ನಟಿ ಅನುಪಮಾ ಪರಮೇಶ್ವರನ್ ಅವರು ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇಟ್ಟುಕೊಂಡಿದ್ದಾರೆ. ‘ನಟ ಸಾರ್ವಭೌಮ’ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ನಟಿಸುವ ಮೂಲಕ ಅವರು ಕನ್ನಡ ಸಿನಿಪ್ರಿಯರಿಗೂ ಪರಿಚಯ ಆಗಿದ್ದಾರೆ. ಸಿನಿಮಾಗಳ ಕಾರಣದಿಂದ ಅನುಪಮಾ ಆಗಾಗ ಸುದ್ದಿ ಆಗುತ್ತಾರೆ. ಆದರೆ ಅವರೀಗ ನಕಲಿ ಮಾರ್ಕ್ಸ್ ಕಾರ್ಡ್ ಕಾರಣದಿಂದ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದಾರೆ. ಆ ನಕಲಿ ಅಂಕಪಟ್ಟಿ ಯಾರದ್ದು? ಅದನ್ನೂ ಅನುಪಮಾಗೂ ಏನು ಸಂಬಂಧ? ಇಲ್ಲಿದೆ ಮಾಹಿತಿ.
ಇಂಟರ್ನೆಟ್ನಲ್ಲಿ ಅನುಪಮಾ ಪರಮೇಶ್ವರ್ ಫೋಟೋ ಇರುವ ಒಂದು ಮಾರ್ಕ್ಸ್ ಕಾರ್ಡ್ ವೈರಲ್ ಆಗುತ್ತಿದೆ. ಬಿಹಾರದ ಟೀಚರ್ಸ್ ಎಲಿಜಿಬಲಿಟಿ ಟೆಸ್ಟ್ನಲ್ಲಿ (STET) ರಿಷಿಕೇಶ್ ಕುಮಾರ್ ಎಂಬುದವವರು ಪಾಸ್ ಆಗಿದ್ದಾರೆ. ತಮ್ಮ ರಿಸಲ್ಟ್ ನೋಡಲು ಅವರು ಆನ್ಲೈನ್ನಲ್ಲಿ ಲಾಗಿನ್ ಆದಾಗ ಅವರಿಗೆ ತಮ್ಮ ಮಾರ್ಕ್ಸ್ ಕಾರ್ಡ್ ನೋಡಿ ಶಾಕ್ ಆಗಿದೆ. ಅದಕ್ಕೆ ಕಾರಣ ಅನುಪಮಾ ಪರಮೇಶ್ವರನ್ ಫೋಟೋ.
ಹೌದು, ರಿಷಿಕೇಶ್ ಕುಮಾರ್ ಅವರ ಹಾಲ್ಟಿಕೆಟ್ ಮತ್ತು ಮಾರ್ಕ್ಸ್ ಕಾರ್ಡ್ನಲ್ಲಿ ಅನುಪಮಾ ಪರಮೇಶ್ವರನ್ ಫೋಟೋ ಕಾಣಿಸಿಕೊಂಡಿದೆ. ಹಾಗಾಗಿ ಇದರಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ. ಅನುಪಮಾ ಪರಮೇಶ್ವರನ್ ಫೋಟೋ ಇಲ್ಲಿ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.
घोटाला, वो भी युवाओं के भविष्य के साथ! डूब मरना चाहिए ऐसी नीच और घटिया सोंच रखने वाली घोटालेबाज ‘अफसर राज’ वाली सरकार को।
प्राचीन नालंदा विश्वविद्यालय में शिक्षा ग्रहण करने देश विदेश से लोग आते थे।
अब बिहार में नौकरी पाने की लिस्ट में आ गई हैं नामचीन मलयालम अभिनेत्री @anupamahere pic.twitter.com/9tD4kzF9vX— Ritu Jaiswal (@activistritu) June 23, 2021
ಈ ಹಿಂದೆ ನಟಿ ಸನ್ನಿ ಲಿಯೋನ್ ಅವರ ವಿಚಾರದಲ್ಲಿಯೂ ಹಾಗೇ ಆಗಿತ್ತು. ಕಾಲೇಜಿನ ಪರೀಕ್ಷೆಯೊಂದರ ಫಲಿತಾಂಶದ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರು ಕಾಣಿಸಿಕೊಂಡು ವೈರಲ್ ಆಗಿತ್ತು. ಯಾವುದೋ ವಿದ್ಯಾರ್ಥಿ ಮಾಡಿದ ಕಿತಾಪತಿಯಿಂದ ಆ ರೀತಿ ಆಗಿದೆ ಎಂದು ಊಹಿಸಲಾಗಿತ್ತು. ಆದರೆ ಈಗ ಅನುಪಮಾ ಪರಮೇಶ್ವರನ್ ವಿಚಾರದಲ್ಲಿ ಏನಾಗಿದೆ ಎಂಬುದು ಗೊತ್ತಾಗಬೇಕಿದೆ.
ಇದನ್ನೂ ಓದಿ:
ಪರೀಕ್ಷೆಯ ಮೇಲ್ವಿಚಾರಕರಿಂದ ಅನುಚಿತ ವರ್ತನೆ: ಕ್ರೈಸ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಂದ ಆರೋಪ
SSLC Exam 2021: ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ಮಾರ್ಗಸೂಚಿ ಬಿಡುಗಡೆ: ವಿವರ ಇಲ್ಲಿದೆ