ಮಾಡಿದ ತಪ್ಪಿಗೆ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಆಮಿರ್ ಖಾನ್; 60ನೇ ವಯಸ್ಸಿಗೆ ಜ್ಞಾನೋದಯ

ಸಿಂಗಾಪುರ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಆಮಿರ್ ಖಾನ್ ತಮ್ಮ ವೃತ್ತಿಜೀವನದ ಕಷ್ಟದ ಕ್ಷಣಗಳನ್ನು ನೆನಪಿಸಿಕೊಂಡು ವೇದಿಕೆಯ ಮೇಲೆಯೇ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಮೂವತ್ತು ವರ್ಷಗಳ ಕಾಲ ಕುಟುಂಬವನ್ನು ನಿರ್ಲಕ್ಷಿಸಿ ಸತತವಾಗಿ ಕೆಲಸ ಮಾಡಿದ್ದರಿಂದ ಮಕ್ಕಳ ಬಾಲ್ಯದ ಅಮೂಲ್ಯ ಸಮಯ ಹಾಗೂ ಸಂಬಂಧಗಳನ್ನು ಕಳೆದುಕೊಂಡಿರುವುದಾಗಿ ನೋವು ತೋಡಿಕೊಂಡಿದ್ದಾರೆ.

ಮಾಡಿದ ತಪ್ಪಿಗೆ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಆಮಿರ್ ಖಾನ್; 60ನೇ ವಯಸ್ಸಿಗೆ ಜ್ಞಾನೋದಯ
ಆಮಿರ್ ಖಾನ್

Updated on: Oct 23, 2026 | 12:51 PM

ಮುಖ್ಯಾಂಶಗಳು

  • ವೇದಿಕೆಯ ಮೇಲೆಯೇ ಕಣ್ಣೀರಿಟ್ಟ ಆಮಿರ್
  • ಕುಟುಂಬದ ನೆನಪಿನಲ್ಲಿ ಭಾವುಕರಾದ ಬಾಲಿವುಡ್ ಸ್ಟಾರ್
  • ಮೂರು ದಶಕಗಳ ಕಠಿಣ ಪರಿಶ್ರಮ

ಬಾಲಿವುಡ್‌ ನಟ ಆಮಿರ್ ಖಾನ್ ಸಿಂಗಾಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ ಸಿನಿಮಾದ ಜರ್ನಿ ಬಗ್ಗೆ ಮಾತನಾಡುವಾಗ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಮೂರು ದಶಕಗಳ ಕಾಲ ಸತತವಾಗಿ ದುಡಿದು ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗಿಲ್ಲ ಎಂದು ವೇದಿಕೆಯ ಮೇಲೆಯೇ ಕಣ್ಣೀರು ಹಾಕಿದ್ದಾರೆ. ಈ ಘಟನೆಯು ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳಲ್ಲಿ ಅಚ್ಚರಿ ಹಾಗೂ ಅನುಕಂಪ ಮೂಡಿಸಿದೆ.

ಕೊಡ್ ಲಾಕ್‌ಡೌನ್ ಸಮಯದಲ್ಲಿ ಆಮಿರ್ ಖಾನ್ ತಮ್ಮ ಜೀವನವನ್ನು ಅವಲೋಕಿಸಿದರು. ಈ ವೇಳೆ ಕಳೆದ ಮೂವತ್ತು ವರ್ಷಗಳಿಂದ ಹುಚ್ಚನಂತೆ ಕೆಲಸ ಮಾಡಿರೋದು ಅವರ ಅರಿವಿಗೆ ಬಂತು. ‘ಒಂದು ಅಥವಾ ಎರಡು ವರ್ಷಗಳ ಕಾಲ ವೃತ್ತಿಯ ಮೇಲೆ ಸಂಪೂರ್ಣ ಗಮನ ಹರಿಸುವುದು ಸರಿ. ಆದರೆ ಮೂರು ದಶಕಗಳ ಕಾಲ ಕುಟುಂಬವನ್ನು ನಿರ್ಲಕ್ಷಿಸಿ ಕೆಲಸ ಮಾಡಿದ್ದೇನೆ. ಮಕ್ಕಳೊಂದಿಗೆ ಕಳೆಯಬೇಕಾದ ಅಮೂಲ್ಯ ಸಮಯ ಹಾಗೂ ಕೆಲವು ಸಂಬಂಧಗಳನ್ನು ಕಳೆದುಕೊಂಡಿದ್ದೇನೆ’ ಎಂದು ಆಮಿರ್ ನೋವು ತೋಡಿಕೊಂಡರು.

