Bigg Boss Kannada: ಇನ್ನೂ ಮುಗಿದಿಲ್ಲ ಬಿಗ್​ ಬಾಸ್ ಮನರಂಜನೆ; ವೀಕೆಂಡ್​ನಲ್ಲಿ ಪ್ರೇಕ್ಷಕರಿಗಾಗಿ ಕಾದಿದೆ ಸ್ಪೆಷಲ್​ ಎಪಿಸೋಡ್​

BBK8: ಸ್ಪರ್ಧಿಗಳ ವಿಶೇಷ ಸಂದರ್ಶನವನ್ನು ಈ ವಾರಾಂತ್ಯದ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗುವುದು. ಮೇ 15 ಮತ್ತು 16ರಂದು ರಾತ್ರಿ 8 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಬಿಗ್​ ಬಾಸ್​ ಆಟೋಗ್ರಾಫ್​’ ಎಂಬ ವಿಶೇಷ ಎಪಿಸೋಡ್​ ಬಿತ್ತರ ಆಗಲಿದೆ.

Bigg Boss Kannada: ಇನ್ನೂ ಮುಗಿದಿಲ್ಲ ಬಿಗ್​ ಬಾಸ್ ಮನರಂಜನೆ; ವೀಕೆಂಡ್​ನಲ್ಲಿ ಪ್ರೇಕ್ಷಕರಿಗಾಗಿ ಕಾದಿದೆ ಸ್ಪೆಷಲ್​ ಎಪಿಸೋಡ್​
ನಿಧಿ ಸುಬ್ಬಯ್ಯ - ದಿವ್ಯಾ ಸುರೇಶ್​ - ಮಂಜು ಪಾವಗಡ
Edited By:

Updated on: May 14, 2021 | 5:33 PM

ಬಿಗ್​ ಬಾಸ್​ ಕನ್ನಡ ಸೀಸನ್​ 8 ಅನಿರೀಕ್ಷಿತವಾಗಿ ಅಂತ್ಯ ಕಂಡಿತು. ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿರುವುದರಿಂದ ಶೋ ಅರ್ಧಕ್ಕೆ ನಿಲ್ಲಿಸುವುದು ಅನಿವಾರ್ಯ ಆಯಿತು. ಹಾಗಾಗಿ ಕಳೆದ ಸೀಸನ್​ಗಳ ರೀತಿ ಫಿನಾಲೆ ಎಪಿಸೋಡ್​ಗಳನ್ನು ಎಂಜಾಯ್​ ಮಾಡಲು ಪ್ರೇಕ್ಷಕರಿಗೆ ಸಾಧ್ಯವಾಗಲೇ ಇಲ್ಲ. ಅಲ್ಲದೆ, ಕೊನೆ ಕ್ಷಣದಲ್ಲಿ ಮನೆಯಿಂದ ಹೊರಬಂದ ಸ್ಪರ್ಧಿಗಳು ವೇದಿಕೆಗೆ ಬಂದು ಸುದೀಪ್​ ಜೊತೆ ಮಾತನಾಡುವ ಅವಕಾಶದಿಂದಲೂ ವಂಚಿತರಾದರು. ಅದರ ಬದಲು ಕಲರ್ಸ್​ ಕನ್ನಡ ವಾಹಿನಿ ಇನ್ನೊಂದು ರೀತಿಯಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಜ್ಜಾಗಿದೆ.

ಮೇ 9ರಂದು ಅಚಾನಕ್​ ಆಗಿ ದೊಡ್ಮನೆಯಿಂದ ಹೊರಬಂದ 11 ಮಂದಿ ಸ್ಪರ್ಧಿಗಳ ವಿಶೇಷ ಸಂದರ್ಶನ ಮಾಡಲಾಗಿದೆ. 71 ದಿನಗಳ ಬಿಗ್​ ಬಾಸ್​ ಜರ್ನಿ ಹೇಗಿತ್ತು ಎಂದು ಎಲ್ಲರೂ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ನಕ್ಕಿದ್ದು, ಜಗಳ ಆಡಿದ್ದು, ಆಕ್ರಮಣಕಾರಿಯಾಗಿ ಆಟ ಆಡಿದ್ದು, ಪ್ರೀತಿಸಿದ್ದು, ಸ್ನೇಹ ಬೆಳೆಸಿದ್ದು ಸೇರಿ ಅನೇಕ ವಿಚಾರಗಳ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಈ ಮೂಲಕ ತಮ್ಮ ಈ ವಿಶೇಷ ಪಯಣದ ಅನುಭಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸಿದ್ದಾರೆ.

ಬಿಗ್​ ಬಾಸ್​ ಕೊನೆ ಕ್ಷಣಗಳು ಹೇಗಿತ್ತು ಎಂಬುದನ್ನು ಮೇ 11 ಮತ್ತು 12ರ ಸಂಚಿಕೆಯಲ್ಲಿ ತೋರಿಸಲಾಯಿತು. ಬಳಿಕ ನಡೆಸಿದ ವಿಶೇಷ ಸಂದರ್ಶನವನ್ನು ಈ ವಾರದ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗುವುದು. ಮೇ 15 ಮತ್ತು 16ರಂದು ರಾತ್ರಿ 8 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ಬಿಗ್​ ಬಾಸ್​ ಆಟೋಗ್ರಾಫ್​’ ಎಂಬ ವಿಶೇಷ ಎಪಿಸೋಡ್​ ಬಿತ್ತರ ಆಗಲಿದೆ.

ಕೊನೇ ಕ್ಷಣದಲ್ಲಿ ಬಿಗ್​ ಬಾಸ್​ನಿಂದ ಹೊರಬಂದ ಎಲ್ಲ 11 ಸ್ಪರ್ಧಿಗಳು ಕಲರ್ಸ್​ ಕನ್ನಡದ ಫೇಸ್​ಬುಕ್​ ಪೇಜ್​ ಮೂಲಕ ಲೈವ್​ ಬಂದಿದ್ದರು. ಕಮೆಂಟ್​ಗಳ ಮೂಲಕ ಅವರಿಗೆ ವೀಕ್ಷಕರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲಿಯೂ ಕೂಡ ತಮ್ಮ ಅನಿಸಿಕೆಗಳನ್ನು ಎಲ್ಲರೂ ಹಂಚಿಕೊಂಡಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಮನರಂಜನೆ ನೀಡುತ್ತಿದ್ದ ಈ ರಿಯಾಲಿಟಿ ಶೋ ಅಂತ್ಯ ಆಗಿರುವುದಕ್ಕೆ ವೀಕ್ಷಕರೆಲ್ಲ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಸ್ಪರ್ಧಿಗಳ ಮತ್ತು ತಂತ್ರಜ್ಞರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಸೂಕ್ತವಾದದ್ದು ಎಂದು ಅನೇಕರು ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ನಿಂದ ಹೊರ ಬಂದ ವೈಷ್ಣವಿಗೆ ಮ್ಯಾರೇಜ್​ ಪ್ರಪೋಸಲ್​; ನಾಚುತ್ತಲೇ ವಿಚಾರ ಬಿಚ್ಚಿಟ್ಟ ಸನ್ನಿಧಿ

Divya Uruduga: ಬಿಗ್​ ಬಾಸ್ ಟ್ರೋಫಿ ಅಥವಾ ದಿವ್ಯಾ ಉರುಡುಗ; ಇದರಲ್ಲಿ ಅರವಿಂದ್​ ಆಯ್ಕೆ ಯಾವುದು? ಹೊರಬಿತ್ತು ಅಚ್ಚರಿಯ ಉತ್ತರ 

Published On - 5:14 pm, Fri, 14 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us