‘ಭಾರತದಲ್ಲೇ ಮೊದಲು’, ವಿಶ್ವವೇ ಕಾಯುತ್ತಿರುವ ಸಿನಿಮಾ ಮೊದಲು ವೀಕ್ಷಿಸುವ ಅವಕಾಶ ಭಾರತೀಯರಿಗೆ
Avengers Doomsday: ಇದೀಗ ‘ಅವೇಂಜರ್ಸ್’ ಸರಣಿಯ ಹೊಸ ಸಿನಿಮಾ ‘ಅವೇಂಜರ್ಸ್: ಡೂಮ್ಸ್‌ಡೇ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈಗಿನಿಂದಲೇ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಈ ಸಿನಿಮಾದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಕೆಲವು ದೇಶಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಹಲವು ದಿನಗಳಿಗೆ ಚಿತ್ರಮಂದಿರದ ಎಲ್ಲ ಟಿಕೆಟ್ಗಳು ಮುಂಗಡವಾಗಿ ಬುಕ್ ಆಗಿವೆ. ಶೀಘ್ರವೇ ಸಿನಿಮಾ ರಿಲೀಸ್ ಆಗಲಿದ್ದು, ವಿಶ್ವವೇ ಎದುರು ನೋಡುತ್ತಿರುವ ಈ ಸಿನಿಮಾ ಮೊದಲು ಭಾರತದಲ್ಲಿ ರಿಲೀಸ್ ಆಗಲಿದೆ.

‘ಅವೇಂಜರ್ಸ್’ ಸಿನಿಮಾ ಸರಣಿ ವಿಶ್ವದ ಅತ್ಯಂತ ಜನಪ್ರಿಯ ಆಕ್ಷನ್ ಸಿನಿಮಾ ಸರಣಿಯಾಗಿದೆ. ಮಾರ್ವೆಲ್ನ ಈ ಸಿನಿಮಾ ಸರಣಿ ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿದೆ. ಇದೀಗ ‘ಅವೇಂಜರ್ಸ್’ ಸರಣಿಯ ಹೊಸ ಸಿನಿಮಾ ‘ಅವೇಂಜರ್ಸ್: ಡೂಮ್ಸ್‌ಡೇ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈಗಿನಿಂದಲೇ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಈ ಸಿನಿಮಾದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಕೆಲವು ದೇಶಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಹಲವು ದಿನಗಳಿಗೆ ಚಿತ್ರಮಂದಿರದ ಎಲ್ಲ ಟಿಕೆಟ್ಗಳು ಮುಂಗಡವಾಗಿ ಬುಕ್ ಆಗಿವೆ. ಶೀಘ್ರವೇ ಸಿನಿಮಾ ರಿಲೀಸ್ ಆಗಲಿದ್ದು, ವಿಶ್ವವೇ ಎದುರು ನೋಡುತ್ತಿರುವ ಈ ಸಿನಿಮಾ ಮೊದಲು ಭಾರತದಲ್ಲಿ ರಿಲೀಸ್ ಆಗಲಿದೆ.
‘ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರವು ವಿಶ್ವದಾದ್ಯಂತ ಡಿಸೆಂಬರ್ 18ಕ್ಕೆ ರಿಲೀಸ್ ಆಗಲಿದೆ. ಭಾರತದಲ್ಲಿಯೂ ತನ್ನ ಬಿಡುಗಡೆಯ ದಿನಾಂಕವನ್ನು ಲಾಕ್ ಮಾಡಿಕೊಂಡಿದೆ. ಈ ಚಿತ್ರವು ಅಮೆರಿಕ ಹಾಗೂ ಇನ್ನೂ ಕೆಲವು ಪ್ರಮುಖ ದೇಶಗಳಿಗಿಂತಲೂ ಒಂದು ದಿನ ಮುಂಚಿತವಾಗಿ ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಂದರೆ ಭಾರತದಲ್ಲಿ ಡಿಸೆಂಬರ್ 17ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಆ ಮೂಲಕ ಒಂದು ದಿನ ಮುಂಚಿತವಾಗಿಯೇ ಸಿನಿಮಾ ನೋಡುವ ಅವಕಾಶ ಭಾರತೀಯ ವೀಕ್ಷಕರಿಗೆ ಸಿಗಲಿದೆ.
