ಬಿಗ್ಬಾಸ್ (BiggBoss) ಮನೆಯಲ್ಲಿ ಕ್ಯಾಪ್ಟನ್ ಆಗುವುದು ಮಹತ್ವದ ಸಂಗತಿ. ಕ್ಯಾಪ್ಟನ್ ಆದವರಿಗೆ ವಿಶೇಷ ಕೋಣೆ, ಒಂದು ವಾರ ಮನೆಯಲ್ಲಿ ನಿಯಮಗಳನ್ನು ಜಾರಿ ಗೊಳಿಸುವ ಅಧಿಕಾರದ ಜೊತೆಗೆ ಒಂದು ವಾರ ನಾಮಿನೇಷನ್ನಿಂದ ಬಚಾವಾಗುವ ಸೌಕರ್ಯ ಸಿಗುತ್ತದೆ. ಹಾಗಾಗಿ ಕ್ಯಾಪ್ಟನ್ ಆಗಲು ಎಲ್ಲರೂ ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಅದರಲ್ಲೂ ಫಿನಾಲೆಗೆ ಹತ್ತಿರವಾದಾಗ ಕ್ಯಾಪ್ಟನ್ ಆದವರಿಗೆ ಫಿನಾಲೆಗೆ ನೇರ ಟಿಕೆಟ್ ಸಿಕ್ಕಿದಂತೆಯೇ ಸರಿ. ಈ ಬಾರಿಯೂ ಸಹ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಜೋರಾಗಿದ್ದು, ಸಂಗೀತಾ ಜಾಣತನದಿಂದ ತಮ್ಮ ದಾರಿ ಸುಗಮಗೊಳಿಸಿಕೊಂಡಿದ್ದಾರೆ.
ಗುರುವಾರದ ಎಪಿಸೋಡ್ನಲ್ಲಿ ವಾರದ ಟಾಸ್ಕ್ ಅಂತ್ಯವಾಗಿ ಹೊಸ ಕ್ಯಾಪ್ಟನ್ ಆಯ್ಕೆಗೆ ಪ್ರತಿಕ್ರಿಯೆಗೆ ಚಾಲನೆ ದೊರೆಯಿತು. ಸಿರಿ ಅವರು ನೀಡಿದ ವಿಶೇಷ ಅಧಿಕಾರದಿಂದ ಸಂಗೀತಾ ನೇರವಾಗಿ ಕ್ಯಾಪ್ಟನ್ ರೇಸ್ಗೆ ಆಯ್ಕೆ ಆದರು. ಇನ್ನುಳಿದವರಲ್ಲಿ ಪ್ರತಿ ಇಬ್ಬರಂತೆ ಮನೆಯ ಇತರೆ ಸದಸ್ಯರ ಮುಂದೆ ಬಂದು ತಾವೇಕೆ ಕ್ಯಾಪ್ಟನ್ ಆಗಲು ಅರ್ಹ ಎಂದು ವಾದಿಸಬೇಕಿತ್ತು. ಮನೆಯವರು ಯಾರಿಗೆ ಮತ ಹಾಕುತ್ತಾರೆಯೋ ಅವರು ರೇಸ್ಗೆ ಅರ್ಹರಾಗುತ್ತಾರೆ ಎಂದಾಯ್ತು. ಮನೆ ಸದಸ್ಯರು ತನಿಷಾರನ್ನು ರೇಸ್ನಿಂದ ಹೊರಗಿಟ್ಟಿದ್ದರಿಂದ ಅವರು ಕ್ಯಾಪ್ಟನ್ ರೇಸ್ಗೆ ಅರ್ಹತೆ ಕಳೆದುಕೊಂಡರು.
ಇದನ್ನೂ ಓದಿ:ಡ್ರೋನ್ ಪ್ರತಾಪ್ ಬಿಗ್ಬಾಸ್ ಮನೆಯಲ್ಲಿ ಮಾತ್ರೆ ಸೇವಿಸುತ್ತಿದ್ದರೇ? ರಕ್ಷಕ್ ಹೇಳಿದ್ದು ಹೀಗೆ
ಮೊದಲು ಹೋದ ಮೈಖಲ್ ಹಾಗೂ ವಿನಯ್ರಲ್ಲಿ ಮನೆ ಸದಸ್ಯರು ವಿನಯ್ರನ್ನು ಆರಿಸಿದರು. ಬಳಿಕ ತುಕಾಲಿ ಸಂತು ಹಾಗೂ ವರ್ತೂರು ಸಂತು ಅವರಲ್ಲಿ ತುಕಾಲಿ ಸಂತು ಆಯ್ಕೆಯಾದರು. ಅದಾದ ಬಳಿಕ ಬಂದ ನಮ್ರತಾ ಹಾಗೂ ಕಾರ್ತಿಕ್ ಅವರನ್ನು ಕಾರ್ತಿಕ್ ಅವರನ್ನು ಹೆಚ್ಚು ಮಂದಿ ಆಯ್ಕೆ ಮಾಡಿದರು. ಆದರೆ ಸಂಗೀತಾ ಮಾತ್ರ ನಮ್ರತಾಗೆ ಮತ ಹಾಕಿದರು. ಅಲ್ಲಿಗೆ ವಿನಯ್, ಕಾರ್ತಿಕ್, ತುಕಾಲಿ ಸಂತು ಹಾಗೂ ಸಂಗೀತಾ ಅವರುಗಳು ಕ್ಯಾಪ್ಟನ್ಸಿ ರೇಸ್ನಲ್ಲಿ ಉಳಿದರು.
ಬಳಿಕ ಸಂಗೀತಾಗೆ ಇನ್ನೊಂದು ಅವಕಾಶ ಕೊಟ್ಟ ಬಿಗ್ಬಾಸ್, ನಿಮಗೆ ಬೇಡವಾದ ಇಬ್ಬರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗಿಡಬಹುದು ಎಂದರು. ಆಗ ಸಂಗೀತಾ ತಮಗೆ ಕಠಿಣ ಎದುರಾಳಿ ಆಗಬಹುದಾಗಿದ್ದ ಕಾರ್ತಿಕ್ ಹಾಗೂ ವಿನಯ್ ಇಬ್ಬರನ್ನೂ ಸಹ ಹೊರಗೆ ಇಟ್ಟರು. ಅಂತಿಮವಾಗಿ ತುಕಾಲಿ ಸಂತು ಹಾಗೂ ಸಂಗೀತಾ ಮಾತ್ರವೇ ಕ್ಯಾಪ್ಟೆನ್ಸಿ ರೇಸ್ನಲ್ಲಿ ಉಳಿದರು. ಸಂಗೀತಾ ಹಾಗೂ ತುಕಾಲಿ ನಡುವೆ ಕ್ಯಾಪ್ಟೆನ್ಸಿಗಾಗಿ ಟಾಸ್ಕ್ ನಡೆದು ಯಾರು ಕ್ಯಾಪ್ಟನ್ ಆಗಲಿದ್ದಾರೆ ಎಂಬುದು ಶುಕ್ರವಾರದ ಎಪಿಸೋಡ್ನಲ್ಲಿ ತಿಳಿಯಲಿದೆ. ಅಂದಹಾಗೆ ಸಂಗೀತಾ ಕಾರ್ತಿಕ್ ಹಾಗೂ ವಿನಯ್ ರನ್ನು ಹೊರಗಿಟ್ಟಿದ್ದರಿಂದ ಮನೆಯ ಸದಸ್ಯರಿಗೆ ಐದು ಲಕ್ಷ ಹಣ ಹೆಚ್ಚುವರಿ ಹಣವೂ ದೊರೆಯಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