
ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಈಗ ಹುಡುಗಿಯಾಗಿ ಬದಲಾಗಿದ್ದಾರೆ. ಅವರು ತಮ್ಮ ಹೆಸರನ್ನು ಅನಾಯಾ (Anaya) ಎಂದು ಬದಲಿಸಿಕೊಂಡಿದ್ದಾರೆ. ಅವರು ಅಮೇಜಾನ್ ಎಂಎಕ್ಸ್ ಪ್ಲೇಯರ್ ಹೋಸ್ಟ್ ಮಾಡುತ್ತಿರುವ ‘ರೈಸ್ ಆ್ಯಂಡ್ ಫಾಲ್’ ಶೋಗೆ ಬಂದಿದ್ದಾರೆ. ಈ ವೇಳೆ ಅವರು ತಮ್ಮ ಜೀವನದಲ್ಲಿ ನಡೆದ ಒಂದು ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಅವರಿಗೆ ಕ್ರಿಕೆಟರ್ ಒಬ್ಬರು ಬೆತ್ತಲೆ ಫೋಟೋ ಕಳುಹಿಸಿದ್ದರಂತೆ.
ಅನಾಯಾ ಹುಟ್ಟುವಾಗ ಹುಡುಗನೇ ಆಗಿದ್ದರು. ಆದರೆ, ಬೆಳೆಯುತ್ತಾ ಬಂದಂತೆ ಅವರಲ್ಲಿ ಹಾರ್ಮೋನ್ಗಳಲ್ಲಿ ಬದಲಾವಣೆ ಆಗುತ್ತಾ ಬಂತು. ಹೀಗಾಗಿ, ಅವರು ಹುಡುಗಿಯಾಗಿ ಬದಲಾದರು. ಅವರು ಈಗ ರಿಯಾಲಿಟಿ ಶೋ ಮೂಲಕ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಅವರು ಒಂದು ವಿಚಾರ ರಿವೀಲ್ ಮಾಡಿದ್ದಾರೆ.
‘ನಾನು ನವೆಂಬರ್ನಲ್ಲಿ ಎಲ್ಲರ ಎದುರು ಕಾಣಿಸಿಕೊಂಡೆ. ಡಿಸೆಂಬರ್-ಜನವರಿ ವೇಳೆಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಪೋಸ್ಟ್ ಮಾಡಲು ಆರಂಭಿಸಿದೆ. ಮನಸ್ಸಿಗೆ ಏನೆಲ್ಲ ತೋಚುತ್ತದೆಯೋ ಅದನ್ನು ಹಾಕುತ್ತಿದ್ದೆ. ಓರ್ವ ಕ್ರಿಕೆಟರ್ ನನ್ನ ಜೊತೆ ಮಾತನಾಡಲು ಆರಂಭಿಸಿದ’ ಎಂದಿದ್ದಾರೆ ಅನಾಯಾ.
‘ಅವನು ನೇರವಾಗಿ ಆ ರೀತಿಯ ಫೋಟೋ’ ಎಂದು ಅನಾಯಾ ಹೇಳಿದ್ದಾರೆ. ‘ಯಾವ ರೀತಿಯ ಫೋಟೋ? ಬೆತ್ತಲೆ ಫೋಟೋನಾ’ ಎಂದು ಸಹ ಸ್ಪರ್ಧಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅನಾಯಾ ‘ಅರ್ಥ ಮಾಡಿಕೊಳ್ಳಿ’ ಎಂದಿದ್ದಾರೆ. ಮತ್ತೊಬ್ಬರು, ‘ಆ ಕ್ರಿಕೆಟರ್ ಎಲ್ಲರಿಗೂ ಗೊತ್ತಾ’ ಎಂದು ಕೇಳಿದಾಗ, ‘ಅವರು ಎಲ್ಲರಿಗೂ ಗೊತ್ತು’ ಎಂದು ಅನಾಯಾ ಹೇಳಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಅನಾಯಾ ಅವರಿಗೆ ಬೆತ್ತಲೆ ಫೋಟೋ ಕಳುಹಿಸಿದ ಆ ಕ್ರಿಕೆಟರ್ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಾ ಇದೆ.
ಇದನ್ನೂ ಓದಿ: ಹುಡುಗಿಯಾಗಿ ಬದಲಾದ ಅನಯಾ ಬಂಗಾರ್ಗೆ ಬಿಗ್ ಶಾಕ್ ನೀಡಿದ ಇಸಿಬಿ
ಅನಾಯಾ ಇಂಗ್ಲೆಂಡ್ ಮಹಿಳಾ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದರು. ಆದರೆ, ಟ್ರಾನ್ಸ್ಜೆಂಡರ್ಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿತ್ತು. ಈಗ ಅವರು ರಿಯಾಲಿಟಿ ಶೋಗೆ ಬಂದು ಹೈಲೈಟ್ ಆಗುವ ಪ್ರಯತ್ನದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:38 pm, Wed, 10 September 25