AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂಬತ್ತು ವರ್ಷಗಳ ಬಳಿಕ ಜಪಾನ್​​ಗೆ ಮರಳುತ್ತಿರುವ ಆಮಿರ್ ಖಾನ್

ಆಮಿರ್ ಖಾನ್ ಅವರ ಕೆಲ ಸಿನಿಮಾಗಳು ಭಾರತದಲ್ಲಿ ಫ್ಲಾಪ್ ಆದರೂ ವಿದೇಶಗಳಲ್ಲಿ ಹಿಟ್ ಆಗಿದ್ದು ಸಹ ಇದೆ. ‘ಸೀಕ್ರೆಟ್ ಸೂಪರ್ ಸ್ಟಾರ್’ ಅದಕ್ಕೊಂದು ಉದಾಹರಣೆ. ಆಮಿರ್ ಖಾನ್ ಅವರ ಸಿನಿಮಾಗಳು ವಿಶೇಷವಾಗಿ ಚೀನಾ ಮತ್ತು ಜಪಾನ್​​ನ್ಲಲಿ ದೊಡ್ಡ ಹಿಟ್ ಆಗುತ್ತವೆ. ಆದರೆ ತಮ್ಮ ಎಲ್ಲ ಸಿನಿಮಾಗಳನ್ನು ಅವರು ಅಲ್ಲಿ ರಿಲೀಸ್ ಮಾಡುವುದಿಲ್ಲ. ಆಯ್ದು, ಲೆಕ್ಕಾಚಾರ ಹಾಕಿ ರಿಲೀಸ್ ಮಾಡುತ್ತಾರೆ. ಇದೀಗ ಬರೋಬ್ಬರಿ ಒಂಬತ್ತು ವರ್ಷದ ಬಳಿಕ ಆಮಿರ್ ಖಾನ್ ಅವರ ಸಿನಿಮಾ ಜಪಾನಿನಲ್ಲಿ ರಿಲೀಸ್ ಆಗುತ್ತಿದೆ.

ಒಂಬತ್ತು ವರ್ಷಗಳ ಬಳಿಕ ಜಪಾನ್​​ಗೆ ಮರಳುತ್ತಿರುವ ಆಮಿರ್ ಖಾನ್
Sitare Zameen Par
ಮಂಜುನಾಥ ಸಿ.
|

Updated on: Sep 27, 2026 | 7:46 PM

Share

ಮುಖ್ಯಾಂಶಗಳು

  • ಆಮಿರ್ ಖಾನ್ ನಟನೆಯ ಸಿನಿಮಾ ಜಪಾನಿನಲ್ಲಿ
  • ಒಂಬತ್ತು ವರ್ಷದ ಬಳಿಕ ಜಪಾನಿಗೆ ಆಮಿರ್ ಖಾನ್
  • ಬಿಡುಗಡೆ ಆಗುತ್ತಿದೆ ಸಿತಾರೆ ಜಮೀನ್ ಪರ್ ಸಿನಿಮಾ

