ಬಳ್ಳಾರಿ, (ಆಗಸ್ಟ್ 29): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನವಾಗಿರುವ ನಟ ದರ್ಶನ್ನನ್ನು ಕೊನೆಗೂ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಬಳ್ಳಾರಿ ಜೈಲಿಗೆ ಬರುವಾಗ ದರ್ಶನ್ ಪೂಮಾ ಟೀ ಶರ್ಟ್, ಜೀನ್ಸ್ ಪ್ಯಾಂಟ್ ಕೂಲಿಂಗ್ ಗ್ಲಾಸ್ ಹಾಕೊಂಡು ಬಂದಿದ್ದರು. ಪರಪ್ಪನ ಅಗ್ರಹಾರದಲ್ಲಿ ಸಿಕ್ಕಿದ್ದ ರಾಜಾತಿಥ್ಯದ ಗತ್ತು ಹಾಗೇ ಇತ್ತು. ಆದರೆ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟಾಗ ದರ್ಶನ್ ಕೈಯಲ್ಲಿದ್ದ ಕಡಗವನ್ನೂ ಪೊಲೀಸರು ತೆಗೆಸಿದ್ದಾರೆ. ಇನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಕರೆತರುವಾಗ ದರ್ಶನ್ ಕೈಗೆ ಬೇಡಿ ಹಾಕಲಾಗಿತ್ತಾ? ಇಲ್ಲಾ ಎನ್ನುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದೀಗ ಇದಕ್ಕೆ ಖುದ್ದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪ್ರತಿಕ್ರಿಯಿಸಿದ್ದು, ದರ್ಶನ್ ಕೈಯಲ್ಲಿ ಕೋಳ ಇರಲಿಲ್ಲ. ಕೈ ನೋವಾಗಿದ್ದರಿಂದ ಬಟ್ಟೆ ಕಟ್ಟಿದ್ದರು ಎಂದು ಸ್ಪಷ್ಟಪಡಿಸಿದರು.
ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ ಬಳಿಕ ಎಸ್ಪಿ ಶೋಭಾರಾಣಿ ಅವರು ಮೊದಲ ಬಾರಿಗೆ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದರ್ಶನ್ ಕೈಯಲ್ಲಿ ಕೋಳ ಇರಲಿಲ್ಲ. ಆರೋಪಿ ದರ್ಶನ್ ಕೈ ನೋವಾಗಿದ್ದರಿಂದ ಬಟ್ಟೆ ಕಟ್ಟಿದ್ದರು. ದರ್ಶನ್ ಅನಾರೋಗ್ಯ ವದಂತಿ ಸುಳ್ಳು, ಯಾವುದೇ ಸಮಸ್ಯೆ ಇಲ್ಲ. ವದಂತಿಗಳಿಗೆ ಕಿವಿಕೊಡಬೇಡಿ. ದರ್ಶನ್ ಜೈಲಿಗೆ ಬಂದಾಗ ಕಡಗ, ದಾರ, ಚೇನ್ ಗಳನ್ನ ಬಿಚ್ಚಿಸಲಾಗಿದೆ. ಇನ್ನು ದರ್ಶನ್ ಹಾಕಿಕೊಂಡಿದ್ದ ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜೈಲಿನಲ್ಲಿ ಪವರ್ ಗ್ಲಾಸ್ಗೆ ಅವಕಾಶ ಇದೆ. ಅದೆಷ್ಟು ಪವರ್ ಇದೆ ಎಂದು ಡಾಕ್ಟರ್ ಚೆಕ್ ಮಾಡುತ್ತಿದ್ದಾರೆ. ದರ್ಶನ್ ಇರುವ ಬ್ಯಾರಕ್ನತ್ತ ಹೋಗಿಲ್ಲ. ಎಲ್ಲರಿಗೂ ಕೊಡುವ ಊಟವನ್ನೇ ದರ್ಶನ್ಗೂ ಕೊಡುತ್ತೇವೆ. ಕೈಯಲ್ಲಿದ್ದ ಖಡಗ ಟೈಟ್ ಆಗಿತ್ತು, ಹಾಗಾಗಿ ತೆಗೆಯಲಾಗಿತ್ತು. ವಿಚಾರಣಾಧೀನ ಕೈದಿ ಸಂಖ್ಯೆ ಮಾಧ್ಯಮದಲ್ಲಿ ಹೇಳುವ ವಿಚಾರವಲ್ಲ ಎಂದು ತಿಳಿಸಿದರು.
