Ananya Panday: ಅಭಿಮಾನಿಗಳು ಮಾಡಿದ ತಪ್ಪಿಗೆ ದಂಡ ತೆತ್ತ ಅನನ್ಯಾ ಪಾಂಡೆ

|

Updated on: Jun 09, 2021 | 6:11 PM

ಕೆ-ಪಾಪ್​ನ ಬಾಯ್​ ಬ್ಯಾಂಡ್​ (ಬಿಟಿಎಸ್​)​ ಕಳೆದ ವರ್ಷ ‘ಡೈನಮೈಟ್’​ ಹೆಸರಿನ ಸಾಂಗ್​ ರಿಲೀಸ್​ ಮಾಡಿತ್ತು. ಇದು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಇತ್ತೀಚೆಗೆ ಮತ್ತೊಂದು ಹಾಡನ್ನು ಬಿಟಿಎಸ್​ ರಿಲೀಸ್​ ಮಾಡಿದೆ.

Ananya Panday: ಅಭಿಮಾನಿಗಳು ಮಾಡಿದ ತಪ್ಪಿಗೆ ದಂಡ ತೆತ್ತ ಅನನ್ಯಾ ಪಾಂಡೆ
ಅನನ್ಯಾ ಪಾಂಡೆ
Follow us on

ಅಭಿಮಾನಿಗಳು ಮಾಡುವ ಎಡವಟ್ಟಿನಿಂದ ಸ್ಟಾರ್​ ನಟ-ನಟಿಯರು ಒಮ್ಮೊಮ್ಮೆ ಟ್ರೋಲ್​ಗೆ ಒಳಗಾಗಬೇಕಾಗುತ್ತದೆ. ಸದಾ ಟ್ರೋಲಿಗರಿಗೆ ಆಹಾರವಾಗುವ ಬಾಲಿವುಡ್​ ನಟಿ ಅನನ್ಯಾ ಪಾಂಡೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಭಿಮಾನಿಗಳು ಮಾಡಿದ ತಪ್ಪಿಗೆ ಅನನ್ಯಾ ದಂಡ ತೆತ್ತಿದ್ದಾರೆ. ಸದ್ಯ, ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ.

ಕೆ-ಪಾಪ್​ನ ಬಾಯ್​ ಬ್ಯಾಂಡ್​ (ಬಿಟಿಎಸ್​)​ ಕಳೆದ ವರ್ಷ ‘ಡೈನಮೈಟ್’​ ಹೆಸರಿನ ಸಾಂಗ್​ ರಿಲೀಸ್​ ಮಾಡಿತ್ತು. ಇದು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಇತ್ತೀಚೆಗೆ ಮತ್ತೊಂದು ಹಾಡನ್ನು ಬಿಟಿಎಸ್​ ರಿಲೀಸ್​ ಮಾಡಿದೆ. ‘ಡೈನಮೈಟ್’ ಗ್ರ್ಯಾಮಿ ಅವಾರ್ಡ್​ಗೆ ನಾಮ ನಿರ್ದೇಶನಗೊಂಡಿತ್ತಾದರೂ ಗೆಲ್ಲಲು ಸಾಧ್ಯವಾಗಿಲ್ಲ. ಇದೇ ವಿಚಾರ ಇಟ್ಟುಕೊಂಡು ಅನನ್ಯಾ ಪಾಂಡೆಯ ಕೆಲ ಫ್ಯಾನ್​​ ಪೇಜ್​ಗಳು ಬಿಟಿಎಸ್​ ಬಗ್ಗೆ ಟೀಕೆ ಮಾಡಿದ್ದವು.

‘ಸ್ಟುಡೆಂಟ್​ ಆಫ್​ ದಿ ಇಯರ್ ​2’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅನನ್ಯಾ ಪಾಂಡೆ ಫಿಲ್ಮ್​ಫೇರ್​ ಗೆದ್ದರು. ಆದರೆ, ಬಿಟಿಎಸ್​ ಗ್ರ್ಯಾಮಿ ಗೆದ್ದಿಲ್ಲ ಎಂಬಿತ್ಯಾದಿ ಕಮೆಂಟ್​ಗಳನ್ನು ಮಾಡಲಾಗಿತ್ತು. ಇದೇ ವಿಚಾರ ಇಟ್ಟುಕೊಂಡು ನೇರವಾಗಿ ಅನನ್ಯಾ ವಿರುದ್ಧ ಬಿಟಿಎಸ್​ ಫ್ಯಾನ್ಸ್​ ಕಿಡಿಕಾರಿದ್ದಾರೆ. ಬಿಟಿಎಸ್​ ಫ್ಯಾನ್ಸ್ ಮಾಡಿದ ಟ್ರೋಲ್​ ಇಲ್ಲಿದೆ.

ಇದನ್ನೂ ಓದಿ: ಟ್ರೋಲ್​ಗಳಿಗೆ ತಿರುಗೇಟು: ಉಡುಗೆ ಬಗ್ಗೆ ಕಮೆಂಟ್​ ಮಾಡಿದವರಿಗೆ ಬಿಸಿಮುಟ್ಟಿಸಿದ ನಟಿ ಅನನ್ಯಾ ಪಾಂಡೆ