ಆಮಿರ್ ಖಾನ್ ನಿಜಕ್ಕೂ ‘ಗಜಿನಿ’ ಆಗಿರಬೇಕು, ಸೋನಂ ವಾಂಗ್ಚುಕ್ ವ್ಯಂಗ್ಯ
Sonam Wangchuk: ನಟ ಆಮಿರ್ ಖಾನ್, ‘3 ಇಡಿಯಟ್ಸ್’ ಸೋನಂ ವಾಂಗ್ಚುಕ್ ಅವರ ಜೀವನ ಆಧರಿಸಿದ್ದಲ್ಲ, ಆ ಸಿನಿಮಾ ಮಾಡುವ ಮುಂಚೆ ಸೋನಂ ವಾಂಗ್ಚುಕ್ ಪರಿಚಯವೂ ಇರಲಿಲ್ಲ ಎಂದಿದ್ದರು. ಅವರು ಹೇಳಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ, 2008 ರಲ್ಲಿ ಆಮಿರ್ ಮತ್ತು ಸೋನಮ್ ಭೇಟಿಯಾದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಹರಿದಾಡಿತ್ತು. ಈಗ ಪ್ರಖರ್ ಗುಪ್ತಾ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ, ಸೋನಮ್ ಅವರು ಆಮಿರ್ ಅವರ ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಸೋನಂ ವಾಂಗ್ಚುಕ್ (sonam wangchuk) ಮಾಡುತ್ತಿದ್ದ ಸತ್ಯಾಗ್ರಹಕ್ಕೆ ಆಮಿರ್ ಖಾನ್ ಬೆಂಬಲಿಸಬೇಕು ಎಂದು ‘3 ಇಡಿಯಟ್ಸ್’ ಸಿನಿಮಾದ ನಟ ಓಮಿ ವೈದ್ಯ ಮನವಿ ಮಾಡಿಕೊಂಡ ಬಳಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ಆಮಿರ್ ಖಾನ್, ‘3 ಇಡಿಯಟ್ಸ್’ ಸೋನಂ ವಾಂಗ್ಚುಕ್ ಅವರ ಜೀವನ ಆಧರಿಸಿದ್ದಲ್ಲ, ಆ ಸಿನಿಮಾ ಮಾಡುವ ಮುಂಚೆ ಸೋನಂ ವಾಂಗ್ಚುಕ್ ಪರಿಚಯವೂ ಇರಲಿಲ್ಲ ಎಂದಿದ್ದರು. ಅವರು ಹೇಳಿಕೆ ನೀಡಿದ ಕೆಲವೇ ಗಂಟೆಗಳ ಬಳಿಕ, 2008 ರಲ್ಲಿ ಆಮಿರ್ ಮತ್ತು ಸೋನಮ್ ಭೇಟಿಯಾದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಹರಿದಾಡಿತ್ತು. ಈಗ ಪ್ರಖರ್ ಗುಪ್ತಾ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ, ಸೋನಮ್ ಅವರು ಆಮಿರ್ ಅವರ ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
‘3 ಇಡಿಯಟ್ಸ್’ ಚಿತ್ರಕ್ಕೂ ಮುನ್ನ ನಾವು ಭೇಟಿಯೇ ಆಗಿರಲಿಲ್ಲ’ ಎಂಬ ಆಮಿರ್ ಖಾನ್ ಅವರ ಹೇಳಿಕೆಯಿಂದ ತನಗೆ ಯಾವುದೇ ಆಶ್ಚರ್ಯವಾಗಿಲ್ಲ ಎಂದು ಸೋನಮ್ ವಾಂಗ್‌ಚುಕ್ ಹೇಳಿದ್ದಾರೆ, “ನಾವು ಭೇಟಿಯೇ ಆಗಿಲ್ಲ ಎಂದು ಅವರು ಹೇಳಿದಾಗ, ನಂತರ ಕೆಲವು ವೀಡಿಯೊಗಳು ಹೊರಬಂದವು; ಅದರಲ್ಲಿ ಅವರು ‘ಗಜಿನಿ’ ಚಿತ್ರದ ಗೆಟಪ್‌ನಲ್ಲಿದ್ದುಕೊಂಡು ನನ್ನ ಭಾಷಣವೊಂದನ್ನು ವೀಕ್ಷಿಸುತ್ತಿದ್ದರು. ಬಹುಶಃ ಅವರು ಗಜಿನಿ ಗೆಟಪ್‌ನಲ್ಲಿದ್ದ ಕಾರಣ ಅವರಿಗೆ ಶಾರ್ಟ್ ಟರ್ಮ್ ಮೆಮೊರಿ ಲಾಸ್ ಆಗಿರಬಹುದು, 15 ನಿಮಿಷಗಳ ಹಿಂದೆ ನಡೆದಿದ್ದನ್ನು ಮರೆತು ಹೋಗಿರಬಹುದು. ಹಾಗಾಗಿ, ನನಗೆ ಯಾವುದೇ ಆಶ್ಚರ್ಯವಾಗಿಲ್ಲ. ಅಸಲಿಗೆ ನಾವು ಬಹಳ ವಿವರವಾಗಿ ಭೇಟಿಯಾಗಿ ಮಾತನಾಡಿದ್ದೆವು’ ಎಂದರು.
