ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ; ಕೊವಿಡ್​ನಿಂದ ಆಪ್ತನನ್ನು ಕಳೆದುಕೊಂಡು ಭಾವುಕರಾದ ನಟ ಅನಿರುದ್ಧ್​​

ದಯವಿಟ್ಟು ಯಾರೂ ಅನಾವಶ್ಯಕವಾಗಿ ಮನೆಯಿಂದ ಹೊರ ಬರಬೇಡಿ. ಹೊರ ಬರುವ ಪರಿಸ್ಥಿತಿ ಬಂದರೆ ಮಾಸ್ಕ್​ ಧರಿಸಿ. ಸ್ಯಾನಿಟೈಸರ್​ ಬಳಕೆ ಮಾಡಿ ಎಂದು ಅನಿರುದ್ಧ್​ ಮನವಿ ಮಾಡಿದ್ದಾರೆ.

ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ; ಕೊವಿಡ್​ನಿಂದ ಆಪ್ತನನ್ನು ಕಳೆದುಕೊಂಡು ಭಾವುಕರಾದ ನಟ ಅನಿರುದ್ಧ್​​
ನಟ ಅನಿರುದ್ಧ

Updated on: Apr 24, 2021 | 7:38 PM

ಕೊರೊನಾ ವೈರಸ್​ ಎರಡನೇ ಅಲೆ ಸಾಕಷ್ಟು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಒಂದು ಕಡೆಯಾದರೆ, ಆಸ್ಪತ್ರೆಗಳಲ್ಲಿ ಬೆಡ್​ ಸಿಗುತ್ತಿಲ್ಲ ಅನ್ನೋದು ಮತ್ತೊಂದು ಕಡೆ. ನಿನ್ನೆಯಷ್ಟೇ ಕಿರುತೆರೆ ನಟ ಪವನ್​ ಕುಮಾರ್​ ಭಾವ ಹಾಗೂ ಭಾವನ ತಂದೆಯನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದರು. ಈಗ ನಟ ಅನಿರುದ್ಧ ಆಪ್ತರೊಬ್ಬರು ಕೊವಿಡ್​ಗೆ ಬಲಿಯಾಗಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕಿದ್ದಾರೆ.

ಕೊವಿಡ್​ ಸೋಂಕಿನಿಂದ ನನ್ನ ಆಪ್ತರೊಬ್ಬರು ತೀರಿ ಹೋದರು. ಅವರು ತೀರಿ ಹೋಗುವುದಕ್ಕೂ ಮೊದಲು ಆಸ್ಪತ್ರೆಯಲ್ಲಿ ಅಡ್ಮಿಟ್​ ಮಾಡಬೇಕು ಎಂದು ಪ್ರಯತ್ನ ನಡೆಸಿದೆವು. ಆದರೆ, ಆಸ್ಪತ್ರೆಗಳೆಲ್ಲ ಫುಲ್​ ಆಗಿವೆ. ಬೆಡ್​ಗಳು ಸಿಗುತ್ತಿಲ್ಲ. ಬೆಡ್​ ಸಿಕ್ಕರೂ ಐಸಿಯು ಸಿಗುತ್ತಿಲ್ಲ. ಎಲ್ಲವೂ ವ್ಯವಸ್ಥೆ ಆಯಿತು ಎಂದಿಟ್ಟುಕೊಳ್ಳಿ, ಇಂಜೆಕ್ಷನ್​ ದೊರೆಯುವುದಿಲ್ಲ. ಇವೆಲ್ಲ ಸಿಗಬೇಕು ಎಂದರೆ ತುಂಬಾನೇ ಪ್ರಭಾವ ಬೀರಬೇಕು. ಇಷ್ಟಾದರೂ ಅವರನ್ನು ಉಳಿಸಿಕೊಳ್ಳೋಕೆ ಸಾಧ್ಯವಾಗಿಲ್ಲ ಎಂದು ಅನಿರುದ್ಧ ಬೇಸರ ಹೊರಹಾಕಿದ್ದಾರೆ.

ನನ್ನ ಆಪ್ತನ ಶವವನ್ನು ಬನಶಂಕರಿ ಸ್ಮಶಾನಕ್ಕೆ ತೆಗೆದುಕೊಂಡು ಹೋದೆವು. ಆದರೆ, 40 ಆ್ಯಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿದ್ದವು. ನಂತರ ಕೆಂಗೇರಿಗೆ ಹೋದೆವು. ಅಲ್ಲಿ 17ನೇ ನಂಬರ್​ ಸಿಕ್ತು. ಈ ರೀತಿಯ ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅನಿರುದ್ಧ್​ ಬೇಸರ ಹೊರ ಹಾಕಿದ್ದಾರೆ.

ದಯವಿಟ್ಟು ಯಾರೂ ಅನಾವಶ್ಯಕವಾಗಿ ಮನೆಯಿಂದ ಹೊರ ಬರಬೇಡಿ. ಹೊರ ಬರುವ ಪರಿಸ್ಥಿತಿ ಬಂದರೆ ಮಾಸ್ಕ್​ ಧರಿಸಿ. ಸ್ಯಾನಿಟೈಸರ್​ ಬಳಕೆ ಮಾಡಿ. 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಿ ಎಂದು ಅನಿರುದ್ಧ್​​ ಮನವಿ ಮಾಡಿದ್ದಾರೆ.

ಗಟ್ಟಿಮೇಳ ಧಾರಾವಾಹಿ ನಟ ಪವನ್ ಕುಮಾರ್ ಅವರು ಭಾವ ಮತ್ತು ಭಾವನ ತಂದೆಯನ್ನು ಕೊರೊನಾದಿಂದ ಕಳೆದುಕೊಂಡಿದ್ದಾರೆ. ಆ ನೋವಿನಲ್ಲೇ ಒಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದರು. ಅಲ್ಲದೆ, ಸರ್ಕಾರದ ವಿರುದ್ಧ ಛೀಮಾರಿ ಹಾಕಿದ್ದರು.

ಇದನ್ನೂ ಓದಿ: ಕೊರೊನಾದಿಂದ ತನ್ನವರನ್ನು ಕಳೆದುಕೊಂಡ ಯುವ ನಟ; ವಿಡಿಯೋ ನೋಡಿ ಸಿದ್ದರಾಮಯ್ಯ ಹೇಳಿದ್ದೇನು?

ಕೊರೊನಾ ನಿಯಂತ್ರಣಕ್ಕೆ ಕೇಂದ್ರದಿಂದ ಮಹತ್ವದ ನಿರ್ಧಾರ: ಆಕ್ಸಿಜನ್​ ಸರಬರಾಜು, ವೈದ್ಯಕೀಯ ಉಪಕರಣಗಳ ಮೇಲೆ ಸುಂಕ ಕಡಿತ

Published On - 4:51 pm, Sat, 24 April 21

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us