‘ನನ್ನ ಚೊಚ್ಚಲ ಚಿತ್ರದ ಬ್ಲಾಕ್ ಬಸ್ಟರ್ ಯಶಸ್ಸಿನ ಬಳಿಕ ಸತತ ಒಂಬತ್ತು ಸಿನಿಮಾಗಳಿಗೆ ಸಹಿ ಹಾಕಿದೆ. ಅದು ನಾನು ಮಾಡಿದ ದೊಡ್ಡ ತಪ್ಪು. ಆ ಸಿನಿಮಾಗಳು ಸಾಲು ಸಾಲಾಗಿ ಸೋತಾಗ ನನ್ನನ್ನು ಎಲ್ಲರೂ ಹೀಯಾಳಿಸಿದರು. ಆ ಸಂದರ್ಭದಲ್ಲಿ ನಾನು ಮಾನಸಿಕ ಹಾಗೂ ಭಾವನಾತ್ಮಕವಾಗಿ ಕುಗ್ಗಿದ್ದೆ. ಅದೆಷ್ಟೋ ರಾತ್ರಿಗಳು ಅತ್ತು ಕಷ್ಟ ಅನುಭವಿಸಿದ್ದೇನೆ’ ಎಂದು ಅವರು ಹಳೆಯ ಕಹಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ವೃತ್ತಿಜೀವನದ ಕಷ್ಟದ ದಿನಗಳು ಹಾಗೂ ತಪ್ಪುಗಳಿಂದ ಪಾಠ ಕಲಿತಿರುವ ಆಮಿರ್ ಖಾನ್, ಕಳೆದ ನಾಲ್ಕು ವರ್ಷಗಳಿಂದ ತಮ್ಮ ಕುಟುಂಬ ಮತ್ತು ಸ್ನೇಹಿತರಿಗಾಗಿ ಸಮಯವನ್ನು ಮೀಸಲಿಡುತ್ತಿದ್ದಾರೆ. ಈ ಅರಿವು ಎಂಭತ್ತಾರಬೇ ವತಸ್ಸಿನಲ್ಲಿ ಆಗುವ ಬದಲು ಐವತ್ತಾರನೇ ವಯಸ್ಸಿನಲ್ಲೇ ಮೂಡಿರುವುದು ಸಮಾಧಾನ ತಂದಿದೆ ಎಂದರು. ಈ ಜೀವಮಾನದ ಪಾಠವು ತಮ್ಮ ವೈಯಕ್ತಿಕ ಬದುಕಿಗೆ ಹೊಸ ತಿರುವು ನೀಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಒಂಬತ್ತು ವರ್ಷಗಳ ಬಳಿಕ ಜಪಾನ್​​ಗೆ ಮರಳುತ್ತಿರುವ ಆಮಿರ್ ಖಾನ್

ಇದೇ ಉತ್ಸವದಲ್ಲಿ ಆಮಿರ್ ಖಾನ್​​ಗೆ ಪ್ರತಿಷ್ಠಿತ ‘ಸ್ಕ್ರೀನ್ ಐಕಾನ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ ಅವರ ನಿರ್ಮಾಣದ ಐತಿಹಾಸಿಕ ‘ಲಗಾನ್’ ಚಿತ್ರದ 25ನೇ ವಾರ್ಷಿಕೋತ್ಸವದ ಪ್ರದರ್ಶನವೂ ನಡೆಯಿತು. ಆಮಿರ್ ಖಾನ್ ಅವರ ಈ ಮುಕ್ತ ಮಾತುಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:50 pm, Fri, 23 October 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us