ಆಮಿರ್ ಖಾನ್ ಬಾಲಿವುಡ್​​ನ ಸ್ಟಾರ್ ನಟ, ಭಾರತದ ಈ ವರೆಗಿನ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಆಮಿರ್ ಖಾನ್​ ನಟಿಸಿರುವ ‘ದಂಗಲ್’. ಆದರೆ ಕಳೆದ ಕೆಲ ವರ್ಷಗಳಿಂದ ದೊಡ್ಡ ಹಿಟ್ ಅವರಿಗೆ ನೀಡಲಾಗಿಲ್ಲ. ಆಮಿರ್ ಖಾನ್ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸ್ಟಾರ್ ನಟ. ವಿಶೇಷವಾಗಿ ಅವರ ನಟನೆಯ ಸಿನಿಮಾಗಳು ಭಾರತದಷ್ಟೆ ವಿದೇಶದಲ್ಲಿ ಅದ್ಭುತವಾಗಿ ಪ್ರದರ್ಶನ ಕಾಣುತ್ತವೆ. ಅವರ ಕೆಲ ಸಿನಿಮಾಗಳು ಭಾರತದಲ್ಲಿ ಫ್ಲಾಪ್ ಆದರೂ ವಿದೇಶಗಳಲ್ಲಿ ಹಿಟ್ ಆಗಿದ್ದು ಸಹ ಇದೆ. ‘ಸೀಕ್ರೆಟ್ ಸೂಪರ್ ಸ್ಟಾರ್’ ಅದಕ್ಕೊಂದು ಉದಾಹರಣೆ. ಆಮಿರ್ ಖಾನ್ ಅವರ ಸಿನಿಮಾಗಳು ವಿಶೇಷವಾಗಿ ಚೀನಾ ಮತ್ತು ಜಪಾನ್​​ನ್ಲಲಿ ದೊಡ್ಡ ಹಿಟ್ ಆಗುತ್ತವೆ. ಆದರೆ ತಮ್ಮ ಎಲ್ಲ ಸಿನಿಮಾಗಳನ್ನು ಅವರು ಅಲ್ಲಿ ರಿಲೀಸ್ ಮಾಡುವುದಿಲ್ಲ. ಆಯ್ದು, ಲೆಕ್ಕಾಚಾರ ಹಾಕಿ ರಿಲೀಸ್ ಮಾಡುತ್ತಾರೆ. ಇದೀಗ ಬರೋಬ್ಬರಿ ಒಂಬತ್ತು ವರ್ಷದ ಬಳಿಕ ಆಮಿರ್ ಖಾನ್ ಅವರ ಸಿನಿಮಾ ಜಪಾನಿನಲ್ಲಿ ರಿಲೀಸ್ ಆಗುತ್ತಿದೆ.

ಆಮಿರ್ ನಟಸಿ 2025 ರಲ್ಲಿ ಬಿಡುಗಡೆ ಆಗಿದ್ದ ‘ಸಿತಾರೆ ಜಮೀನ್ ಪರ್’ ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ. 2018 ರಲ್ಲಿ ‘ದಂಗಲ್’ ಬಿಡುಗಡೆಯಾದ ಬಳಿಕ ಜಪಾನ್‌ನಲ್ಲಿ ತೆರೆಕಾಣುತ್ತಿರುವ ಅವರ ಮೊದಲ ಥಿಯೇಟ್ರಿಕಲ್ ಬಿಡುಗಡೆ ಇದಾಗಿದೆ. ಅವರ ನಿರ್ಮಾಣದ ‘ಸೀಕ್ರೆಟ್ ಸೂಪರ್‌ಸ್ಟಾರ್’ ಕೂಡ ಆಗಸ್ಟ್ 2019 ರಲ್ಲಿ ಜಪಾನಿನ ಪ್ರೇಕ್ಷಕರನ್ನು ತಲುಪಿದ್ದರೂ, ‘ಸಿತಾರೆ ಜಮೀನ್ ಪರ್’ ಒಂಬತ್ತು ವರ್ಷಗಳ ನಂತರ ಜಪಾನ್‌ನಲ್ಲಿ ಅವರ ಪ್ರಮುಖ ನಟನೆಯ ಚಿತ್ರದ ಥಿಯೇಟ್ರಿಕಲ್ ಬಿಡುಗಡೆಯಾಗಲಿದೆ.

ಜಪಾನಿನ ವಿತರಕರಾದ ಗೀಕ್ ಪಿಕ್ಚರ್ಸ್ ಸೆಪ್ಟೆಂಬರ್ 25 ರಂದು ಈ ಘೋಷಣೆ ಮಾಡಿದ್ದು, ಈ ಚಿತ್ರವು ‘ಸಿತಾರೆ: ದಿ ಮಿರಾಕಲ್ ಟೀಮ್ ಆಫ್ ಸ್ಟಾರ್ಡಸ್ಟ್’ ಹೆಸರಿನಲ್ಲಿ ಜಪಾನಿನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಇದು ಹ್ಯೂಮನ್ ಟ್ರಸ್ಟ್ ಸಿನೆಮಾ ಯುರಾಕುಚೋ, ಯೆಬಿಸು ಗಾರ್ಡನ್ ಸಿನೆಮಾ ಮತ್ತು ಜಪಾನ್‌ನ ಇತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆಮಿರ್ ಅವರ ‘ದಂಗಲ್’ ಸಿನಿಮಾ ಜಪಾನಿನಲ್ಲಿ ದೊಡ್ಡ ಹಿಟ್ ಆಗಿತ್ತು. ಈಗ ‘ಸಿತಾರೆ’ ಸಹ ಹಿಟ್ ಆಗುವ ಸಾಧ್ಯತೆ ಇದೆ. ಜಪಾನಿಗರಿಗೆ ಈ ರೀತಿಯ ಭಾವುಕ ಸಿನಿಮಾಗಳು ಬಹಳ ಇಷ್ಟವಾಗುತ್ತವೆ.

