AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ನಟರೊಟ್ಟಿಗೆ ಅದೃಷ್ಟ ಪರೀಕ್ಷೆಗಿಳಿದ ಆಮಿರ್ ಖಾನ್

Aamir Khan Film: ಆಮಿರ್ ಖಾನ್ ಅವರಿಗೆ ಇತ್ತೀಚೆಗೆ ಗೆಲುವು ಎಂಬುದು ಮರೀಚಿಕೆ ಆದಂತಾಗಿದೆ. ನಟನಾಗಿ ಹಾಗೂ ನಿರ್ಮಾಪಕನಾಗಿ ಎರಡೂ ವಿಭಾಗದಲ್ಲೂ ಸೋಲು ಕಂಡಿದ್ದಾರೆ. ಆದರೆ ಇದೀಗ ಆಮಿರ್ ಖಾನ್, ಹಿಂದಿಯ ಜನಪ್ರಿಯ ಪ್ರಾಂಚೈಸ್​​ನ ಹೊಸ ಸಿನಿಮಾನಲ್ಲಿ ಅವರು ನಟಿಸಲಿದ್ದಾರೆ. ಅದೂ ಸಹ ಬಾಲಿವುಡ್​​ನ ಯುವನಟರ ಜೊತೆಗೆ.

ಯುವ ನಟರೊಟ್ಟಿಗೆ ಅದೃಷ್ಟ ಪರೀಕ್ಷೆಗಿಳಿದ ಆಮಿರ್ ಖಾನ್
Aamir Khan
ಮಂಜುನಾಥ ಸಿ.
|

Updated on:Sep 01, 2026 | 12:44 PM

Share

ಆಮಿರ್ ಖಾನ್ (Aamir Khan), ಇತರೆ ಇಬ್ಬರು ಸ್ಟಾರ್ ಖಾನ್​​ಗಳ ರೀತಿ ಗೆಲುವಿಗಾಗಿ ಮಾಸ್, ಕಮರ್ಶಿಯಲ್ ಸಿನಿಮಾಗಳನ್ನು ಮಾಡುವವರಲ್ಲ. ಆದರೆ ಆಗೊಮ್ಮೆ-ಈಗೊಮ್ಮೆ ಕಮರ್ಶಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ‘ಗಜಿನಿ’, ‘ಧೂಮ್ 4’ ಇನ್ನೂ ಕೆಲವು ಸಿನಿಮಾಗಳಲ್ಲಿ ಆಮಿರ್ ನಟಿಸಿದ್ದಿದೆ. ಭಾರಿ ನಿರೀಕ್ಷೆ ಇರಿಸಿದ್ದ ‘ಲಾಲ್ ಸಿಂಗ್ ಛಡ್ಡಾ’ ಹೀನಾಯ ಸೋಲು ಕಂಡಿತ್ತು. ಅದಾದ ಬಳಿಕ ನಟಿಸಿದ ಸಣ್ಣ ಬಜೆಟ್​​ನ ಸಿನಿಮಾ ‘ಸಿತಾರೆ ಜಮೀನ ಪರ್’ ಹಿಟ್ ಎನಿಸಿಕೊಂಡಿತು. ಇದೀಗ ಮತ್ತೊಮ್ಮೆ ಕಮರ್ಶಿಯಲ್ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ. ಅದೂ ಯುವ ನಟರ ಜೊತೆಗೆ.

