Breaking: ಎಆರ್ ರೆಹಮಾನ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

AR Rahman: ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಆರ್ ರೆಹಮಾನ್ ಅವರಿಗೆ ಇಂದು ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಳಿಸಲಾಗಿದೆ. ರೆಹಮಾನ್ ಅವರಿಗೆ ಚೆನ್ನೈನ ಅಪೋಲೊ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

Breaking: ಎಆರ್ ರೆಹಮಾನ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು
Ar Rahaman

Updated on: Mar 16, 2025 | 12:21 PM

ಆಸ್ಕರ್ ವಿಜೇತ, ಭಾರತ ಸಿನಿಮಾ ಸಂಗೀತ ಕ್ಷೇತ್ರದ ದಿಗ್ಗಜ ಎಆರ್ ರೆಹಮಾನ್ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ಎಆರ್ ರೆಹಮಾನ್ ಅವರಿಗೆ ಇಂದು ಬೆಳಿಗ್ಗೆ ಹಠಾತ್ತನೆ ಎದೆ ನೋವು ಕಾಣಿಸಿಕೊಂಡಿದ್ದು, ಶೀಘ್ರವೇ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ 7:30ಕ್ಕೆ ಎಆರ್ ರೆಹಮಾನ್ ಆಸ್ಪತ್ರೆಗೆ ಬಂದಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಎಆರ್ ರೆಹಮಾನ್ ಅವರಿಗೆ ಇಸಿಜಿ ಸೇರಿದಂತೆ ಹಲವು ಬೇರೆ ಬೇರೆ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಅವರ ಹೃದಯನಾಳದ ಕೆಲವೆಡೆ ಬ್ಲಾಕೇಜ್​ಗಳು ಇರುವುದು ಪರೀಕ್ಷೆಗಳಿಂದ ತಿಳಿದುಬಂದಿದ್ದು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯಂತೆ ಎಆರ್ ರೆಹಮಾನ್​ ಅವರಿಗೆ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ಇನ್ನೂ ಕೆಲ ದಿನ ಅಪೋಲೊ ಆಸ್ಪತ್ರೆಯಲ್ಲಿಯೇ ಕಳೆಯಲಿರುವ ಎಆರ್ ರೆಹಮಾನ್ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಎಆರ್ ರೆಹಮಾನ್ ಅವರಿಗೆ ಈಗ 58 ವರ್ಷ ವಯಸ್ಸಾಗಿದೆ. ಇತ್ತೀಚೆಗಷ್ಟೆ ಅವರು ಪತ್ನಿ ಸಾಯಿರಾ ಬಾನು ಅವರಿಂದ ದೂರಾಗಿದ್ದಾರೆ. ಪತ್ನಿಯಿಂದ ವಿಚ್ಛೇದನ ಪಡೆದಿರುವ ಎಆರ್ ರೆಹಮಾನ್ ಏಕಾಂಗಿಯಾಗಿದ್ದಾರೆ. ಅಂದಹಾಗೆ ರೆಹಮಾನ್ ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ರೆಹಮಾನ್ ಪುತ್ರ ಮತ್ತು ಪುತ್ರಿ ಇಬ್ಬರೂ ಸಹ ಗಾಯಕರೇ ಆಗಿದ್ದಾರೆ.

ಇದೀಗ ಎಆರ್ ರೆಹಮಾನ್ ಅವರ ಪುತ್ರ ಅಮೀನ್, ತಂದೆಯ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಂದೆಯು ಡೀಹೈಡ್ರೇಷನ್​ ಇಂದಾಗಿ ತುಸು ವೀಕ್​ ಆಗಿದ್ದರು. ಹೀಗಾಗಿ ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ಸಾಮಾನ್ಯ ಪರೀಕ್ಷೆಗಳ ಅವರ ಆರೋಗ್ಯವಾಗಿದ್ದಾರೆ. ನಮಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ. ರೆಹಮಾನ್ ದಾಖಲಾಗಿದ್ದ ಅಪೋಲೊ ಆಸ್ಪತ್ರೆಯವರು ಸಹ ಹೆಲ್ತ್ ಬುಲೆಟಿನ್ ಹೊರಡಿಸಿದ್ದು, ರೆಹಮಾನ್ ಅವರು ಡೀಹೈಡ್ರೇಟ್ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೆಲ ಚಿಕಿತ್ಸೆಗಳು, ಪರೀಕ್ಷೆಗಳ ಬಳಿಕ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:ಅನಿರುದ್ಧ್ ರವಿಚಂದರ್​ಗೆ ಕಿವಿಮಾತು ಹೇಳಿದ ಎಆರ್​ ರೆಹಮಾನ್

ಎಆರ್ ರೆಹಮಾನ್ ಇತ್ತೀಚೆಗಷ್ಟೆ ಅಂತರಾಷ್ಟ್ರೀಯ ಗಾಯಕ ಎಡ್ ಶಿರನ್ ಜೊತೆ ಲೈವ್ ಕಾನ್ಸರ್ಟ್​ನಲ್ಲಿ ಭಾಗಿ ಆಗಿದ್ದರು. ಈಗಲೂ ಹಲವಾರು ಸಿನಿಮಾಗಳು ಎಆರ್ ರೆಹಮಾನ್ ಕೈಯಲ್ಲಿವೆ. ಇದೀಗ ರಾಮ್ ಚರಣ್, ಜಾನ್ಹವಿ ಹಾಗೂ ಶಿವಣ್ಣ ನಟಿಸಲಿರುವ ಪೆದ್ದಿ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ ರೆಹಮಾನ್. ಅದರ ಹೊರತಾಗಿ ಇನ್ನೂ ಹಲವು ಸಿನಿಮಾಗಳು ಎಆರ್ ರೆಹಮಾನ್ ಅವರ ಕೈಯಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 10:31 am, Sun, 16 March 25