Kirron Kher: ಅನುಪಮ್​ ಖೇರ್​ ಪತ್ನಿ, ಖ್ಯಾತ ನಟಿ ಕಿರಣ್​ ಖೇರ್​ ನಿಧನದ ವದಂತಿಗೆ ಬ್ರೇಕ್​

|

Updated on: May 08, 2021 | 12:33 PM

Anupam Kher: ಸಿನಿಮಾ, ಕಿರುತೆರೆ, ರಂಗಭೂಮಿ ಮತ್ತು ರಾಜಕೀಯದಲ್ಲೂ ಗುರುತಿಸಿಕೊಂಡಿರುವ ಕಿರಣ್​ ಅವರಿಗೆ ಇತ್ತೀಚೆಗೆ ಆರೋಗ್ಯ ಕೈ ಕೊಟ್ಟಿತ್ತು. ಬ್ಲಡ್​ ಕ್ಯಾನ್ಸರ್​ನಿಂದ ಅವರು ಬಳಲುತ್ತಿದ್ದಾರೆ.

Kirron Kher: ಅನುಪಮ್​ ಖೇರ್​ ಪತ್ನಿ, ಖ್ಯಾತ ನಟಿ ಕಿರಣ್​ ಖೇರ್​ ನಿಧನದ ವದಂತಿಗೆ ಬ್ರೇಕ್​
ಕಿರಣ್​ ಖೇರ್​ - ಅನುಪಮ್​ ಖೇರ್​
Follow us on

ಕೊರೊನಾ ವೈರಸ್​ನಿಂದಾಗಿ ಅನೇಕ ಸೆಲೆಬ್ರಿಟಿಗಳು ಅಸುನೀಗುತ್ತಿದ್ದಾರೆ ಎಂಬುದು ನಿಜ. ಆದರೆ ಇದೇ ಸಂದರ್ಭವನ್ನು ಗುರಿಯಾಗಿಸಿಕೊಂಡು ಒಂದಷ್ಟು ಜನರು ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ನಿರತರಾಗಿದ್ದಾರೆ. ಅನೇಕ ಸೆಲೆಬ್ರಿಟಿಗಳ ಸಾವಿನ ವದಂತಿ ಹರಡಿಸಲಾಗುತ್ತಿದೆ. ಇತ್ತೀಚೆಗೆ ಬಾಲಿವುಡ್​ ನಟ ಅನುಪಮ್​ ಖೇರ್​ ಅವರ ಪತ್ನಿ ಕಿರಣ್​ ಖೇರ್​ ನಿಧನರಾದರು ಎಂಬ ಸುಳ್ಳು ಸುದ್ದಿ ಕೇಳಿಬಂತು. ಅದಕ್ಕೆ ಅನುಪಮ್​ ಖೇರ್​ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಕಿರಣ್​ ಖೇರ್​ ಅವರ ಆರೋಗ್ಯದ ಬಗ್ಗೆಯೂ ಅಪ್​ಡೇಟ್​ ನೀಡಿದ್ದಾರೆ.

‘ಕಿರಣ್​ ಆರೋಗ್ಯ ಬಗ್ಗೆ ವದಂತಿ ಹರಿದಾಡುತ್ತಿದೆ. ಅದೆಲ್ಲವೂ ಸುಳ್ಳು. ಅವರು ಕ್ಷೇಮವಾಗಿದ್ದಾರೆ. ಇಂದು ಮಧ್ಯಾಹ್ನ ಅವರು ಕೊವಿಡ್​​ಗೆ 2ನೇ ಡೋಸ್​ ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ. ನೆಗೆಟಿವ್​ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಜನರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಎಲ್ಲರೂ ಸೇಫ್​ ಆಗಿರಿ’ ಎಂದು ಅನುಪಮ್​ ಖೇರ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ತಾವು ಕೂಡ ಕೊವಿಡ್​ ಲಸಿಕೆ ಪಡೆಯುತ್ತಿರುವ ವಿಡಿಯೋವನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.

ಸಿನಿಮಾ, ಕಿರುತೆರೆ, ರಂಗಭೂಮಿ ಮತ್ತು ರಾಜಕೀಯದಲ್ಲೂ ಗುರುತಿಸಿಕೊಂಡಿರುವ ಕಿರಣ್​ ಅವರಿಗೆ ಇತ್ತೀಚೆಗೆ ಆರೋಗ್ಯ ಕೈ ಕೊಟ್ಟಿತ್ತು. ಬ್ಲಡ್​ ಕ್ಯಾನ್ಸರ್​ನಿಂದ ಅವರು ಬಳಲುತ್ತಿದ್ದಾರೆ. ಆ ಬಗ್ಗೆಯೂ ಅನೇಕ ವದಂತಿಗಳು ಹಬ್ಬಿದ್ದವು. ಈ ಕುರಿತು ಏ.1ರಂದು ಟ್ವೀಟ್​ ಮಾಡಿದ್ದ ಅನುಪಮ್​ ಖೇರ್​ ಅಸಲಿ ವಿಚಾರ ತೆರೆದಿಟ್ಟಿದ್ದರು. ‘ಸದ್ಯ ಕಿರಣ್​ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅವರು ಹೊರಬರುತ್ತಾರೆ ಎಂಬ ನಂಬಿಕೆ ನಮಗಿದೆ. ಒಳ್ಳೆಯ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಆಕೆ ಫೈಟರ್​. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತಾರೆ’ ಎಂದು ಅನುಪಮ್​ ಖೇರ್​ ಟ್ವೀಟ್​ ಮಾಡಿದ್ದರು.

ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಲು ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಕಿರಣ್​ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕೊರೊನಾ ವ್ಯಾಕ್ಸಿನ್​ ಪಡೆಯುವ ಸಲುವಾಗಿ ಹೊರಗೆ ಬಂದಿರುವ ಅವರ ಫೋಟೋವನ್ನು ಅನುಪಮ್​ ಖೇರ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಿರಣ್​ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಹಾರೈಸುತ್ತಿದ್ದಾರೆ.

ಇದನ್ನೂ ಓದಿ: 

ನಾನು ಜೀವಂತವಾಗಿದ್ದೇನೆ. ಯಾರೋ ಸಾಮಾಜಿಕ ಜಾಲತಾಣದಲ್ಲಿ ನನ್ನ ಪೋಟೋ ಹಾಕಿ RIP ಹಾಕಿದ್ದಾರೆ : ಹಿರಿಯ ನಟ ದೊಡ್ಡಣ್ಣ

Doddanna Death Hoax: ದೊಡ್ಡಣ್ಣ ಮೃತಪಟ್ಟಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು; ಅಸಲಿ ವಿಚಾರ ಏನು?