ಕೆಲ ವಾರಗಳ ಮುಂಚೆ ರಿಲೀಸ್ ಆಗಿದ್ದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಸಹ ಭಾರತದಲ್ಲಿ ಒಂದು ದಿನ ಮುಂಚಿತವಾಗಿ ರಿಲೀಸ್ ಆಗಿತ್ತು. ಈಗ ‘ಅವೇಂಜರ್ಸ್: ಡೂಮ್ಸ್‌ಡೇ’ ಸಿನಿಮಾ ಸಹ ಭಾರತದಲ್ಲಿ ಒಂದು ದಿನ ಮುಂಚಿತವಾಗಿ ರಿಲೀಸ್ ಆಗಲಿದೆ. ಒಂದು ದಿನ ಮುಂಚಿತವಾಗಿ ರಿಲೀಸ್ ಆಗಿದ್ದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಭಾರತದ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಈಗ ‘ಅವೇಂಜರ್ಸ್’ ಸಹ ಭರ್ಜರಿ ಗಳಿಕೆ ಮಾಡುವುದು ಖಾತ್ರಿ ಎನ್ನಲಾಗುತ್ತಿದೆ.
ಇದನ್ನೂ ಓದಿ:‘ರಾಮಾಯಣ 2’ ಜತೆ ‘ಸ್ಪಿರಿಟ್’ ಸಿನಿಮಾ ಕ್ಲ್ಯಾಶ್: ಹೊಸ ರಿಲೀಸ್ ದಿನಾಂಕ ಘೋಷಣೆ
‘ಅವೆಂಜರ್ಸ್: ಡೂಮ್ಸ್‌ಡೇ’ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ (MCU) 39ನೇ ಚಲನಚಿತ್ರವಾಗಿದೆ. ಆಂಥೋನಿ ಮತ್ತು ಜೋ ರುಸ್ಸೋ ನಿರ್ದೇಶನದ ಈ ಚಿತ್ರಕ್ಕೆ ಮೈಕೆಲ್ ವಾಲ್ಡ್ರಾನ್ ಮತ್ತು ಸ್ಟೀಫನ್ ಮೆಕ್‌ಫೀಲಿ ಕಥೆ ಬರೆದಿದ್ದಾರೆ. ‘ಅವೇಂಜರ್ಸ್’ ಸರಣಿಯ ಐದನೇ ಸಿನಿಮಾ ಇದಾಗಿದೆ. ಈ ಸಿನಿಮಾನಲ್ಲಿ ಖ್ಯಾತ ನಟ ರಾಬರ್ಟ್ ಡೌನಿ ಜೂ. ವಿಲನ್ ಆಗಿ ನಟಿಸುತ್ತಿದ್ದು, ಈ ಸಿನಿಮಾನಲ್ಲಿ ಹಾಲಿವುಡ್ನ ಹಲವಾರು ಖ್ಯಾತನಾಮ ಸ್ಟಾರ್ ನಟರು ಒಟ್ಟಿಗೆ ನಟನೆ ಮಾಡಲಿರುವುದು ವಿಶೇಷ. ಈ ಸಿನಿಮಾದ ಬಳಿಕ ‘ಅವೇಂಜರ್ಸ್: ಸೀಕ್ರೆಟ್ ವಾರ್’ ಸಿನಿಮಾ ನಿರ್ಮಾಣ ಆಗಲಿದ್ದು ಆ ಸಿನಿಮಾ 2027ಕ್ಕೆ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




