Bigg Boss Kannada Day 2: ಸ್ವಾರ್ಥದ ಹಾದಿ ಹಿಡಿದು ಸೇಫ್​ ಆದ ಪ್ರಶಾಂತ್​ ಸಂಬರಗಿ! ಡೇಂಜರ್​ ಝೋನ್​ನಲ್ಲಿ ವಿಶ್ವನಾಥ್​

Bigg Boss Kannada Season 8 (Day 2): ಮೊದಲ ವಾರವೇ ಬಿಗ್​ ಬಾಸ್​ ಮನೆಯಿಂದ ಯಾರು ಹೊರಬರುತ್ತಾರೆ ಎಂಬ ದೊಡ್ಡ ಕೌತುಕದ ಪ್ರಶ್ನೆ ಎಲ್ಲರ ಮನದಲ್ಲೂ ಕೊರೆಯುತ್ತಿದೆ. ನಾಮಿನೇಟ್​ ಆದವರ ಭವಿಷ್ಯ ಕೂಡ ಅಚ್ಚರಿಯ ರೀತಿಯಲ್ಲಿ ಬದಲಾಗುತ್ತಿದೆ.

Bigg Boss Kannada Day 2: ಸ್ವಾರ್ಥದ ಹಾದಿ ಹಿಡಿದು ಸೇಫ್​ ಆದ ಪ್ರಶಾಂತ್​ ಸಂಬರಗಿ! ಡೇಂಜರ್​ ಝೋನ್​ನಲ್ಲಿ ವಿಶ್ವನಾಥ್​
ವಿಶ್ವನಾಥ್ ಮತ್ತು ಪ್ರಶಾಂತ್​ ಸಂಬರಗಿ

Updated on: Mar 03, 2021 | 12:39 PM

ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಮೊದಲ ವಾರವೇ ಪ್ರಶಾಂತ್​ ಸಂಬರಗಿ, ನಿಧಿ ಸುಬ್ಬಯ್ಯ, ಧನುಶ್ರೀ, ಮಂಜು ಪಾವಗಡ, ನಿರ್ಮಲಾ ನಾಮಿನೇಟ್​ ಆಗುವ ಮೂಲಕ ಹಿನ್ನಡೆ ಅನುಭವಿಸಿದ್ದರು. ಆದರೆ ಈಗ ಬಿಗ್​ ಬಾಸ್​ ಒಂದು ಟ್ವಿಸ್ಟ್​ ನೀಡಿದ್ದಾರೆ. ಪ್ರಶಾಂತ್​ ಸಂಬರಗಿ ಮತ್ತು ಮಂಜು ಪಾವಗಡ ವಿಶೇಷವಾದ ಟಾಸ್ಕ್​ ಗೆದ್ದು ಸೇಫ್​ ಆಗಿದ್ದಾರೆ. ಅವರ ಎದುರು ಟಾಸ್ಕ್​ನಲ್ಲಿ ಸೋತ ವಿಶ್ವನಾಥ್​ ಮತ್ತು ರಘು ಡೇಂಜರ್​ ಝೋನ್​ಗೆ ಹೋಗಿದ್ದಾರೆ.

‘ನನ್ನದು ಸ್ವಾರ್ಥ’ ಎಂದು ಒಪ್ಪಿಕೊಂಡ ಸಂಬರಗಿ!
ನಾಮಿನೇಷನ್​ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ವಿಶೇಷ ಟಾಸ್ಕ್​ನಲ್ಲಿ ಪೈಪೋಟಿ ನೀಡಲು ತಮ್ಮ ಪ್ರತಿಸ್ಪರ್ಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಪ್ರಶಾಂತ್​ ಸಂಬರಗಿಗೆ ನೀಡಲಾಯಿತು. ಆಗ ಪ್ರಶಾಂತ್​ ಆಯ್ಕೆ ಮಾಡಿಕೊಂಡಿದ್ದು ವಿಶ್ವನಾಥ್​ ಅವರನ್ನು. ‘ನನ್ನ ಸ್ವಾರ್ಥಕ್ಕಾಗಿ ನಾನು ಒಬ್ಬ ವೀಕ್​ ಸ್ಪರ್ಧಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ಪ್ರಶಾಂತ್​ ಒಪ್ಪಿಕೊಂಡರು. ಅದರಂತೆ ಆಟದಲ್ಲಿ ವಿಶ್ವನಾಥ್​ರನ್ನು ಸೋಲಿಸಿ ತಾವು ಸೇಫ್​ ಆದರು.

