Prashanth Sambargi: ಪ್ರಶಾಂತ್​ ಸಂಬರಗಿಯನ್ನು ಜೈಲಿಗೆ ಕಳುಹಿಸಿ: ಬಿಗ್ ಬಾಸ್​ ಎದುರು ಹೊಸ ಬೇಡಿಕೆ ಇಟ್ಟ ನಿಧಿ ಸುಬ್ಬಯ್ಯ

ಪ್ರಶಾಂತ್​ ಅವರನ್ನು ಈ ಜೈಲಿಗೆ ಹಾಕಿ ಎನ್ನುವ ಬೇಡಿಕೆ ನಿಧಿ ಅವರದ್ದು. ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

Prashanth Sambargi: ಪ್ರಶಾಂತ್​ ಸಂಬರಗಿಯನ್ನು ಜೈಲಿಗೆ ಕಳುಹಿಸಿ: ಬಿಗ್ ಬಾಸ್​ ಎದುರು ಹೊಸ ಬೇಡಿಕೆ ಇಟ್ಟ ನಿಧಿ ಸುಬ್ಬಯ್ಯ
Follow us
ರಾಜೇಶ್ ದುಗ್ಗುಮನೆ
|

Updated on: Mar 04, 2021 | 12:45 PM

ಬಿಹ್​ ಬಾಸ್​ ಮನೆ ಒಳಗೆ ತೆರಳಿರುವ 17 ಸ್ಪರ್ಧಿಗಳ ಅಸಲಿ ಮುಖ ಈಗ ಬಯಲಾಗುತ್ತಿದೆ. ಕೆಲವರು ತುಂಬಾನೇ ಸಾಫ್ಟ್​ ತರ ಕಂಡರೂ ಮನೆ ಒಳಗೆ ಸಖತ್​ ರಫ್​-ಆ್ಯಂಡ್​ ಟಫ್​. ಮನೆ ಹೊರಗೆ ತುಂಬಾನೇ ಅಬ್ಬರ ಮಾಡಿದವರು ಮನೆ ಒಳಗೆ ತುಂಬಾನೇ ಸೈಲೆಂಟ್​. ಆದರೆ, ಮನೆ ಒಳಗೂ ಹೊರಗೂ ಒಂದೇ ತರ ಇದ್ದವರು ಪ್ರಶಾಂತ್​ ಸಂಬರಗಿ. ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗಿದ್ದ ಅವರು, ಈಗ ಮನೆ ಒಳಗೂ ಜಗಳಕ್ಕೆ ಕಾರಣರಾಗುತ್ತಿದ್ದಾರೆ. ಅವರನ್ನು ಮನೆ ಒಳಗೆ ಇರುವ ಜೈಲಿಗೆ ಕಳುಹಿಸುವಂತೆ ನಿಧಿ ಸುಬ್ಬಯ್ಯ ಆಗ್ರಹಿಸಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಜೈಲು ಇರುವ ವಿಚಾರ ಗೊತ್ತೇ ಇದೆ. ಏನಾದರೂ ತಪ್ಪು ಮಾಡಿದರೆ ಅಥವಾ ಬಿಗ್​ ಬಾಸ್​ ನಿಯಮಗಳನ್ನು ಪಾಲನೆ ಮಾಡದೆ ಇದ್ದರೆ ಈ ಜೈಲಿನೊಳಗೆ ಹಾಕಲಾಗುತ್ತದೆ. ಬಿಗ್​ ಬಾಸ್​ ಮನೆಯೇ ಒಂದು ಜೈಲಿನ ರೀತಿ ಇದ್ದರೆ, ಅದಕ್ಕೂ ಒಂದು ಹೆಜ್ಜೆ ಮುಂದೆ ಎಂಬಂತಿದೆ ಈ ಜೈಲು. ಪ್ರಶಾಂತ್​ ಅವರನ್ನು ಈ ಜೈಲಿಗೆ ಹಾಕಿ ಎನ್ನುವ ಬೇಡಿಕೆ ನಿಧಿ ಅವರದ್ದು. ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ನಿಧಿ ಹಾಗೂ ಅರವಿಂದ್​ ನಿನ್ನೆ ಕ್ಯಾಮೆರಾ ಎದುರು ಬಂದಿದ್ದರು. ಈ ವೇಳೆ, ನನಗೆ ಸ್ವಿಮ್ಮಿಂಗ್​ ಫೂಲ್​ನ ಟಾಸ್ಕ್​ ಮಾಡಿ ನೆಗಡಿ ಆಗಿದೆ. ಕಾಫಿ ಕುಡಿಯೋಣ ಎಂದರೆ ಕಾಫಿ ಪೌಡರ್​ ಇಲ್ಲ. ಪ್ರಶಾಂತ್​ ಅವರು ಕಾಫಿ ಪೌಡರ್​ ಖಾಲಿ ಮಾಡಿದ್ದಾರೆ. ಅಗತ್ಯ ಬಿದ್ದರೆ ಅವರನ್ನು ಜೈಲಿಗೆ ಹಾಕಿ. ನಮಗೆ ಕಾಫಿ ಪೌಡರ್​ ಕಳುಹಿಸಿ ಎಂದಿದ್ದಾರೆ.

ಒಂದೊಮ್ಮೆ ನಿಧಿ ಇಟ್ಟ ಬೇಡಿಕೆ ಪ್ರಶಾಂತ್​ ಅವರಿಗೆ ಗೊತ್ತಾದರೆ ಬಿಗ್ ಬಾಸ್​ ಮನೆಯಲ್ಲಿ ದೊಡ್ಡ ಜಗಳ ನಡೆಯೋದು ಗ್ಯಾರಂಟಿ. ನಿನ್ನೆ ನಡೆದ ಸಣ್ಣ ವಿಚಾರಕ್ಕೆ ಬ್ರೋ ಗೌಡ ಜತೆ ಪ್ರಶಾಂತ್​ ಕಾಲ್ಕೆರುದುಕೊಂಡು ಜಗಳಕ್ಕೆ ಹೋಗಿದ್ದರು. ಹೀಗಿರುವಾಗ ನಿಧಿ ತಮ್ಮನ್ನು ಜೈಲಿಗೆ ಕಳುಹಿಸುವಂತೆ ಕೋರಿದ್ದು ಗೊತ್ತಾದರೆ ಪ್ರಶಾಂತ್​ ಮತ್ತೆ ಕೂಗಾಡುವುದರಲ್ಲಿ  ಅನುಮಾನವಿಲ್ಲ.

ಇದನ್ನೂ ಓದಿ: BBK8: ಬಿಗ್​ ಬಾಸ್​ ಮೊದಲ ವಾರದಲ್ಲಿ ಹೊರ ಹೋಗೋದು ಶುಭಾ ಪೂಂಜಾ? ಮೂರನೇ ದಿನ ಹೊಸ ಟ್ವಿಸ್ಟ್​

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​