ಹಿಂದಿಯ ಹಿಟ್ ಫ್ರಾಂಚೈಸ್​​ಗಳಲ್ಲಿ ‘ರೇಸ್’ ಸಹ ಒಂದು. ‘ರೇಸ್’ ಸರಣಿಯ ಮೂರು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿವೆ. 2008 ರಲ್ಲಿ ಬಿಡುಗಡೆ ಆಗಿದ್ದ ‘ರೇಸ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಅದಾದ ಬಳಿಕ ಎರಡು ಸಿನಿಮಾಗಳು ರಿಲೀಸ್ ಆಗಿದ್ದು, ಎರಡೂ ಸಹ ದೊಡ್ಡ ಯಶಸ್ಸನ್ನೇನೂ ಕಂಡಿಲ್ಲ. ಮೊದಲ ಹಾಗೂ ಎರಡನೇ ‘ರೇಸ್’ ಸಿನಿಮಾಗಳಲ್ಲಿ ಸೈಫ್ ಅಲಿ ಖಾನ್ ನಾಯಕನಾಗಿದ್ದರೆ ಮೂರನೇ ‘ರೇಸ್’ನಲ್ಲಿ ಸಲ್ಮಾನ್ ಖಾನ್ ನಾಯಕ ಆಗಿದ್ದರು. ಇದೀಗ ‘ರೇಸ್ 4’ನಲ್ಲಿ ಆಮಿರ್ ಖಾನ್ ನಟಿಸಲಿದ್ದಾರೆ.

ಇದನ್ನೂ ಓದಿ:ವಿದ್ಯಾರ್ಥಿ ಪ್ರತಿಭಟನೆ: ಮೌನ ವಹಿಸಿದ್ದಕ್ಕೆ ಕಾರಣ ತಿಳಿಸಿದ ಆಮಿರ್ ಖಾನ್ ಪುತ್ರಿ ಇರಾ ಖಾನ್

ನಿರ್ಮಾಪಕ ರಮೇಶ್ ತೌರಾನಿ ‘ರೇಸ್ 4’ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾನಲ್ಲಿ ಆಮಿರ್ ಖಾನ್ ನಟಿಸುವುದು ಬಹುತೇಕ ಖಾತ್ರಿ ಆಗಿದೆ. ಅಲ್ಲದೆ ಇದೇ ಸಿನಿಮಾನಲ್ಲಿ ಆಮಿರ್ ಖಾನ್ ಜೊತೆಗೆ ಬಾಲಿವುಡ್​ನ ಇಬ್ಬರು ಯುವನಟರು ನಟಿಸಲಿದ್ದಾರೆ. ಅದುವೇ ಟೈಗರ್ ಶ್ರಾಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ. ಮೂವರೂ ನಟರುಗಳಿಗೆ ಚಿತ್ರಕತೆ ಹೇಳಲಾಗಿದ್ದು, ಮೂರೂ ನಟರು ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ‘ರೇಸ್ 4’ ಸಿನಿಮಾವನ್ನು ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನ ಮಾಡಲಿದ್ದಾರೆ. ಆಮಿರ್ ಖಾನ್ ಅವರು ಖುದ್ದು ಸಿನಿಮಾದ ಚಿತ್ರಕತೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

ಆಮಿರ್ ಖಾನ್ ಕೈಯಲ್ಲಿ ಕೆಲವು ಆಸಕ್ತಿಕರ ಸಿನಿಮಾಗಳು ಇವೆ. ಅವರ ನಿರ್ಮಾಣದ ‘ಬಟ್ವಾರಾ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಅಷ್ಟೇನೂ ಯಶಸ್ವಿ ಆಗಲಿಲ್ಲ. ಅದಕ್ಕೆ ಮುಂಚೆ ತಮ್ಮ ಮಗನ ಸಿನಿಮಾ ನಿರ್ಮಾಣ ಮಾಡಿದ್ದರು. ಅದೂ ಸಹ ಫ್ಲಾಪ್ ಆಯ್ತು. ಇದೀಗ ‘ಲಲ್ಕಾರಾ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಹೊಸ ಸಿನಿಮಾ ಒಂದರ ನಿರ್ಮಾಣವನ್ನೂ ಸಹ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ‘ರೇಸ್ 4’ ಸಿನಿಮಾನಲ್ಲೂ ನಟಿಸಲು ಸಜ್ಜಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Tue, 1 September 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