Bigg Boss Kannada 8

ಪ್ರಶಾಂತ್​ ಸಂಬರಗಿ

ಮಂಜು ಎದುರು ಸಮಬಲದ ಸ್ಪರ್ಧಿ!
ಪ್ರಶಾಂತ್​ ಸಂಬರಗಿ ರೀತಿಯೇ ಮಂಜು ಪಾವಗಡ ಅವರಿಗೂ ಬಿಗ್​ ಬಾಸ್​ ಈ ರೀತಿ ಅವಕಾಶ ನೀಡಿದರು. ಆಗ ಮಂಜು ಆಯ್ಕೆ ಮಾಡಿಕೊಂಡಿದ್ದು ರಘು ಅವರನ್ನು. ಈ ಆಯ್ಕೆಗೆ ಮಂಜು ಸೂಕ್ತ ಕಾರಣವನ್ನೂ ನೀಡಿದರು. ‘ರಘು ನನಗೆ ಸರಿಯಾದ ಸ್ಪರ್ಧಿ. ಸಮನಾಗಿ ಸ್ಪರ್ಧಿಸುತ್ತಾರೆ ಎಂದುಕೊಂಡಿದ್ದೇನೆ. ಒಂದು ವೇಳೆ ನಾನು ಸೋತರೂ ಸಮಬಲದ ಸ್ಪರ್ಧಿಯ ಜೊತೆ ಸೋತೆ ಅಂತ ನನಗೆ ಗೌರವ ಸಿಗಬೇಕು ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ಅವರು ನೀಡಿದ ಕಾರಣ ನಿಜಕ್ಕೂ ಮೆಚ್ಚುವಂಥದ್ದು. ಬಿಗ್​ ಬಾಸ್​ ನೀಡಿದ ಟಾಸ್ಕ್​ನಲ್ಲಿ ಮಂಜು ಗೆಲ್ಲುವ ಮೂಲಕ ಸೇಫ್ ಆಗಿದ್ದಾರೆ. ರಘು ಈಗ ಎಲಿಮಿನೇಷನ್​ ಭೀತಿಯಲ್ಲಿದ್ದಾರೆ.

ವಿಶ್ವನಾಥ್

ನಿಧಿ, ನಿರ್ಮಲಾ, ಧನುಶ್ರೀ ಪಾಡು ಏನಾಗಲಿದೆ?
ಈ ವಾರದ ನಾಮಿನೇಷನ್​ ಪಟ್ಟಿಯಲ್ಲಿ ನಿಧಿ ಸುಬ್ಬಯ್ಯ, ಧನುಶ್ರೀ, ನಿರ್ಮಲಾ ಕೂಡ ಇದ್ದಾರೆ. ನಾಮಿನೇಷನ್​ನಿಂದ ಪಾರಾಗಲು ಅವರಿಗೂ ಕೂಡ ಬಿಗ್​ ಬಾಸ್​ ಅವಕಾಶ ನೀಡಲಿದ್ದಾರೆ. ತಮ್ಮ-ತಮ್ಮ ಪ್ರತಿಸ್ಪರ್ಧಿಯಾಗಿ ಅವರೆಲ್ಲ ಯಾರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ? ಯಾರಿಗೆ ಸೋಲು? ಯಾರಿಗೆ ಗೆಲುವು ಎಂಬ ಕೌತುಕ ವೀಕ್ಷಕರ ಮನದಲ್ಲಿ ಸೃಷ್ಟಿಯಾಗಿದೆ.

ಇದನ್ನೂ ಓದಿ: Bigg Boss Day 2: ಬಿಗ್​ ಬಾಸ್​ ಮನೆಯಲ್ಲೇ ಮದುವೆಯಾದ ಮಂಜು ಪಾವಗಡ – ದಿವ್ಯಾ ಸುರೇಶ್​!