‘ಅವೇಂಜರ್ಸ್’ ರೀ ರಿಲೀಸ್: ಗಳಿಕೆಯಲ್ಲಿ ಮತ್ತೆ ದಾಖಲೆ ಬರೆದ ಸಿನಿಮಾ

ಗಳಿಕೆಯಲ್ಲಿ ದಾಖಲೆ ಬರೆದಿರುವ ‘ಅವೇಂಜರ್ಸ್: ಎಂಡ್​​ಗೇಮ್’ ಸಿನಿಮಾ ಮರು ಬಿಡುಗಡೆಯಲ್ಲಿಯೂ ಸಹ ಭರ್ಜರಿ ಗಳಿಕೆ ಮಾಡುತ್ತಿದೆ. ಕಳೆದ ವಾರ ವಿಶ್ವದಾದ್ಯಂತ ಬಿಡುಗಡೆ ಆದ ಈ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ 800 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈಗಾಗಲೇ ಒಟಿಟಿಯಲ್ಲಿರುವ, ಟಿವಿಗಳಲ್ಲಿ ಪ್ರಸಾರ ಆಗಿರುವ ಸಿನಿಮಾ ಒಂದು ಮರು ಬಿಡುಗಡೆಯಲ್ಲಿ ಇಷ್ಟು ದೊಡ್ಡ ಮೊತ್ತ ಗಳಿಸಿದ್ದು ಇದೇ ಮೊದಲಾಗಿದೆ.

‘ಅವೇಂಜರ್ಸ್’ ರೀ ರಿಲೀಸ್: ಗಳಿಕೆಯಲ್ಲಿ ಮತ್ತೆ ದಾಖಲೆ ಬರೆದ ಸಿನಿಮಾ
Avengrs Encore

Updated on: Sep 29, 2026 | 2:41 PM

ವಿಶ್ವದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ 2019 ರಲ್ಲಿ ರಿಲೀಸ್ ಆಗಿದ್ದ ‘ಅವೇಂಜರ್ಸ್: ಎಂಡ್​​ಗೇಮ್’ ಸಿನಿಮಾಕ್ಕೆ ಎರಡನೇ ಸ್ಥಾನ. ಡಿಸ್ನಿ ಮತ್ತು ಮಾರ್ವೆಲ್‌ನ ಈ ಬ್ಲಾಕ್‌ಬಸ್ಟರ್ ಸಿನಿಮಾ ಹೆಚ್ಚುವರಿ ದೃಶ್ಯಗಳನ್ನು ಒಳಗೊಂಡು ಇತ್ತೀಚೆಗಷ್ಟೆ ಮರುಬಿಡುಗಡೆ ಆಯ್ತು. ಈಗಾಗಲೇ ಗಳಿಕೆಯಲ್ಲಿ ದಾಖಲೆ ಬರೆದಿರುವ ಈ ಸಿನಿಮಾ ಮರು ಬಿಡುಗಡೆಯಲ್ಲಿಯೂ ಸಹ ಭರ್ಜರಿ ಗಳಿಕೆ ಮಾಡುತ್ತಿದೆ. ಕಳೆದ ವಾರ ವಿಶ್ವದಾದ್ಯಂತ ಬಿಡುಗಡೆ ಆದ ಈ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ 800 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈಗಾಗಲೇ ಒಟಿಟಿಯಲ್ಲಿರುವ, ಟಿವಿಗಳಲ್ಲಿ ಪ್ರಸಾರ ಆಗಿರುವ ಸಿನಿಮಾ ಒಂದು ಮರು ಬಿಡುಗಡೆಯಲ್ಲಿ ಇಷ್ಟು ದೊಡ್ಡ ಮೊತ್ತ ಗಳಿಸಿದ್ದು ಇದೇ ಮೊದಲಾಗಿದೆ.

‘ಅವೇಂಜರ್ಸ್: ಎಂಡ್​​ಗೇಮ್, ಎನ್​​ಕೋರ್’ ಹೆಸರಿನಲ್ಲಿ ಕೆಲ ಹೆಚ್ಚುವರಿ ದೃಶ್ಯಗಳ ಜೊತೆಗೆ ಈ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾ, ಅಮೆರಿಕ ಮತ್ತು ಕೆನಡಾಗಳಲ್ಲಿ ದೊಡ್ಡ ಮೊತ್ತ ಗಳಿಸಿದೆ. ಆದರೆ ವಿದೇಶಗಳಲ್ಲಿ 60 ಮಿಲಿಯನ್ ಡಾಲರ್ ಅಂದರೆ 576 ಕೋಟಿ ರೂಪಾಯಿ ಗಳಿಕೆ ಮಾಡಿದೆ. ದೇಶೀಯ ಗಳಿಕೆಗಿಂತಲೂ ಸುಮಾರು ಎರಡು ಪಟ್ಟು ಹೆಚ್ಚು ಮೊತ್ತವನ್ನು ವಿದೇಶಗಳಲ್ಲಿ ಈ ಸಿನಿಮಾ ಗಳಿಕೆ ಮಾಡಿದೆ. ಮರು ಬಿಡುಗಡೆ ಆದಾಗಿನಿಂದ ಈ ವರೆಗೆ ಸಿನಿಮಾದ ಒಟ್ಟು ಗಳಿಗೆ 825 ಕೋಟಿ ಆಗಿದ್ದು, ಇನ್ನೆರಡು-ಮೂರು ದಿನಗಳಲ್ಲಿ ಸಿನಿಮಾ 1000 ಕೋಟಿ ಗಳಿಕೆಯನ್ನು ದಾಟುವುದು ಖಾತ್ರಿ.