ಆಮಿರ್ ಅವರ ಹೇಳಿಕೆಯನ್ನು ಸ್ಮರಿಸುತ್ತಾ ಸೋನಮ್, “ಅವರು ತಮ್ಮ ಪಾತ್ರಗಳಲ್ಲಿ ಎಷ್ಟು ಆಳವಾಗಿ ಲೀನರಾಗುತ್ತಾರೆ ಎಂದು ನಾವು ಕೇಳಿದ್ದೇವೆ. ಹಾಗಾಗಿ ಅವರು ‘ಗಜಿನಿ’ ಪಾತ್ರದಲ್ಲಿ ಎಷ್ಟು ಮುಳುಗಿದ್ದರೆಂದರೆ, ನಾನು ಪ್ರಶಸ್ತಿ ಸ್ವೀಕರಿಸುತ್ತಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದಾಗ ಅವರು ನನ್ನನ್ನೂ ಮರೆತುಹೋಗಿರಬಹುದು. ಇಲ್ಲದಿದ್ದರೆ, ನಾವು ದೀರ್ಘವಾಗಿ ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದೆವು. ಅವರು ಇದನ್ನು ಆಧರಿಸಿ ಬಯೋಪಿಕ್ ಮಾಡಿದರು ಎಂದು ನಾನು ಹೇಳುವುದಿಲ್ಲ. ಇದನ್ನು ಸ್ಫೂರ್ತಿ ಎಂದು ಕರೆಯಲಾಗುತ್ತದೆ. ಅವರ ಬಳಿ ಸ್ಕ್ರಿಪ್ಟ್ ಇತ್ತು, ಹಾಗಾಗಿ ಅವರು ಅದಕ್ಕೆ ಕೆಲವು ವಿಚಾರಗಳನ್ನು ಸೇರಿಸಿರಬೇಕು. ಯಾರನ್ನಾದರೂ ಭೇಟಿಯಾದ ನಂತರ ಅಥವಾ ಸಂಭಾಷಣೆ ನಡೆಸಿದ ನಂತರ ತಮಗೆ ಸಿಕ್ಕ ಕಲ್ಪನೆಯನ್ನು ಅವರು ಸೇರಿಸಿದ್ದಾರೆ ಎಂಬುದು ಅವರ ಸಹ-ಲೇಖಕರಿಗೆ ಅಥವಾ ನಿರ್ದೇಶಕರಿಗೆ ತಿಳಿದಿರಲಿಕ್ಕಿಲ್ಲ. ಆದರೆ ಅವರ ಹೇಳಿಕೆಯಿಂದ ನನಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ’ ಎಂದರು.
ಇದನ್ನೂ ಓದಿ:ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರಿಸಿದರೆ ಏನಾಗುತ್ತದೆ? ಸರ್ಕಾರ ಬಲವಂತವಾಗಿ ಆಹಾರ ನೀಡಬಹುದೇ?
ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ (BFI) ನಡೆದ ಸಂವಾದದ ಸಂದರ್ಭದಲ್ಲಿ, ಆಮಿರ್ ಖಾನ್ ಅವರನ್ನು ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಹಾಗೂ ಅವರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹದ ಬಗ್ಗೆ ಪ್ರಶ್ನಿಸಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಆಮಿರ್, ‘3 ಇಡಿಯಟ್ಸ್’ ನಿರ್ಮಾಣದ ಸಮಯದಲ್ಲಿ ಆ ಕಾರ್ಯಕರ್ತ ತನಗೆ ಪರಿಚಯವಿರಲಿಲ್ಲ ಎಂದು ನಿರಾಕರಿಸಿದ್ದರು.
‘3 ಇಡಿಯಟ್ಸ್’ ಸಿನಿಮಾ ಸೋನಂ ಅವರ ಜೀವನ ಆಧರಿಸಿದೆ ಎಂಬುದು ನಿಜವಲ್ಲ. ಅದೊಂದು ತಪ್ಪು ಕಲ್ಪನೆ. ನಾವು ಸಿನಿಮಾ ಮಾಡುತ್ತಿದ್ದ ಆ ಸಮಯದಲ್ಲಿ ಸೋನಮ್ ವಾಂಗ್‌ಚುಕ್ ಬಗ್ಗೆ ನನಗೆ ತಿಳಿದಿರಲಿಲ್ಲ. ರಾಜು (ರಾಜು ಶ್ರೀವಾಸ್ತವ್) ಆಗಲಿ, ಅಭಿಜಿತ್ (‘3 ಇಡಿಯಟ್ಸ್’ ಸಿನಿಮಾದ ಬರಹಗಾರರಲ್ಲಿ ಒಬ್ಬರು) ಆಗಲಿ ಅಥವಾ ನಾನಾಗಲಿ, ನಮಗೆ ಸೋನಮ್ ಅವರ ಬಗ್ಗೆ ತಿಳಿದಿರಲಿಲ್ಲ. ಸೋನಮ್ ಮಾಡುತ್ತಿರುವ ಕೆಲಸ ಒಳ್ಳೆಯದು. ನಾವು ಅವರನ್ನು ಮತ್ತು ಅವರು ಮಾಡಿರುವ ಕೆಲಸವನ್ನು ಗೌರವಿಸಲು ಅವರು ‘3 ಇಡಿಯಟ್ಸ್’ ಚಿತ್ರದ ಪಾತ್ರವನ್ನು ಆಧರಿಸಿರಬೇಕಾಗಿಲ್ಲ’ ಎಂದಿದ್ದರು.
ರಾಜಕುಮಾರ್ ಹಿರಾನಿ ನಿರ್ದೇಶನದ ‘3 ಇಡಿಯಟ್ಸ್’ ಬಾಲಿವುಡ್‌ನ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಒಂದಾಗಿದೆ. 2009 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಆಮಿರ್ ಖಾನ್, ಆರ್. ಮಾಧವನ್, ಶರ್ಮನ್ ಜೋಶಿ, ಕರೀನಾ ಕಪೂರ್ ಖಾನ್ ಮತ್ತು ಬೋಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕತೆ ಸೋನಂ ಅವರ ಜೀವನದಿಂದ ಸ್ಪೂರ್ತಿ ಪಡೆದಿದೆ ಎನ್ನಲಾಗುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