ಕೊಲೆ ಆರೋಪಿ ದರ್ಶನ್ ಅವರ ಕೈಯಲ್ಲಿ ಬಹಳ ವರ್ಷಗಳಿಂದ ಒಂದು ಕಡಗ ಇತ್ತು. ದೇವರ ಮೇಲಿನ ನಂಬಿಕೆ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಷ್ಟು ಇದನ್ನು ತೆಗೆಸುವ ಕಾರ್ಯಕ್ಕೆ ಜೈಲಾಧಿಕಾರಿಗಳು ಮುಂದಾಗಿರಲಿಲ್ಲ. ಇದೀಗ ಬೆಂಗಳೂರಿಂದ ಬಳ್ಳಾರಿಗೆ ಜೈಲಿಗೆ ಶಿಫ್ಟ್ ಆಗುತ್ತಿದ್ದಂತೆ ಬಳ್ಳಾರಿ ಪೊಲೀಸು, ದರ್ಶನ್ ಕೈನಲ್ಲಿದ್ದ ಕಡಗವನ್ನೂ ತೆಗೆಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಾಧಿಕಾರಿಯಿಂದ ಆಗದ ಕೆಲಸವನ್ನು ಬಳ್ಳಾರಿ ಜೈಲಾಧಿಕಾರಿ ಖಡಕ್ ಆಗಿ ಮಾಡಿ ತೋರಿಸಿದ್ದಾರೆ.
ಇನ್ನು ಬಳ್ಳಾರಿ ಜೈಲಿನೊಳಗೆ ಪ್ರವೇಶಿಸುವಾಗ ದರ್ಶನ್ ತಮ್ಮ ಕೈಗೆ ಬಟ್ಟೆ ಕಟ್ಟಿಕೊಂಡಿದ್ದರು. ಹೀಗಾಗಿ ಪೊಲೀಸರು ದರ್ಶನ್ಗೆ ಕೈಗೆ ಕೋಳ ತೊಡಿಸಿಕೊಂಡು ಬಂದಿದ್ದಾರೆ. ಅದನ್ನು ಕಾಣದಂತೆ ದರ್ಶನ್ ಬಟ್ಟೆಯಿಂದ ಕೈ ಮುಚ್ಚಿಕೊಂಡಿದ್ದಾರೆ ಎನ್ನುವ ಚರ್ಚೆಗಳು ನಡೆದಿದ್ದವು. ಇದೀಗ ಎಲ್ಲಾ ಗೊಂದಲಗಳಿಗೆ ಎಸ್ಪಿ ತೆರೆ ಎಳೆದಿದ್ದಾರೆ. ಅಲ್ಲದೇ ದರ್ಶನ್ ಆರೋಗ್ಯದ ಬಗ್ಗೆ ಹುಟ್ಟಿಕೊಂಡಿದ್ದ ಊಹಾಪೋಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಆದ್ರೆ, ದರ್ಶನ್ ಧರಿಸಿದ್ದ ಕಪ್ಪು ಕನ್ನಡಕ ಬಗ್ಗೆ ತನಿಖೆ ನಡೆಯುತ್ತಿದ್ದು, ಬಳಿಕ ಅದು ನಂಬರ್ ಗ್ಲಾಸ್ ನಾ ಅಥವಾ ಶೋಕಿಗಾಗಿ ಹಾಕಿಕೊಂಡ ಕೂಲಿಂಗ್ ಗ್ಲಾಸ್ನ ಎಂದು ತಿಳಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:26 pm, Thu, 29 August 24