ಸಲ್ಮಾನ್ ಖಾನ್ ಸಿನಿಮಾ: ಬಿಡುಗಡೆಗೆ ಎರಡು ದಿನ ಮೊದಲೇ 23000 ಟಿಕೆಟ್ ಸೇಲ್

|

Updated on: Apr 19, 2023 | 9:06 PM

Salman Khan: ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಸಿನಿಮಾವು ಬಿಡುಗಡೆ ಆಗಲು ಇನ್ನೂ ಎರಡು ದಿನ ಇರುವಂತೆಯೇ 23000 ಟಿಕೆಟ್​ಗಳು ಮುಂಗಡವಾಗಿ ಮಾರಾಟವಾಗಿವೆ.

ಸಲ್ಮಾನ್ ಖಾನ್ ಸಿನಿಮಾ: ಬಿಡುಗಡೆಗೆ ಎರಡು ದಿನ ಮೊದಲೇ 23000 ಟಿಕೆಟ್ ಸೇಲ್
ಕಿಸಿ ಕಾ ಭಾಯ್, ಕಿಸಿ ಕಿ ಜಾನ್
Follow us on

ಪಠಾಣ್ (Pathaan) ಸಿನಿಮಾದ ಬಳಿಕ ಬಾಲಿವುಡ್​ಗೆ (Bollywood) ಮತ್ತೆ ಮರುಜೀವ ಬಂದಂತಿದೆ. ಪಠಾಣ್ ಬಳಿಕ ಬಿಡುಗಡೆ ಆದ ಅಜಯ್ ದೇವಗನ್​ರ (Ajay Devgan) ಭೋಲಾ ಹಾಗೂ ರಣ್ಬೀರ್ ಕಪೂರ್ (Ranbir Kapoor) ನಟನೆಯ ತು ಜೂಟಿ ಮೇ ಮಕ್ಕಾರ್ ಸಿನಿಮಾಗಳು 100 ಕೋಟಿ ಕೆಲಕ್ಷನ್ ದಾಟಿವೆ. ಇದೀಗ ಸಲ್ಮಾನ್ ಖಾನ್ (Salman Khan) ಸಿನಿಮಾ ಬಿಡುಗಡೆ ಆಗಲು ತಯಾರಾಗಿದ್ದು, ಪಠಾಣ್ ಮಾದರಿಯಲ್ಲಿಯೇ ಈ ಸಿನಿಮಾ ಸಹ ದೊಡ್ಡ ಓಪನಿಂಗ್ ಪಡೆಯುವ ನಿರೀಕ್ಷೆ ಹುಟ್ಟುಹಾಕಿದೆ.

ಸಲ್ಮಾನ್ ಖಾನ್ ನಟನೆಯ ಕಾಮಿಡಿ ಆಕ್ಷನ್ ಸಿನಿಮಾ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಈದ್ ಪ್ರಯುಕ್ತ ಇದೇ ಶುಕ್ರವಾರ  ಬಿಡುಗಡೆ ಆಗಲಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಐನಾಕ್ಸ್, ಪಿವಿರ್, ಸಿನೆಪೊಲೀಸ್ ಇನ್ನಿತರೆ ಕೆಲವು ಪ್ರಮುಖ ಮಲ್ಟಿಪ್ಲೆಕ್ಸ್​ಗಳಲ್ಲಿ ಬುಧವಾರದ ವೇಳೆಗೆ ಈ ಸಿನಿಮಾದ 23000 ಕ್ಕೂ ಹೆಚ್ಚು ಟಿಕೆಟ್​ಗಳು ಮಾರಾಟವಾಗಿವೆ. ಇನ್ನೆರಡು ದಿನಗಳಲ್ಲಿ ಮುಂಗಡ ಟಿಕೆಟ್ ಮಾರಾಟ ಸಂಖ್ಯೆ ಇನ್ನೂ 20,000 ಸಾವಿರ ಹೆಚ್ಚಾಗುವ ನಿರೀಕ್ಷೆ ಇದೆ. ಹಾಗಾಗಿ ಈ ಸಿನಿಮಾ ಪಠಾಣ್ ಮಾದರಿಯಲ್ಲಿಯೇ ದೊಡ್ಡ ಓಪನಿಂಗ್ ಪಡೆವ ನಿರೀಕ್ಷೆ ಚಿತ್ರಪ್ರೇಮಿಗಳಿಗೆ ಇದೆ.