ಇದನ್ನೂ ಓದಿ:ಯುವ ನಟರೊಟ್ಟಿಗೆ ಅದೃಷ್ಟ ಪರೀಕ್ಷೆಗಿಳಿದ ಆಮಿರ್ ಖಾನ್

‘ಸಿತಾರೆ ಜಮೀನ್ ಪರ್’ ಸಿನಿಮಾ 2018ರಲ್ಲಿ ಬಿಡುಗಡೆ ಆಗಿದ್ದ ಫ್ರೆಂಚ್ ಸಿನಿಮಾ ‘ಚಾಂಪಿಯನ್ಸ್’ನ ರೀಮೇಕ್ ಆಗಿದೆ. ಸಿನಿಮಾ ಅನ್ನು ‘ಸಿತಾರೆ ಜಮೀನ್ ಪರ್’ ಚಿತ್ರವನ್ನು ಆರ್ಎಸ್ ಪ್ರಸನ್ನ ನಿರ್ದೇಶಿಸಿದ್ದು, ಆಮಿರ್ ಖಾನ್, ಜೆನೆಲಿಯಾ ದೇಶ್‌ಮುಖ್, ಗುರ್‌ಪಾಲ್ ಸಿಂಗ್, ಡಾಲಿ ಅಹ್ಲುವಾಲಿಯಾ ಮತ್ತು ಬ್ರಿಜೇಂದ್ರ ಕಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಆಶಿಶ್ ಪೆಡ್ಸೆ, ಅರೋಶ್ ದತ್ತಾ, ಆಯುಷ್ ಬನ್ಸಾಲಿ, ರಿಷಿ ಶಾಹನಿ, ಗೋಪಿ ಕೃಷ್ಣನ್ ಕೆ ವರ್ಮಾ, ರಿಷಭ್ ಜೈನ್, ವೇದಾಂತ್ ಶರ್ಮಾ, ಸಂವಿತ್ ದೇಸಾಯಿ, ನಮನ್ ಮಿಶ್ರಾ ಮತ್ತು ಸಿಮ್ರನ್ ಮಂಗೇಶ್ಕರ್ ಮುಂತಾದ ಅಂಗವಿಕಲ ಹೊಸ ನಟರು ಸಹ ನಟಿಸಿರುವುದು ವಿಶೇಷ.

ಭಾರತದಲ್ಲಿ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಈ ಸಿನಿಮಾ ವಿಶ್ವದಾದ್ಯಂತ 267.52 ಕೋಟಿ ಗಳಿಸಿತ್ತು, ಇದರಲ್ಲಿ ಭಾರತ ಒಂದರಲ್ಲೇ 200 ಕೋಟಿ ಗಳಿಸಿದ್ದು ವಿಶೇಷ. ಈಗ ಜಪಾನಿನಲ್ಲಿ ಕನಿಷ್ಟ 50 ಕೋಟಿ ಆದರೂ ಗಳಿಸುವ ನಿರೀಕ್ಷೆ ಇದೆ. ಸಿನಿಮಾ ಅನ್ನು ಒಟಿಟಿಗೆ ಮಾರಾಟ ಮಾಡುವ ಬದಲಿಗೆ ಯೂಟ್ಯೂಬ್​​ಗೆ ರಿಲೀಸ್ ಮಾಡಿದ್ದ ಆಮಿರ್ ಖಾನ್, ಯೂಟ್ಯೂಬ್ ವೀಕ್ಷಣೆಗೆ ಬೆಲೆ ನಿಗದಿ ಪಡಿಸಿದ್ದರು. ಆದರೆ ಕೆಲ ತಿಂಗಳುಗಳ ನಂತರ ಸಿನಿಮಾ ಅನ್ನು ಒಟಿಟಿಗೆ ಸಹ ರಿಲೀಸ್ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