Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?

| Updated By: Digi Tech Desk

Updated on: Apr 21, 2021 | 6:46 PM

Bigg Boss Kannada 8 host Kichcha Sudeep Salary: ಬಿಗ್​ ಬಾಸ್​ ಮೂರು ಸೀಸನ್​ಗಳನ್ನು ಯಾವುದೇ ಒಪ್ಪಂದ ಇಲ್ಲದೆ ಸುದೀಪ್​ ನಡೆಸಿಕೊಟ್ಟಿದ್ದರು. ನಂತರದ ಐದು ಸೀಸನ್​ಗೆ ಸುದೀಪ್​ ಒಪ್ಪಂದ ಮಾಡಿಕೊಂಡಿದ್ದರು ಎನ್ನುತ್ತಿವೆ ಮೂಲಗಳು.

Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?
ಬಿಗ್​​ಬಾಸ್​​ ಕನ್ನಡ 8
Follow us on

ಕನ್ನಡ ಬಿಗ್​ ಬಾಸ್​ 8 ಯಶಸ್ವಿಯಾಗಿ 50 ದಿನಳನ್ನು ಪೂರೈಸಿ ಮುನ್ನಡೆಯುತ್ತಿದೆ. ಅನಾರೋಗ್ಯ ಕಾರಣದಿಂದ ಕಿಚ್ಚ ಸುದೀಪ್​ ಏಳನೆ ವಾರ​ ಬಿಗ್​ ಬಾಸ್​ ವೇದಿಕೆ ಏರಿರಲಿಲ್ಲ. ಈ ವಾರ ಅವರು ಬಿಗ್​ ಬಾಸ್​ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ಏಳು ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿ 8ನೇ ಸೀಸನ್​ 50 ದಿನ ಪೂರ್ಣಗೊಂಡಿದೆ. ಸುದೀಪ್​ ಸಂಭಾವನೆ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಹರಿದಾಡುತ್ತಿವೆ. ಹಾಗಾದರೆ, ಸುದೀಪ್​ ಒಂದು ಸೀಸನ್​ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸೀಸನ್​ 1ರಿಂದ ಕನ್ನಡ ಬಿಗ್​ ಬಾಸ್​​ಅನ್ನು ಸುದೀಪ್​ ಅವರೇ ನಡೆಸಿಕೊಡುತ್ತಿದ್ದಾರೆ. ಎಂಟನೇ ಸೀಸನ್​ ಕೂಡ ಅವರೇ ನಡೆಸಿಕೊಡುತ್ತಿದ್ದಾರೆ. ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ಸುದೀಪ್​ ಬಿಗ್​ ಬಾಸ್​ ಸ್ಪರ್ಧಿಗಳ ಜತೆ ಮಾತುಕತೆ ನಡೆಸುತ್ತಾರೆ. ಸುದೀಪ್​ ತಮ್ಮ ಮಾತಿನ ಮೂಲಕವೇ ಎಲ್ಲರಿಗೂ ಇಷ್ಟವಾಗುತ್ತಾರೆ. ಅವರ ನಿರೂಪಣೆ, ಅವರ ಉಡುಗೆ ಬಿಗ್​ ಬಾಸ್​ಗೆ ಒಂದು ಶೋಭೆ ಎಂದರೆ ತಪ್ಪಾಗಲಾರದು. ಹೀಗಾಗಿ, ಈ ಶೋ ನಡೆಸಿಕೊಡುವುದಕ್ಕೆ ಸುದೀಪ್​ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ.

ಬಿಗ್​ ಬಾಸ್​ ಮೂರು ಸೀಸನ್​ಗಳನ್ನು ಯಾವುದೇ ಒಪ್ಪಂದ ಇಲ್ಲದೆ ಸುದೀಪ್​ ನಡೆಸಿಕೊಟ್ಟಿದ್ದರು. ನಂತರದ ಐದು ಸೀಸನ್​ಗೆ ಸುದೀಪ್​ ಒಪ್ಪಂದ ಮಾಡಿಕೊಂಡಿದ್ದರು ಎನ್ನುತ್ತಿವೆ ಮೂಲಗಳು. ಸೀಸನ್​ 8ಕ್ಕೆ ಈ ಒಪ್ಪಂದ ಪೂರ್ಣಗೊಳ್ಳಲಿದೆ. ಈ ಐದು ಸೀಸನ್​ಗೆ ಸುದೀಪ್​ 20 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಅಂದರೆ, ಒಂದು ಸೀಸನ್​ಗೆ 4 ಕೋಟಿ ರೂಪಾಯಿ ಆಗಲಿದೆ.

ಇನ್ನು, 8 ಸೀಸನ್​ ಪೂರ್ಣಗೊಂಡ ನಂತರವೂ ಸುದೀಪ್​ ಅವರೇ ಬಿಗ್​ ಬಾಸ್​ ನಡೆಸಿಕೊಡುವ ಸಾಧ್ಯತೆ ಇದೆ. ಸಾಕಷ್ಟು ವೀಕ್ಷಕರು ಸುದೀಪ್​ಗಾಗಿಯೇ ಬಿಗ್​ ಬಾಸ್​ ನೋಡುವವರಿದ್ದಾರೆ. ಹೀಗಾಗಿ, ಮುಂದಿನ ಸೀಸನ್​ಗಳನ್ನೂ ಅವರೇ ನಡೆಸಿಕೊಡಬಹುದು ಎನ್ನಲಾಗುತ್ತಿದೆ.

ಬಿಗ್​ ಬಾಸ್​ ಸೀಸನ್​ 9ರ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ್​ ಗುಂಡ್ಕಲ್​ ಮಾಹಿತಿ ನೀಡಿದ್ದರು. ಅಕ್ಟೋಬರ್​ ವೇಳೆಗೆ ಮತ್ತೊಂದು ಸೀಸನ್​ನೊಂದಿಗೆ ಪ್ರೇಕ್ಷಕರ ಎದುರು ಬರುವ ಬಗ್ಗೆ ಅವರು ಸೂಚನೆ ನೀಡಿದ್ದರು. ಹೀಗಾಗಿ, ಮತ್ತೊಂದು ಸೀಸನ್​ ಕೂಡ ಶೀಘ್ರವೇ ಆರಂಭವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ! 

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿಗೆ ಆದ ಅವಮಾನವನ್ನು ಅವರು ಸಹಿಸಿಕೊಳ್ತಾರಾ?

Published On - 6:24 pm, Wed, 21 April 21