‘ದೇಶವೇ ಹೆಮ್ಮೆಪಡೋ ಸಿನಿಮಾ ಮಾಡುವೆ’; ಸಲ್ಮಾನ್ ಜೊತೆಗಿನ ಚಿತ್ರ ಘೋಷಿಸಿದ ಅಟ್ಲಿ 

|

Updated on: Dec 18, 2024 | 12:48 PM

ಅಟ್ಲಿ ಅವರು ‘ಜವಾನ್’ ಚಿತ್ರದ ನಂತರ ತಮ್ಮ ಆರನೇ ಚಿತ್ರ ‘A6’ಘೋಷಿಸಿದ್ದಾರೆ. ಸಲ್ಮಾನ್ ಖಾನ್ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ರಜನಿಕಾಂತ್ ಅಥವಾ ಕಮಲ್ ಹಾಸನ್ ನಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

‘ದೇಶವೇ ಹೆಮ್ಮೆಪಡೋ ಸಿನಿಮಾ ಮಾಡುವೆ’; ಸಲ್ಮಾನ್ ಜೊತೆಗಿನ ಚಿತ್ರ ಘೋಷಿಸಿದ ಅಟ್ಲಿ 
ಸಲ್ಲು-ಅಟ್ಲಿ
Follow us on

‘ಜವಾನ್’ ಸಿನಿಮಾ ನಿರ್ದೇಶನ ಮಾಡಿದ ಕಾಲಿವುಡ್ ನಿರ್ದೇಶಕ ಅಟ್ಲಿ ಅವರ ಖ್ಯಾತಿ ಹೆಚ್ಚಾಗಿದೆ. ಅವರು ಈಗ ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಅವರ ಮುಂದಿನ ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈಗ ಅವರ ನಿರ್ದೇಶನದ ಆರನೇ ಸಿನಿಮಾ ಅನೌನ್ಸ್ ಆಗಿದೆ. ಇದಕ್ಕೆ ಸದ್ಯ ‘A6’ ಎನ್ನುವ ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಪ್ರಮುಖ ಪಾತ್ರವಹಿಸಲಿದ್ದಾರೆ.

ಅಟ್ಲಿ ಅವರು ‘ಬೇಬಿ ಜಾನ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಇದು ಅವರ ನಿರ್ಮಾಣದ ಮೊದಲ ಸಿನಿಮಾ. ಈ ಚಿತ್ರವನ್ನು ಕಲೀಸ್ ಅವರು ನಿರ್ದೇಶನ ಮಾಡಿದ್ದು, ‘ತೇರಿ’ ಚಿತ್ರವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ವರುಣ್ ಧವನ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 25ರಂದು ಸಿನಿಮಾ ರಿಲೀಸ್ ಆಗಲಿದೆ.

‘ಎ6 ಚಿತ್ರಕ್ಕೆ ಸಾಕಷ್ಟು ಸಮಯ ಹಾಗೂ ಎನರ್ಜಿ ಬೇಕಿದೆ. ನಾವು ಸ್ಕ್ರಿಪ್ಟ್​ನ ಪೂರ್ಣಗೊಳಿಸುವ ಹಂತದಲ್ಲಿ ಇದ್ದೇವೆ. ದೇವರ ಅನುಗೃಹದಿಂದ ಶೀಘ್ರವೇ ದೊಡ್ಡ ಅನೌನ್ಸ್​ಮೆಂಟ್ ಆಗಲಿದೆ’ ಎಂದು ಅಟ್ಲಿ ಅವರು ಹೇಳಿದ್ದಾರೆ. ಈ ವಿಚಾರ ಅನೇಕರಿಗೆ ಖುಷಿ ನೀಡಿದೆ.

‘ನಾನು ಪಾತ್ರವರ್ಗದ ಮೂಲಕ ಎಲ್ಲರಿಗೂ ಸರ್​ಪ್ರೈಸ್ ನೀಡಲಿದ್ದೇನೆ. ನೀವು ಏನನ್ನು ಯೋಚಿಸುತ್ತಿದ್ದೀರೋ ಅದು ನಿಜ (ಸಲ್ಮಾನ್ ಖಾನ್ ನಟಿಸುತ್ತಾರೆ ಎಂಬ ವಿಚಾರ). ಆದಾಗ್ಯೂ ನಿಮಗೆ ಸರ್​ಪ್ರೈಸ್ ಇದೆ. ಇದು ಭಾರತವೇ ಹೆಮ್ಮೆ ಪಡೋ ಸಿನಿಮಾ ಆಗಲಿದೆ. ನಮಗೆ ಸಾಕಷ್ಟು ಆಶೀರ್ವಾದ ಹಾಗೂ ಪ್ರಾರ್ಥನೆ ಬೇಕು. ಸದ್ಯ ಪಾತ್ರಗಳ ಆಯ್ಕೆ ನಡೆಯುತ್ತಿದೆ. ಕೆಲವೇ ವಾರಗಳಲ್ಲಿ ಎಲ್ಲವೂ ಅಂತಿಮ ಆಗಲಿದೆ’ ಎಂದು ಅವರು ಹೇಳಿದ್ದಾರೆ. ಈ ಚಿತ್ರದಲ್ಲಿ ರಜನಿ ಅಥವಾ ಕಮಲ್ ಹಾಸನ್ ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಟ್ಲಿ ಬಣ್ಣದ ಬಗ್ಗೆ ಕಪಿಲ್ ಶರ್ಮಾ ಟೀಕೆ; ನಗದೆ ಖಡಕ್ ಉತ್ತರ ಕೊಟ್ಟ ನಿರ್ದೇಶಕ

ಸದ್ಯ ಅಟ್ಲಿ ಅವರು ಪಾತ್ರವರ್ಗದ ಬಗ್ಗೆ ನೀಡಿರುವ ವಿವರ ಸಾಕಷ್ಟು ಕುತೂಹಲ ಮೂಡಿಸಿದೆ. ಅವರು ‘ಜವಾನ್’ ಬಳಿಕ ಬ್ರೇಕ್ ತೆಗೆದುಕೊಂಡಿದ್ದು ಯಾವುದೇ ಸಿನಿಮಾ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:45 pm, Wed, 18 December 24