Bigg Boss Kannada: ನಿರ್ಮಲಾಗೋಸ್ಕರ ಮನಸ್ಸು ಬದಲಾಯಿಸಿಕೊಂಡ ಪ್ರಶಾಂತ್​ ಸಂಬರಗಿ! ಇದು ಸಖತ್​ ಅನಿರೀಕ್ಷಿತ

Bigg Boss Kannada Updates (Day 4): ಪ್ರಶಾಂತ್​ ಸಂಬರಗಿ ಅವರ ನೇರ ವ್ಯಕ್ತಿತ್ವವೇ ಬಿಗ್​ ಬಾಸ್​ ಮನೆಯೊಳಗೆ ಹೆಚ್ಚು ಹೈಲೈಟ್​ ಆಗುತ್ತಿದೆ. ಅವರ ಕೆಲವು ವರ್ತನೆ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ.

Bigg Boss Kannada: ನಿರ್ಮಲಾಗೋಸ್ಕರ ಮನಸ್ಸು ಬದಲಾಯಿಸಿಕೊಂಡ ಪ್ರಶಾಂತ್​ ಸಂಬರಗಿ! ಇದು ಸಖತ್​ ಅನಿರೀಕ್ಷಿತ
ಪ್ರಶಾಂತ್​ ಸಂಬರಗಿ ನಿರ್ಮಲಾ ಚೆನ್ನಪ್ಪ
Edited By:

Updated on: Mar 05, 2021 | 6:50 PM

ಎಲ್ಲಿ ವಿವಾದ ಇರುತ್ತೋ ಅಲ್ಲಿ ಪ್ರಶಾಂತ್​ ಸಂಬರಗಿ ಇರುತ್ತಾರೆ ಎಂಬ ವಾತಾವರಣ ಆಗಾಗ ನಿರ್ಮಾಣ ಆಗುತ್ತಿತ್ತು. ಅವರು ಬಿಗ್​ ಬಾಸ್​ ಮನೆಯೊಳಗೆ ಕಾಲಿಟ್ಟಾಗಲೂ ಅನೇಕರಿಗೆ ಅದೇ ಅಭಿಪ್ರಾಯವಿತ್ತು. ಆದರೆ ಈಗ ಆಗುತ್ತಿರುವುದೇ ಬೇರೆ. ಸ್ಪರ್ಧಿಗಳಿಗೆ ಮಾತ್ರವಲ್ಲದೆ, ವೀಕ್ಷಕರಿಗೂ ಅಚ್ಚರಿ ಆಗುವಂತಹ ರೀತಿಯಲ್ಲಿ ಪ್ರಶಾಂತ್​ ಸಂಬರಗಿ ನಡೆದುಕೊಳ್ಳುತ್ತಿದ್ದಾರೆ.

ಒಂದು ಟಾಸ್ಕ್​ನಲ್ಲಿ ವಿಶ್ವನಾಥ್​ ಅವರನ್ನು ಪ್ರತಿಸ್ಪರ್ಧಿಯಾಗಿ ಆಯ್ಕೆ ಮಾಡಿದ್ದ ಪ್ರಶಾಂತ್​ ಸಂಬರಗಿ ಅವರು, ‘ನಾನು ನನ್ನ ಸ್ವಾರ್ಥಕ್ಕಾಗಿ ವೀಕ್​ ಸ್ಪರ್ಧಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ‘ ಎಂಬುದನ್ನು ಒಪ್ಪಿಕೊಂಡಿದ್ದರು. ಆಗ ಅವರ ವರ್ತನೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನೆಗೆಟಿವ್​ ಕಾಮೆಂಟ್​ಗಳು ಬಂದಿದ್ದವು. ಆದರೆ ಈಗ ಸಂಬರಗಿ ವರ್ತನೆ ಬದಲಾಗಿದೆ. ನಿರ್ಮಲಾ ಚೆನ್ನಪ್ಪ ವಿಚಾರದಲ್ಲಿ ಸಂಬರಗಿ ಒಳ್ಳೆಯತನ ಪ್ರದರ್ಶನ ಮಾಡಿದ್ದಾರೆ. ತಮ್ಮ ಕಂಫರ್ಟ್​ ಅನ್ನು ತ್ಯಾಗ ಮಾಡಿ ನಿರ್ಮಲಾರನ್ನು ನಾಮಿನೇಷನ್​ನಿಂದ ಬಚಾವ್​ ಮಾಡಿದ್ದಾರೆ!

