ಆಮಿರ್ ಖಾನ್ಗೆ (Aamir Khan) ಈಗ 59 ವರ್ಷ. ಈಗಲೂ ಅವರು ಸಖತ್ ಯಂಗ್ ಆಗಿ ಕಾಣಿಸುತ್ತಾರೆ. ಆಮಿರ್ ಖಾನ್ ಅವರು ಇಷ್ಟು ಯಂಗ್ ಆಗಿ ಕಾಣೋಕೆ ಅವರು ಫಾಲೋ ಮಾಡೋ ಫುಡ್, ವರ್ಕೌಟ್ ಕಾರಣ ಎಂದು ಎಲ್ಲರೂ ನಂಬಿದ್ದರು. ಆದರೆ, ಅವರು ಇದನ್ನು ಸುಳ್ಳು ಎಂದಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಸಿನಿಮಾ ಇದ್ದಾಗ ಮಾತ್ರ ಆಮಿರ್ ಖಾನ್ ಅವರು ವರ್ಕೌಟ್ ಮಾಡುತ್ತಾರೆ. ಉಳಿದ ಸಂದರ್ಭದಲ್ಲಿ ಈ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲವಂತೆ.
ಇತ್ತೀಚೆಗೆ ಆಮಿರ್ ಖಾನ್ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘59ನೇ ವಯಸ್ಸಿನಲ್ಲೂ ಇಷ್ಟು ಯಂಗ್ ಆಗಿ ಕಾಣೋಕೆ ಕಾರಣ ಏನು’ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಅವರ ಉತ್ತರ ಅನೇಕರಿಗೆ ಅಚ್ಚರಿ ತಂದಿದೆ.
‘ಅಪ್ಪನ ಜೀನ್ ಚೆನ್ನಾಗಿತ್ತು. ನನಗೆ ಯಾವುದೇ ಕ್ರೆಡಿಟ್ ಬೇಡ. ನಾನು ವರ್ಕೌಟ್ ಮಾಡಲ್ಲ. ಮುಖಕ್ಕೆ ಯಾವುದೇ ಕ್ರೀಮ್ ಹಾಕಲ್ಲ. ನಾನು ನಟನಾದಮೇಲೆ ಶಾಂಪೂ ಬಗ್ಗೆ ಗೊತ್ತಾಗಿದ್ದು. ಅಲ್ಲಿಯವರೆಗೆ ತಲೆ ಕೂದಲಿಗೂ ಸೋಪ್ ಹಾಕುತ್ತಿದ್ದೆ. ನಾನು ಉತ್ತಮವಾಗಿ ಕಾಣಲಿ ಎಂದು ಏನನ್ನೂ ಮಾಡುವುದಿಲ್ಲ. ಸಿನಿಮಾ ಬಂದಾಗ ವರ್ಕೌಟ್ ಮಾಡುತ್ತೇನೆ. ನಾನು ಸಖತ್ ಲೇಜಿ’ ಎಂದಿದ್ದಾರೆ ಆಮಿರ್ ಖಾನ್.
ಇದನ್ನೂ ಓದಿ: ‘ನನ್ನ ಅಕ್ಕ ಪಠಾಣ್ ಸಿನಿಮಾದಲ್ಲಿ ನಟಿಸಿದ್ದರು’; ಅಚ್ಚರಿಯ ವಿಚಾರ ಹೊರ ಹಾಕಿದ ಆಮಿರ್ ಖಾನ್
‘3 ಈಡಿಯಟ್ಸ್’ ಮಾಡುವಾಗ ಆಮಿರ್ ಖಾನ್ ವಯಸ್ಸು 44. ಅವರು ಸಿನಿಮಾದಲ್ಲಿ 18 ವರ್ಷದ ಕಾಲೇಜು ಹುಡುಗನ ಪಾತ್ರ ಮಾಡಬೇಕಿತ್ತು. ಜನರು ತಮ್ಮನ್ನು ನೋಡಿ ನಗಬಹುದು ಎಂದು ಅವರು ಅಂದುಕೊಂಡಿದ್ದರು. ‘ನನಗೆ 3 ಈಡಿಯಟ್ಸ್ ಮಾಡುವ ಉದ್ದೇಶ ಇರಲಿಲ್ಲ. 44 ವರ್ಷದ ವ್ಯಕ್ತಿ 18 ವರ್ಷದ ಕಾಲೇಜು ಹುಡುನ ಪಾತ್ರ ಮಾಡುತ್ತಾನೆ ಎಂದಾಗ ಜನರು ನಗುತ್ತಾರೆ ಎಂದುಕೊಂಡಿದ್ದೆ. ಮೂವರು ಯಂಗ್ ಹೀರೋಗಳನ್ನು ತೆಗೆದುಕೊಳ್ಳುವಂತೆ ರಾಜ್ಕುಮಾರ್ ಹಿರಾನಿಗೆ ಹೇಳಿದ್ದೆ. ಆದರೆ, ಕಥೆ ಕೇಳಿದ ಬಳಿಕ ಪಾತ್ರ ಮಾಡಬೇಕು ಎನಿಸಿತು’ ಎಂದಿದ್ದಾರೆ ಆಮಿರ್ ಖಾನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.