ಬಿಗ್ ಬಾಸ್ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕೆಲವರು ಈಗಾಗಲೇ ಮನೆಯಲ್ಲಿ ಫೇವರಿಟ್ ಸ್ಪರ್ಧಿ ಎನ್ನುವ ಪಟ್ಟ ಪಡೆದುಕೊಂಡಿದ್ದಾರೆ. ಇನ್ನೂ ಕೆಲವರು ಆಟವನ್ನೇ ಸ್ಟಾರ್ಟ್ ಮಾಡಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಇಂಥ ಸಂದರ್ಭದಲ್ಲಿ ರಘು ಹಾಗೂ ವಿಶ್ವಗೆ ದೊಡ್ಡ ತಪ್ಪಿನ ಅರಿವಾಗಿದೆ. ಇದನ್ನು ತಿದ್ದುಕೊಳ್ಳೋಕೆ ಪರಿಹಾರ ಕೂಡ ಕಂಡುಕೊಂಡಿದ್ದಾರೆ.
ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ರಘು ಮತ್ತು ವಿಶ್ವ ಒಟ್ಟಾಗಿ ಇರುತ್ತಿದ್ದಾರೆ. ಇಬ್ಬರೂ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡುತ್ತಿರುತ್ತಾರೆ. ಮುಂದೆ ಟಾಸ್ಕ್ ಹೇಗೆ ಮಾಡಬೇಕು ಎನ್ನುವ ಚರ್ಚೆ ಮಾಡುತ್ತಿರುತ್ತಾರೆ. ಈಗ ಇಬ್ಬರೂ ಬಿಗ್ ಬಾಸ್ ಮನೆಯಲ್ಲಿ ಮಾಡುತ್ತಿರುವ ತಪ್ಪಿನ ಬಗ್ಗೆ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ಗೆ ಬರುವ ಅನೇಕ ಸ್ಪರ್ಧಿಗಳು ನಾನು ಫಿನಾಲೆವರೆಗೂ ಇರುತ್ತೇನೆ ಎನ್ನುವ ಉದ್ದೇಶ ಇಟ್ಟುಕೊಂಡು ಬರುತ್ತಾರೆ. ಇನ್ನೂ ಕೆಲ ಸ್ಪರ್ಧಿಗಳು ಎಷ್ಟು ದಿನ ಆಗತ್ತೋ ಅಷ್ಟು ದಿನ ಇರೋಣ ಎನ್ನುವ ಉದ್ದೇಶ ಇಟ್ಟುಕೊಂಡು ಬರುತ್ತಾರೆ. ಇದು ಪ್ರತಿ ಬಾರಿಯೂ ಆಗುವಂಥದ್ದೇ. ಇದೇ ಎಲ್ಲಾ ಸ್ಪರ್ಧಿಗಳು ಮಾಡುವ ದೊಡ್ಡ ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ ರಘು.
ಬಿಗ್ ಬಾಸ್ ಮನೆಗೆ ಬರುವಾಗ ನಾವು ಇದ್ದಷ್ಟು ದಿನ ಚೆನ್ನಾಗಿ ಇರೋಣ ಎಂದುಕೊಂಡು ಬರುತ್ತೇವೆ. ಆದರೆ, ನಾವು ಮಾಡುವ ದೊಡ್ಡ ತಪ್ಪು ಇದು. ಬಿಗ್ ಬಾಸ್ಗೆ ಬಂದಮೇಲೆ ಕೊನೆವರೆಗೂ ಇರಬೇಕು ಎನ್ನುವ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಇರುವಷ್ಟು ದಿನ ಇದ್ರೆ ಆಯ್ತು ಎನ್ನುವ ಮನಸ್ಥಿತಿ ಇದ್ದರೆ ಗೆಲ್ಲೋಕೆ ಸಾಧ್ಯವಿಲ್ಲ. ಇದು ನಾವು ಮಾಡುತ್ತಿರುವ ದೊಡ್ಡ ತಪ್ಪು ಎಂದರು. ಈ ವಿಚಾರ ವಿಶ್ವ ಅವರಿಗೂ ಹೌದು ಎನಿಸಿದೆ. ಅಲ್ಲದೆ, ಈ ತಪ್ಪನ್ನು ತಿದ್ದಿಕೊಳ್ಳುವ ಭರವಸೆಯನ್ನು ಪರಸ್ಪರ ನೀಡಿಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಶಮಂತ್ ಕೂದಲಿಗೆ ಕತ್ತರಿ! ಇದು ಹೊಸಾ ಪನಿಶ್ಮೆಂಟ್?