರಿಟ್ಟಿದ್ದಾರೆ.

ಆದಿತ್ಯನ್​ ಜತೆ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಸಾಕಷ್ಟು ವದಂತಿಗಳು ಹರಡಿದ್ದವು. ಈ ಬಗ್ಗೆ ಅಂಬಿಲಿ ಮಾಹಿತಿ ನೀಡಿದ್ದಾರೆ. ಕಾನೂನಿನ ಪ್ರಕಾರ ನಾನು ಆದಿತ್ಯನ್​ ಅವರ ಹೆಂಡತಿ. ಆದರೆ, ನಮ್ಮ ಮಧ್ಯೆ ಯಾವುದೂ ಸರಿ ಇಲ್ಲ. ಎರಡನೇ ಬಾರಿಗೆ ಮದುವೆ ಆಗಲು ನಾವಿಬ್ಬರೂ ಸಾಕಷ್ಟು ಕಷ್ಟಗಳನ್ನು ದಾಟಿ ಬಂದಿದ್ದೇವೆ. ಆದರೆ, ನಾವು ಬಾಡಿಗೆ ನೀಡಿದ ಮನೆಯಲ್ಲಿ ವಾಸವಾಗಿರುವ ಮಹಿಳೆ ಜತೆ ಆದಿತ್ಯನ್​ ಅನೈತಿಕ ಸಂಬಂಧ ಹೊಂದಿದ್ದಾರೆ. ಆಕೆಗೆ 13 ವರ್ಷದ ಮಗ ಇದ್ದಾನೆ. ನಾನು ಪ್ರೆಗ್ನೆಂಟ್​ ಆದ ನಂತರ ನಟನೆ ಇಂದ ಬ್ರೇಕ್​ ತೆಗೆದುಕೊಂಡೆ. ಕಳೆದ ಏಪ್ರಿಲ್​​ನಲ್ಲಿ ಮಗು ಜನಿಸಿತ್ತು. ಆಗ ನನ್ನ ಗಂಡ ಒಂದೆರಡು ಬಾರಿ ನೋಡೋಕೆ ಬಂದಿದ್ದರು. ಕೇಳಿದರೆ, ತ್ರಿಶೂರ್​ನಲ್ಲಿ ಕೆಲಸ ಇದೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ನಿಜವಿಚಾರ ಬಿಚ್ಚಿಟ್ಟಿದ್ದಾರೆ.

ನನಗೆ ಅವರ ಅನೈತಿಕ ಸಂಬಂಧದ ಬಗ್ಗೆ ಗೊತ್ತಾಗಿದೆ. ಆದಿತ್ಯ ಹಾಗೂ ಮಹಿಳೆ ಡಿವೋರ್ಸ್​ ನೀಡುವಂತೆ ಕೇಳುತ್ತಿದ್ದಾರೆ. ನಾನು ಏನು ತಪ್ಪು ಮಾಡಿದ್ದೇನೆ ಎನ್ನುವುದು ಗೊತ್ತಾಗುತ್ತಿಲ್ಲ. ನಾನು ಹೊಂದಾಣಿಕೆ ಮಾಡೋಕೆ ಪ್ರಯತ್ನಿಸಿದೆ. ಆದರೆ, ಸಾಧ್ಯವೇ ಆಗಿಲ್ಲ. ಅನೈತಿಕ ಸಂಬಂಧ ಹೊಂದಿರುವ ಮಹಿಳೆಗೆ ಈಗಾಗಲೇ ಮದುವೆ ಆಗಿದೆ. ಒಂದು ಮಗು ಕೂಡ ಇದೆ. ಆದಾಗ್ಯೂ ಆಕೆ ಹೀಗೆ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: KGF Release Date: ಕೆಜಿಎಫ್-2 ಬಿಡುಗಡೆಗೆ ಕೊರೊನಾ ಅಡ್ಡಗಾಲು; ರಿಲೀಸ್​ ದಿನಾಂಕ ಮುಂದೂಡೋದು ಖಚಿತ?