ಮಾರ್​ವೆಲ್​​ನ ಬಲು ಜನಪ್ರಿಯ ಸಿನಿಮಾ ಪ್ರಾಂಚೈಸ್ ಆಗಿದೆ ‘ಅವೇಂಜರ್ಸ್’. ಈ ವರೆಗೆ ‘ಅವೇಂಜರ್ಸ್’ ಸರಣಿಯ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದು, ನಾಲ್ಕೂ ಸಿನಿಮಾಗಳು ಬ್ಲಾಕ್ ಬಸ್ಟರ್ ಎನಿಸಿಕೊಂಡಿವೆ. ಇದೇ ಡಿಸೆಂಬರ್‌ನಲ್ಲಿ ‘ಅವೇಂಜರ್ಸ್’ ಸರಣಿಯ ಹೊಸ ಸಿನಿಮಾ ‘ಅವೇಂಜರ್ಸ್: ಡೂಮ್ಸ್​​ಡೇ’ ಬಿಡುಗಡೆ ಆಗಲಿದೆ. ಆ ಕಾರಣಕ್ಕಾಗಿಯೇ ‘ಅವೇಂಜರ್ಸ್: ಎಂಡ್ ಗೇಮ್’ ಸಿನಿಮಾವನ್ನು ಮುಂಚಿತವಾಗಿ ಮರು ಬಿಡುಗಡೆ ಮಾಡಲಾಗಿತ್ತು. ‘ಡೂಮ್ಸ್​​ ಡೇ’ ಸಿನಿಮಾಕ್ಕೆ ಕನೆಕ್ಟ್ ಆಗುವಂತೆ ಕೆಲ ಹೆಚ್ಚುವರಿ ದೃಶ್ಯಗಳನ್ನು ‘ಅವೇಂಜರ್ಸ್: ಎಂಡ್​​ಗೇಮ್: ಎನ್​​ಕೋರ್’ ಸಿನಿಮಾನಲ್ಲಿ ಸೇರಿಸಲಾಗಿದೆ. ಇದೇ ಕಾರಣಕ್ಕೆ ವಿಶ್ವದಾದ್ಯಂತ ಸಿನಿಮಾ ಪ್ರಿಯರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:ಪ್ರೇಮದ ಊರಲಿ ಸಿನಿಮಾ ಗೆಲುವಿಗೆ ಯೋಗರಾಜ್ ಭಟ್ ಫುಲ್ ಖುಷ್

ಡಿಸೆಂಬರ್​​ನಲ್ಲಿ ರಿಲೀಸ್ ಆಗಲಿರುವ ‘ಅವೇಂಜರ್ಸ್: ಡೂಮ್ಸ್​​ಡೇ’ ಸಿನಿಮಾ ‘ಅವೇಂಜರ್ಸ್’ ಸರಣಿಯ ಅತಿ ದೊಡ್ಡ ಬಜೆಟ್​​ನ ಹಾಗೂ ಅತಿ ಹೆಚ್ಚು ಸೂಪರ್ ಹೀರೋಗಳನ್ನು ಒಳಗೊಂಡ ಸಿನಿಮಾ ಆಗಿದೆ. ಸಿನಿಮಾನಲ್ಲಿ ಡಾ ಡೂಮ್ ಎಂಬ ಮಹಾನ್ ಶಕ್ತಿಶಾಲಿ ವಿಲನ್ ಅನ್ನು ಎದುರಿಸಲು ಮಾರ್ವೆಲ್ ಯೂನಿವರ್ಸ್​​ನಲ್ಲಿರುವ ಎಲ್ಲ ಸೂಪರ್​ ಹೀರೋಗಳು ಒಟ್ಟಾಗಿದ್ದಾರೆ. ಹಾಲಿವುಡ್​​ನ ಹಲವಾರು ಖ್ಯಾತ ನಾಮ ಸ್ಟಾರ್​ ನಟ-ನಟಿಯರು ಒಟ್ಟಿಗೆ ಈ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಡಿಸೆಂಬರ್ 18ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Tue, 29 September 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us