ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸ್ಪರ್ಧಿಯೂ ತಾವು ಸ್ಟ್ರಾಂಗ್ ಎಂದು ಪ್ರೂವ್ ಮಾಡಬೇಕು. ಇಲ್ಲವಾದರೆ ಅಂಥ ಸ್ಪರ್ಧಿ ವೀಕ್ಷಕರಿಂದ ಕಡಿಮೆ ವೋಟ್ ಪಡೆದು ಮನೆಯಿಂದ ಹೊರಹೋಗುತ್ತಾರೆ. ಹೀಗಾಗಿ ಎಲ್ಲಾ ಟಾಸ್ಕ್ಗಳಲ್ಲಿ ತಮ್ಮನ್ನು ಹೈಲೈಟ್ ಮಾಡಿಕೊಳ್ಳೋಕೆ ಮನೆಯವರು ಆದ್ಯತೆ ನೀಡುತ್ತಾರೆ. ಆದರೆ, ಈ ಬಾರಿ ಹಾಗಾಗಿಲ್ಲ. ಮಂಜು ಪಾವಗಡ, ಅರವಿಂದ್ ಕೆಪಿ ಹಾಗೂ ರಾಜೀವ್ ಸ್ಟ್ರಾಂಗ್ ಎಂದು ಮನೆ ಮಂದಿ ಒಪ್ಪಿಕೊಂಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಶಿಕ್ಷೆ ನೀಡಿದ್ದಾರೆ!
ಮನೆಯಲ್ಲಿ ಸ್ಪರ್ಧಿಗಳು ಬಳಕೆ ಮಾಡುವ ವಸ್ತುಗಳ ಮೌಲ್ಯವನ್ನು ತಿಳಿಸುವ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಇದರಿಂದ ಮನೆಯ ಸದಸ್ಯರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಶುಭಾ ಪೂಂಜಾ ಸೇರಿದಂತೆ ಅನೇಕರು ಬಿಗ್ ಬಾಸ್ಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದರ ಜತೆಗೆ ಅವರಿಗೆ ಮನೆಯಲ್ಲಿರುವ ವಸ್ತುಗಳ ಮೌಲ್ಯ ನಿಧಾನವಾಗಿ ತಿಳಿಯುತ್ತಿದೆ.
ಬಿಗ್ ಬಾಸ್ ನೀಡುವ ಪ್ರತಿ ಸೌಲಭ್ಯಗಳನ್ನು ಟಾಸ್ಕ್ ಮೂಲಕ ಪಡೆದುಕೊಳ್ಳಬೇಕು. ಇದನ್ನು ಸ್ಪರ್ಧಿಗಳು ಸವಾಲಾಗಿ ಸ್ವೀಕರಿಸಿದ್ದಾರೆ. ಯಾವುದು ಹೆಚ್ಚು ಮುಖ್ಯ. ಯಾವುದು ಮುಖ್ಯವಲ್ಲ ಎಂದು ವಿಂಗಡಿಸಿ ಟಾಸ್ಕ್ ಸ್ವೀಕರಿಸುತ್ತಿದ್ದಾರೆ. ಈ ಮಧ್ಯೆ, ಸ್ಪರ್ಧಿಗಳು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನೀಡುವ ಟಾಸ್ಕ್ ಗೆಲ್ಲಬೇಕು ಎನ್ನುವ ಕಾರಣಕ್ಕೆ ದೈಹಿಕವಾಗಿ ಬಲಾಢ್ಯರಾದ ಮಂಜು ಪಾವಗಡ, ರಾಜೀವ್ ಹಾಗೂ ಅರವಿಂದ್ ಟಾಸ್ಕ್ನಲ್ಲಿ ಹೆಚ್ಚೆಚ್ಚು ಪಾಲ್ಗೊಂಡಿದ್ದಾರೆ. ಐದು ಟಾಸ್ಕ್ಗಳ ಪೈಕಿ ಮೂರು ಟಾಸ್ಕ್ನಲ್ಲಿ ಇವರೇ ಆಟವಾಡಿದ್ದಾರೆ. ಇದನ್ನು ಬಿಗ್ ಬಾಸ್ ಗಮನಿಸಿದ್ದಾರೆ. ಅಲ್ಲದೆ, ಶಿಕ್ಷೆ ಕೂಡ ಘೋಷಣೆ ಮಾಡಿದ್ದಾರೆ.
ಐದರಲ್ಲಿ ಮೂರು ಟಾಸ್ಕ್ಅನ್ನು ರಾಜೀವ್, ಮಂಜು ಹಾಗೂ ಅರವಿಂದ್ ಆಡಿರುವುದರಿಂದ ಅವರೇ ಸ್ಟ್ರಾಂಗ್ ಎಂದು ಮನೆಯವರು ಒಪ್ಪಿಕೊಂಡಂತೆ ಆಗಿದೆ. ಹೀಗಾಗಿ, ಗ್ಯಾಸ್ಅನ್ನು ಈ ಮೂವರು ಮಾತ್ರ ಬಳಕೆ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನು ಕೇಳಿ ಮನೆ ಮಂದಿ ಶಾಕ್ ಆಗಿದ್ದಾರೆ.
ಇದನ್ನೂ ಓದಿ: Kichcha Sudeep Salary: ಬಿಗ್ ಬಾಸ್ ಸೀಸನ್ 8ಗೆ ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು?