ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿಗೆ ಆದ ಅವಮಾನವನ್ನು ಅವರು ಸಹಿಸಿಕೊಳ್ತಾರಾ?

Rajesh Duggumane

| Edited By: ಮದನ್​ ಕುಮಾರ್​

Updated on: Apr 19, 2021 | 8:43 AM

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ತುಂಬಾನೇ ಸ್ಟ್ರೆಟಿಜಿಕ್​ ಆಗಿ ಆಡುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ ಜತೆ ಸೇರಿಕೊಂಡು ಯಾರನ್ನು ಹೇಗೆ ಸೋಲಿಸಬೇಕು ಎನ್ನುವುದನ್ನು ಸಂಬರಗಿ ಚರ್ಚೆ ಮಾಡುತ್ತಲೇ ಇರುತ್ತಾರೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿಗೆ ಆದ ಅವಮಾನವನ್ನು ಅವರು ಸಹಿಸಿಕೊಳ್ತಾರಾ?
ಪ್ರಶಾಂತ್​ ಸಂಬರಗಿ

Follow us on

ಬಿಗ್ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಅತಿ ಹೆಚ್ಚು ಸುಳ್ಳು ಹೇಳುತ್ತಾರೆ. ಒಬ್ಬರ ಎದುರು ಒಮ್ಮೆ ಒಳ್ಳೆ ರೀತಿಯಲ್ಲಿ ನಡೆದುಕೊಂಡರೆ ಹಿಂದಿನಿಂದ ಅವರ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಾರೆ. ಇದು ಮನೆ ಮಂದಿಗೆಲ್ಲ ಗೊತ್ತಾದರೂ ಸುಮ್ಮನಿದ್ದಾರೆ. ಆದರೆ, ವೀಕ್ಷಕರು ಇದೆಲ್ಲವನ್ನೂ ಗಮನಿಸುತ್ತಲೇ ಇರುತ್ತಾರೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ಗೆ ತೀವ್ರ ಅವಮಾನ ಆಗುವಂತಹ ಘಟನೆ ಒಂದು ನಡೆದಿದೆ. ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ತುಂಬಾನೇ ಸ್ಟ್ರೆಟಿಜಿಕ್​ ಆಗಿ ಆಡುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ ಜತೆ ಸೇರಿಕೊಂಡು ಯಾರನ್ನು ಹೇಗೆ ಸೋಲಿಸಬೇಕು ಎನ್ನುವುದನ್ನು ಸಂಬರಗಿ ಚರ್ಚೆ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ದಿವ್ಯಾ ಸುರೇಶ್​ ಬಳಿ ತೆರಳಿ ಒಳ್ಳೆಯ ಮಾತನಾಡುವ ಚಕ್ರವರ್ತಿ ನಂತರ ಹಿಂದಿನಿಂದ ಅವರ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಾರೆ.

ವೀಕ್ಷಕರು ಬಿಗ್​ ಬಾಸ್​ ಮನೆ ಸ್ಪರ್ಧಿಗಳ ಜತೆ ಮಾತನಾಡುವ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಕಾಲರ್​ ಒಬ್ಬರು ಅರವಿಂದ್​ ಜತೆ ಮಾತನಾಡಿದ್ದರು. ಯುಗಾದಿ ಹಬ್ಬದ ದಿನದಂದು ಅರವಿಂದ್​ ಸಣ್ಣ ವಿಚಾರಕ್ಕೆ ಪ್ರಶಾಂತ್​ ಜತೆ ಜಗಳ ಮಾಡಿಕೊಂಡಿದ್ದರು. ದೂರವಾಣಿ ಕರೆ ಮಾಡಿದವರು ಇದೇ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಅಷ್ಟೇ ಅಲ್ಲ, ಪ್ರಶಾಂತ್​ಗೆ ಅವಮಾನ ಕೂಡ ಮಾಡಿದ್ದರು.

ಪ್ರಶಾಂತ್​ ಸುಳ್ಳುಗಾರ. ಮುಂದೆ ಒಂದು ರೀತಿ ಇರುತ್ತಾರೆ, ಹಿಂದೊಂದು ರೀತಿ ನಡೆದುಕೊಳ್ಳುತ್ತಾರೆ. ಅದೇನೆ ಇರಬಹುದು. ಆದರೆ, ಯುಗಾದಿ ದಿನ ಅವರು ಏನನ್ನೂ ಮಾತನಾಡಿರಲಿಲ್ಲವಲ್ಲ ಎನ್ನುವ ಅಭಿಪ್ರಾಯವನ್ನು ಹೊರ ಹಾಕಿದರು. ಹೌದು, ಅವರ ಜತೆ ಕೂಗಾಡಬಾರದಿತ್ತು ಎಂದು ಅರವಿಂದ್ ಒಪ್ಪಿಕೊಂಡರು.

ಸುಳ್ಳುಗಾರ ಎಂದು ಹೇಳುವಾಗ ಪ್ರಶಾಂತ್​ ಮುಖ ಕೆಂಪುಗಟ್ಟಿತ್ತು. ಅವರಿಗೆ ಈ ಪದ ಅವಮಾನ ತರಿಸಿದೆ. ವೀಕ್ಷಕರು ತಮ್ಮನ್ನು ಗಮನಿಸುತ್ತಿರುವ ವಿಚಾರ ಅವರಿಗೆ ಮನದಟ್ಟಾದಂತೆ ಕಾಣುತ್ತಿದೆ.

ಇದನ್ನೂ ಓದಿ: Kichcha Sudep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ!

ತಾಜಾ ಸುದ್ದಿ

Related Stories

Click on your DTH Provider to Add TV9 Kannada