Shah Rukh Khan: ‘ಪಠಾಣ್’​ ಚಿತ್ರದ ಮೊದಲ ಹಾಡು ಡಿ. 12ಕ್ಕೆ ಬಿಡುಗಡೆ: ರಿವೀಲ್​ ಆಯ್ತು ಶಾರುಖ್​ ಖಾನ್ ಲುಕ್​

| Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2022 | 7:59 PM

ನಟ ಶಾರುಖ್​ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್'​ ಚಿತ್ರ ನಿರೀಕ್ಷೆ ಹೆಚ್ಚಿದ್ದು, ಸದ್ಯ ಚಿತ್ರದ ಮೊದಲು ಹಾಡು ಡಿ. 12ರಂದು ಬಿಡುಗಡೆ ಆಗಲಿದೆ. ​

Shah Rukh Khan: ಪಠಾಣ್​ ಚಿತ್ರದ ಮೊದಲ ಹಾಡು ಡಿ. 12ಕ್ಕೆ ಬಿಡುಗಡೆ: ರಿವೀಲ್​ ಆಯ್ತು ಶಾರುಖ್​ ಖಾನ್ ಲುಕ್​
ಶಾರುಖ್​ ಖಾನ್
Follow us on

ಬಾಲಿವುಡ್​ ಬಾದ್​ಷಾ​ ನಟ ಶಾರುಖ್​ ಖಾನ್ (Shah Rukh Khan)​ ಅವರು ‘ಪಠಾಣ್’ (Pathaan) ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಏಕೆಂದರೆ ನಟ ಶಾರುಖ್​ ಖಾನ್ ಸತತ 4 ವರ್ಷಗಳ ಬಳಿಕ ತೆರೆಗೆ ಬರಲು ಸಿದ್ಧರಾಗಿದ್ದಾರೆ. ಹಾಗಾಗಿ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ‘ಪಠಾಣ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಶಾರುಖ್​ ಖಾನ್ ಭಾಗಿಯಾಗಿದ್ದಾರೆ. ಟೀಸರ್​ ಮತ್ತು ಕೆಲ ಪೋಸ್ಟರ್​ಗಳಿಂದ ‘ಪಠಾಣ್’ ಚಿತ್ರ ಗಮನ ಸೆಳೆದಿತ್ತು. ಇದೀಗ ಹೊಸ ಹಾಡನ್ನು ರಿಲೀಸ್​ ಮಾಡಲು ಚಿತ್ರತಂಡ ಮುಂದಾಗಿದೆ. ಸಿದ್ಧಾರ್ಥ್ ಆನಂದ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ನಟ ಶಾರುಖ್​ ಖಾನ್ ‘ಪಠಾಣ್’ ಚಿತ್ರದ ಮೊದಲ ಹಾಡು ‘ಬೇಷರಂ’ (Besharam) ನ ತಮ್ಮ ಲುಕ್​ನ್ನುಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಪಠಾಣ್’​ ಚಿತ್ರ ಆಕ್ಷನ್ ಪ್ಯಾಕ್ಡ್​​ ಚಿತ್ರವಾಗಿದ್ದು, ಶಾರುಖ್​ ಖಾನ್​ ಅವರು ಸ್ಪೈ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ‘ಬೇಷರಂ’ ಹಾಡಿನ​ ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್​ನ್ನು ಹಂಚಿಕೊಂಡಿದ್ದರು. ‘ಬೇಷರಂ’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಬಿಕಿನಿ ತೊಟ್ಟು ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇದು ಎಲ್ಲೆಡೆ ವೈರಲ್​ ಕೂಡ ಆಗಿದೆ. ಇದೀಗ ಶಾರುಖ್​ ಖಾನ್ ತಮ್ಮ ಲುಕ್​ ಹಂಚಿಕೊಂಡಿದ್ದಾರೆ.

ಶಾರುಖ್ ಖಾನ್​ ಅವರು ಓಪನ್​ ಶರ್ಟ್​​ನಲ್ಲಿ ತಮ್ಮ ಬಾಡಿಯನ್ನು ಪ್ರದರ್ಶಿಸಿದ್ದು, ಸಮುದ್ರದ ಮಧ್ಯೆ ತಂಗಾಳಿಗೆ ಮೈ ಒಡ್ಡಿ ಪೋಸ್​ ನೀಡಿದ್ದಾರೆ. ಕಣ್ಣಿಗೊಂದು ಬ್ಲಾಕ್ ಸನ್‌ಗ್ಲಾಸ್‌, ಕುತ್ತಿಗೆಗೆ ಚೈನ್​ವೊಂದನ್ನು ಹಾಕಿಕೊಂಡು ಲುಕ್ ನೀಡಿದ್ದಾರೆ. ಸದ್ಯ ಶಾರುಖ್ ಖಾನ್​​ ಲುಕ್​ ವೈರಲ್​ ಆಗಿದ್ದು, ಫ್ಯಾನ್ಸ್​ ಫುಲ್​​ ಫಿದಾ ಆಗಿದ್ದಾರೆ. ಜೊತೆಗೆ ಬಗೆಬಗೆಯಾಗಿ ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Shah Rukh Khan: ಮೆಕ್ಕಾಗೆ ಭೇಟಿ ನೀಡಿದ ಶಾರುಖ್ ಖಾನ್​; ಫ್ಯಾನ್ಸ್ ರಿಯಾಕ್ಷನ್ ಏನು?

‘ಪಠಾಣ್’ ಚಿತ್ರದ ಮೊದಲು ಹಾಡು ‘ಬೇಷರಂ’ ಸೋಮವಾರ (ಡಿ. 12) ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗುತ್ತಿದೆ. ಪ್ರೀಮಿಯರ್ ವಿಡಿಯೋವನ್ನು ಯಶ್ ರಾಜ್ ಫಿಲಂಸ್​ನ ಯೂಟ್ಯೂಬ್ ಚಾನೆಲ್​ನಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು, 2 ದಿನಗಳ ಬಳಿಕ ಹಾಡನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ ಎಂದು ಶಾರುಖ್ ಖಾನ್​ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:55 pm, Sun, 11 December 22