
ಚಿತ್ರರಂಗದ ಯಶಸ್ವಿ ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಇತ್ತೀಚೆಗೆ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ಕಾರಣಗಳಿಂದ ಸುದ್ದಿ ಆಗುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಪೋಸ್ಟ್ ಹಂಚಿಕೊಂಡಿದ್ದರು. ಅದೆಲ್ಲವೂ ಬ್ರೇಕಪ್ ಪೋಸ್ಟ್ಗಳ ರೀತಿ ಇತ್ತು. ಈಗ ಅವರು ವಿಚಿತ್ರ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯವಾಗಿ ಮಾತನಾಡಿರುವ ಅನುಪಮಾ, ‘ ನಾರ್ಸಿಸಿಸ್ಟಿಕ್ ಸಂಬಂಧಗಳ ಸ್ವರೂಪವೇ ವಿಚಿತ್ರವಾಗಿರುತ್ತದೆ. ಆರಂಭದಲ್ಲಿ ಒಬ್ಬ ವ್ಯಕ್ತಿ ಅಪಾರ ಪ್ರೀತಿಯನ್ನು ತೋರಿಸಿ, ನೀವು ಜಗತ್ತಿನಲ್ಲೇ ಅತ್ಯಂತ ಅದೃಷ್ಟವಂತರು ಎಂದು ಭಾವಿಸುವಂತೆ ಮಾಡುತ್ತಾನೆ. ಆದರೆ ಮರುದಿನವೇ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಾನೆ. ತಪ್ಪು ಮಾಡಿದ ಮೇಲೆ ಮಗುವಿನಂತೆ ಅತ್ತು, ಕ್ಷಮೆ ಯಾಚಿಸಿ, ಇನ್ಯಾವತ್ತೂ ಹೀಗೆ ಮಾಡುವುದಿಲ್ಲ ಎಂದು ಭರವಸೆ ನೀಡುತ್ತಾನೆ. ಆ ನಂತರ ಮತ್ತೆ ಪ್ರೀತಿಯ ನಾಟಕವಾಡಿ ಅದೇ ಚಕ್ರವನ್ನು ಮರುಕಳಿಸುತ್ತಿರುತ್ತಾನೆ’ ಎಂದು ಅವರು ವಿವರಿಸಿದ್ದಾರೆ.
ಇಂತಹ ನಡವಳಿಕೆಯನ್ನು ಮಾದಕ ವ್ಯಸನಕ್ಕೆ ಹೋಲಿಸಿರುವ ಅನುಪಮಾ, ‘ಪ್ರೀತಿಯಿಂದ ಶುರುವಾಗುವ ಈ ಸಂಬಂಧ, ನಂತರದ ದಿನಗಳಲ್ಲಿ ಅತಿಯಾದ ಆಸಕ್ತಿ ಮತ್ತು ವ್ಯಸನವಾಗಿ ಮಾರ್ಪಡುತ್ತದೆ. ಕೊನೆಗೆ ಯಾರು ನಮಗೆ ತೀವ್ರ ನೋವು ನೀಡುತ್ತಾರೋ, ಅವರೇ ನಮಗೆ ಸಮಾಧಾನ ನೀಡುವಂತೆ ಭಾಸವಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಮಾನಸಿಕ ಆರೋಗ್ಯ ಮತ್ತು ಸಂಬಂಧಗಳ ಮೇಲಿನ ಈ ರೀತಿಯ ದೌರ್ಜನ್ಯದ ಕುರಿತು ನಟಿ ಅನುಪಮಾ ನೀಡಿದ ಹೇಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಇದು ಅನುಪಮಾಗೆ ಆದ ಅನುಭವವೇ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ.
ಇದನ್ನೂ ಓದಿ: ‘ನನ್ನ ಸೋಶಿಯಲ್ ಮೀಡಿಯಾ, ನಾನು ಏನು ಬೇಕಾದ್ರೂ ಪೋಸ್ಟ್ ಮಾಡ್ತೀನಿ’; ಅನುಪಮಾ ಪರಮೇಶ್ವರನ್
ಅನುಪಮಾ ಪರಮೇಶ್ವರನ್ ಅವರು ಕನ್ನಡದವರಿಗೂ ಪರಿಚಯ. ಅವರು ಪುನೀತ್ ರಾಜ್ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ಅಭಿನಯಿಸಿದ್ದರು. ಆ ಬಳಿಕ ಅವರು ಕನ್ನಡಕ್ಕೆ ಮರಳಿಲ್ಲ.
ಪ್ರಶ್ನೆ: ಅನುಪಮಾ ಪರಮೇಶ್ವರನ್ ನಟಿಸಿದ ಕನ್ನಡ ಸಿನಿಮಾ ಯಾವುದು?
ಉತ್ತರ: ನಟಸಾರ್ವಭೌಮ
ಪ್ರಶ್ನೆ: ಅನುಪಮಾ ವಯಸ್ಸೆಷ್ಟು?
ಉತ್ತರ: 30 ವರ್ಷ
ಪ್ರಶ್ನೆ: ಅನುಪಮಾ ಹುಟ್ಟೂರು ಯಾವುದು?
ಉತ್ತರ: ಕೇರಳ
Published On - 7:38 am, Thu, 13 August 26