ಮಲ್ಟಿಪ್ಲೆಕ್ಸ್​ಗಳಲ್ಲಿ ಈವರೆಗೆ ಮುಂಗಡವಾಗಿ ಸೇಲ್ ಆಗಿರುವ ಟಿಕೆಟ್​ಗಳ ಮೊತ್ತವೇ ಸುಮಾರು 50 ಲಕ್ಷಕ್ಕೂ ಹೆಚ್ಚಿದ್ದು ಇನ್ನೆರಡು ದಿನಗಳಲ್ಲಿ ಅಡ್ವಾನ್ಸ್ ಬುಕಿಂಗ್ ಸಂಖ್ಯೆ ಇನ್ನಷ್ಟು ಹೆಚ್ಚಾಗಿ ಅಡ್ವಾನ್ಸ್ ಬುಕಿಂಗ್​ನಿಂದಲೇ ಸುಮಾರು 2 ಕೋಟಿ ವರೆಗೂ ಕಲೆಕ್ಷನ್ ಆಗಬಹುದಾಗಿ ಅಂದಾಜು ಮಾಡಲಾಗಿದೆ. ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್​ ಸಹ ಚೆನ್ನಾಗಿಯೇ ಆಗಿದೆ ಎನ್ನಲಾಗುತ್ತಿದೆ.

ಕೆಲವೆಡೆಗಳಲ್ಲಿ ಪೂರ್ತಿ ಚಿತ್ರಮಂದಿರವನ್ನೇ ಸಲ್ಮಾನ್ ಖಾನ್ ಅಭಿಮಾನಿಗಳು ಬುಕ್ ಮಾಡಿಬಿಟ್ಟಿದ್ದಾರೆ. ಮಾಜಿ ಬಿಗ್​ಬಾಸ್ ಸ್ಪರ್ಧಿ ಅಬ್ಬಿ ರೋಜಿಕ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಮೊದಲ ಶೋಗೆ ಇಡೀ ಚಿತ್ರಮಂದಿರವನ್ನು ಬುಕ್ ಮಾಡಿದ್ದು, ಅಭಿಮಾನಿಗಳಿಗೆ ಟಿಕೆಟ್ ಅನ್ನು ಉಚಿತವಾಗಿ ಹಂಚುತ್ತಿದ್ದಾರೆ. ಈದ್​ಗೆ ಬಿಡುಗಡೆ ಆಗುವ ಸಲ್ಮಾನ್ ಖಾನ್ ಸಿನಿಮಾಗಳು ಫ್ಲಾಪ್ ಆಗಿದ್ದು ಬಹಳ ಕಡಿಮೆ. ಹಾಗಾಗಿ ಈ ಬಾರಿಯ ಈದ್​ಗೆ ಬಿಡುಗಡೆ ಆಗುತ್ತಿರುವ ಈ ಸಿನಿಮಾ ಸಹ ಸೂಪರ್ ಹಿಟ್ ಆಗಲಿದೆ ಎಂಬ ನಿರೀಕ್ಷೆ ಸಲ್ಲು ಅಭಿಮಾನಿಗಳದ್ದು.

ಇದನ್ನೂ ಓದಿ:ಸಲ್ಮಾನ್ ಖಾನ್ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಶುರು; ಇಡೀ ಥಿಯೇಟರ್ ಬುಕ್ ಮಾಡಿದ ಅಬ್ದು ರೋಜಿಕ್

ಕಿಸಿ ಕಾ ಭಾಯ್, ಕಿಸಿ ಕಿ ಜಾನ್ ಸಿನಿಮಾವು ಆಕ್ಷನ್ ಕಾಮಿಡಿ ಸಿನಿಮಾ ಆಗಿದ್ದು ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ತೆಲುಗಿನ ಸ್ಟಾರ್ ನಟ ವೆಂಕಟೇಶ್, ನಟಿ ಭೂಮಿಕಾ ಚಾವ್ಲಾ ಸಹ ನಟಿಸಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಎದುರು ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ವಿಲನ್ ಆಗಿ ಜಗಪತಿ ಬಾಬು ಹಾಗೂ ಇತರರು ನಟಿಸಿದ್ದಾರೆ. ಸಲ್ಮಾನ್ ಖಾನ್ ಸಹೋದರಿ ಪಾತ್ರದಲ್ಲಿ ಮಾಜಿ ಬಿಗ್​ಬಾಸ್ ಸ್ಪರ್ಧಿ ಶೆಹನಾಜ್ ಗಿಲ್ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Wed, 19 April 23