ಸಂಬರಗಿಗೆ ಕಾಫಿ ಎಂದರೆ ಅಚ್ಚುಮೆಚ್ಚು. ಕಾಫಿ ಇಲ್ಲದಿದ್ದರೆ ತಮಗೆ ತಲೆಯೇ ಓಡುವುದಿಲ್ಲ ಎಂದು ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಸದ್ಯ ದೊಡ್ಮನೆಯಲ್ಲಿ ಕಾಫಿ ಪೌಡರ್​ ಖಾಲಿ ಆಗಿದೆ. ಸಂಬರಗಿಯನ್ನು ಕನ್ಫೆಷನ್​ ರೂಮ್​ಗೆ ಆಹ್ವಾನಿಸಿ, ಅವರಿಗೆ ಕಾಫಿ ಪುಡಿ ನೀಡುವುದಾಗಿ ಬಿಗ್​ ಬಾಸ್​ ಹೇಳಿದ್ದರು. ಅದರ ಜೊತೆಯಲ್ಲಿ ಅವರಿಗೆ ಇನ್ನೊಂದು ಆಯ್ಕೆಯನ್ನೂ ಕೊಟ್ಟಿತ್ತು. ಕಾಫಿ ಪುಡಿ ಆಯ್ಕೆ ಮಾಡಿಕೊಳ್ಳಬೇಕು ಅಥವಾ ನಿರ್ಮಲಾ ಅವರನ್ನು ಉಳಿಸಿಕೊಳ್ಳಬೇಕು. ಇದರಲ್ಲಿ ಸಂಬರಗಿ ತ್ಯಾಗ ಮಾಡಿದ್ದು ಕಾಫಿ ಪುಡಿಯನ್ನು!

ಹೌದು, ಆಸೆಗಣ್ಣುಗಳಿಂದ ಕಾಫಿ ಪುಡಿ ಪೊಟ್ಟಣವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಪ್ರಶಾಂತ್​ ಸಂಬರಗಿ ಅವರು ಬಿಗ್​ ಬಾಸ್​ ನೀಡಿದ ಎರಡನೇ ಆಯ್ಕೆ ಕೇಳಿ ಒಂದು ಕ್ಷಣ ಪೆಚ್ಚಾದರು. ಹಾಗಿದ್ದರೂ ತಮ್ಮ ಕಾಫಿ ಬಯಕೆಯನ್ನು ಹತ್ತಿಕ್ಕಿಕೊಂಡರು. ತಮಗೆ ಕಾಫಿ ಇಲ್ಲದಿದ್ದರೂ ಪರವಾಗಿಲ್ಲ. ಸಹ-ಸ್ಪರ್ಧಿ ನಿರ್ಮಾಲಾ ಸೇಫ್​ ಆದರೆ ಸಾಕು ಎಂದು ಹೃದಯ ವೈಶಾಲ್ಯತೆ ಪ್ರದರ್ಶಿಸಿದ ಅವರು ಕಾಫಿ ತ್ಯಾಗ ಮಾಡಿದರು. ಕನ್ಫೆಷನ್​ ರೂಮ್​ನಿಂದ ಹೊರಬಂದ ಬಳಿಕ ಎಲ್ಲರಿಗೂ ಈ ವಿಚಾರ ತಿಳಿಸಿದರು. ಆಗ ಸಂಬರಗಿಗೆ ಎಲ್ಲರಿಂದ ಮೆಚ್ಚುಗೆ ಪ್ರಾಪ್ತವಾಯಿತು.

‘ಮೊದಲನೇ ವಾರ ಒಂದು ಟಾಸ್ಕ್​ನಲ್ಲಿ ಪರ್ಫಾರ್ಮ್​ ಮಾಡದೇ ಇರುವುದಕ್ಕೆ ಅವರಿಗೆ ಅವಕಾಶ ಮಿಸ್​ ಆಗಿದೆ. ಅವರು ಸ್ವಲ್ಪ ಅಧಿಕ ಪ್ರಸಂಗಿ ಆಗಿರಬಹುದು. ನನಗೆ ಅನಿಸಿದ ಹಾಗೆ ಅವರು ಗೋಮುಖ ವ್ಯಾಘ್ರದ ರೀತಿ. ಅತಿ ವಿನಯಂ ದೂರ್ತ ಲಕ್ಷಣಂ ಎಂಬಂತೆ ಇದ್ದಾರೆ. ನನಗೆ ಅವರ ವರ್ತನೆಗಳು ಹಿಡಿಸದೇ ಇರಬಹುದು. ಆದರೆ ಎಲ್ಲರನ್ನೂ ನೋಡಿಕೊಳ್ಳುವಷ್ಟು ಒಳ್ಳೆಯ ಮನಸ್ಸು ಆಕೆಯದ್ದು’ ಎಂದು ಸಂಬರಗಿ ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: Prashanth Sambargi: ಪ್ರಶಾಂತ್​ ಸಂಬರಗಿಯನ್ನು ಜೈಲಿಗೆ ಕಳುಹಿಸಿ: ಬಿಗ್ ಬಾಸ್​ ಎದುರು ಹೊಸ ಬೇಡಿಕೆ ಇಟ್ಟ ನಿಧಿ ಸುಬ್ಬಯ್ಯ

Bigg Boss Kannada Day 2: ಸ್ವಾರ್ಥದ ಹಾದಿ ಹಿಡಿದು ಸೇಫ್​ ಆದ ಪ್ರಶಾಂತ್​ ಸಂಬರಗಿ! ಡೇಂಜರ್​ ಝೋನ್​ನಲ್ಲಿ ವಿಶ್ವನಾಥ್​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us