BBK8: ‘ದಿವ್ಯಾನ ಬಿಟ್ಟು ಕೊಡು ಗುರೂ’ ಅಂತ ಮಂಜುಗೆ ಮನವಿ ಮಾಡಿದ ಶಮಂತ್​! ಕಿಚ್ಚನ ಎದುರಲ್ಲೇ ರಹಸ್ಯ ಬಯಲು

ಶಮಂತ್​ ಬ್ರೋ ಗೌಡ ಅವರ ವರ್ತನೆಗಳ ಬಗ್ಗೆ ವಾರದ ಪಂಚಾಯಿತಿಯಲ್ಲಿ ಚರ್ಚೆ ಆಗಿದೆ. ಹುಡುಗಿಯರ ವಿಚಾರದಲ್ಲಿ ಶಮಂತ್​ ಹೇಗೆ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಮನೆಯ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

BBK8: ‘ದಿವ್ಯಾನ ಬಿಟ್ಟು ಕೊಡು ಗುರೂ’ ಅಂತ ಮಂಜುಗೆ ಮನವಿ ಮಾಡಿದ ಶಮಂತ್​! ಕಿಚ್ಚನ ಎದುರಲ್ಲೇ ರಹಸ್ಯ ಬಯಲು
ಮಂಜು ಪಾವಗಡ - ದಿವ್ಯಾ ಉರುಡುಗ - ಶಮಂತ್​ ಬ್ರೋ ಗೌಡ
Edited By:

Updated on: Mar 15, 2021 | 2:34 PM

ಹುಡುಗಿಯರು ಬೇರೆ ಹುಡುಗರ ಜೊತೆ ಇರುವಷ್ಟು ಆರಾಮಾಗಿ ತಮ್ಮ ಜೊತೆ ಇರಲ್ಲ ಅಂತ ಶಮಂತ್​ಗೆ ಬಹಳ ಬೇಜಾರು ಇದೆ. ಈ ಮಾತು ನಿಜವೇ ಎಂದು ಮನೆಯ ಎಲ್ಲ ಸದಸ್ಯರಿಗೆ 2ನೇ ವಾರಾದ ಪಂಚಾಯಿತಿಯಲ್ಲಿ ಸುದೀಪ್​ ಪ್ರಶ್ನೆ ಕೇಳಿದರು. ಅದಕ್ಕೆ ಎಲ್ಲರೂ ಬಗೆಬಗೆಯ ಉತ್ತರ ನೀಡಿದರು.

ಶುಭಾ ಪೂಂಜಾ ತುಂಬ ಫನ್ನಿಯಾಗಿ ಉತ್ತರಿಸಿದರು. ‘ಈ ವಿಷಯದಲ್ಲಿ ಶಮಂತ್​ ತುಂಬಾ ಬೇಜಾರು ಮಾಡಿಕೊಂಡಿರುವುದು ನಿಜ. ಹೊರಗಡೆ 22 ಹುಡುಗಿಯರು ಪ್ರಪೋಸ್​ ಮಾಡಿದ್ರು ಅಂತ ಶಮಂತ್​ ಹೇಳಿಕೊಳ್ಳುತ್ತಾರೆ. ಆದರೆ ಇಲ್ಲಿ ನಿಮಗೆ ಒಬ್ಬರೂ ಬೀಳುತ್ತಿಲ್ಲವಲ್ಲ ಯಾಕೆ ಅಂತ ನಾನು ಕೇಳಿದೀನಿ’ ಎಂದರು ಶುಭಾ ಪೂಂಜಾ. ಅದಕ್ಕೆ ಕಿಚ್ಚನ ಪ್ರತಿಕ್ರಿಯೆ ಕೂಡ ಸಖತ್​ ಫನ್ನಿ ಆಗಿತ್ತು. ‘ರೀ.. ಶಮಂತ್​, ಹೊರಗಡೆ 22 ಹುಡುಗಿಯರು ಪ್ರಪೋಸ್​ ಮಾಡೋದು ಇಂಪಾರ್ಟೆಂಟ್​ ಅಲ್ಲ. ಮಂಜು ಥರ ಎರಡು ಹೊರಗಡೆ ಇಡಿ’ ಎಂದು ಸುದೀಪ್​ ಹೇಳುತ್ತಿದ್ದಂತೆಯೇ ಎಲ್ಲರೂ ಜೋರಾಗಿ ನಕ್ಕರು.

‘ಸುಮ್ಮನೆ ಇರಿ ಸರ್​, ಭಯ ಆಗುತ್ತಿದೆ’ ಎಂದು ಮಂಜು ಮಾತು ಶುರುಮಾಡಿದರು. ‘ನಾನು ಯಾರ ಜೊತೆಗಾದರೂ ಮಾತನಾಡಿದರೆ ಶಮಂತ್​ ಮುನಿಸಿಕೊಂಡು ಹೋಗುತ್ತಾನೆ. ಗುರೂ, ಇದು ಒಂದಾದರೂ ಬಿಟ್ಟು ಬಿಡು ಅಂತಾನೆ. ಕಲ್ಲು ಹಾಕಬೇಡ ಗುರೂ ಅನ್ನುತ್ತಾನೆ. ದಿವ್ಯಾ ಉರುಡುಗ ವಿಚಾರದಲ್ಲಿ ಶಮಂತ್​ ಈ ರೀತಿ ಹೇಳಿದ್ದಾನೆ’ ಎಂದಿದ್ದಾರೆ ಮಂಜು.

ಶುಭಾ ಪೂಂಜಾ ಇನ್ನೊಂದು ವಿಚಾರ ತೆರೆದಿಟ್ಟಿದ್ದಾರೆ. ‘ಫಸ್ಟ್​ವೀಕ್​ನಲ್ಲಿಯೇ ಶಮಂತ್​ ಕ್ಯಾಪ್ಟನ್​ ಆಗಿದ್ದರಿಂದ ಎಲ್ಲರ ತಲೆ ತಿಂದಿದ್ದಾರೆ. ಕೆಲಸ ಮಾಡಿಲ್ಲ, ವಸ್ತುಗಳನ್ನು ಸರಿಯಾಗಿ ಇಟ್ಟಿಲ್ಲ, ಅಡುಗೆ ಮಾಡಿಲ್ಲ, ಅದು ಮಾಡಿಲ್ಲ ಇದು ಮಾಡಿಲ್ಲ ಅಂತ ಎಲ್ಲ ಹುಡುಗಿಯರಿಗೂ ಅಜ್ಜಿ ಥರ ಶಮಂತ್​ ತಲೆ ತಿಂದಿದ್ದಾರೆ. ಹಾಗಾಗಿ ಎಲ್ಲ ಹುಡುಗಿಯರೂ ಶಮಂತ್​ರನ್ನು ಕಂಡರೆ ದೂರ ಓಡಿ ಹೋಗುತ್ತಾರೆ. ಹುಡುಗಿಯರನ್ನು ಬೀಳಿಸುವ ಟ್ಯಾಲೆಂಟ್​ ಶಮಂತ್​ಗೆ ಇನ್ನೂ ಬರಬೇಕು’ ಎಂಬುದು ಶುಭಾ ಪೂಂಜಾ ಅಭಿಪ್ರಾಯ.

ಇದನ್ನೂ ಓದಿ: BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!

‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us